ಪಾಪ್ಯುಲರ್ ್ರಂಟ್ ಆ್ ಇಂಡಿಯಾದ ಪ್ರಾಯೋಜಕತ್ವದಲ್ಲಿ ಬೆಂಗಳೂರು ವೆಸ್ಟ್ ಲಯನ್ಸ್ ಐ ಹಾಸ್ಪಿಟಲ್‌ನ ಸಹಕಾರದೊಂದಿಗೆ ರಿಹಾಬ್ ಇಂಡಿಯಾ ೌಂಡೇಶನ್ ಬೆಂಗಳೂರಿನ ಬನ್ನೇರುಘಟ್ಟದ ಮೆಟ್ರೋ ಡಯಾಗ್ನಾಸ್ಟಿಕ್‌ನಲ್ಲಿ ಉಚಿತ ಕಣ್ಣು ಚಿಕಿತ್ಸಾ ಶಿಬಿರವನ್ನು ಆಯೋಜಿಸಿತು.
ಬಡ ಹಾಗೂ ಹಿಂದುಳಿದ ವರ್ಗಗಳಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿಯುಂಟುಮಾಡುವ ನಿಟ್ಟಿನಲ್ಲಿ ರಿಹಾಬ್ ಇಂಡಿಯಾ ೌಂಡೇಶನ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ವೆಸ್ಟ್ ಲಯನ್ಸ್ ಐ ಹಾಸ್ಪಿಟಲ್ ನವೈದ್ಯರ ತಂಡವೊಂದು ರೋಗಿಗಳನ್ನು ಪರಿಶೀಲಿಸಿತು ಮತ್ತು ಉಚಿತ ಚಿಕಿತ್ಸೆಯನ್ನು ನೀಡಿತು.
400ಕ್ಕೂ ಅಕ ರೋಗಿಗಳು ಶಿಬಿರದ ಪ್ರಯೋಜನ ಪಡೆದರು. ಅವರಲ್ಲಿ ಶಸಚಿಕಿತ್ಸೆಯ ಅಗತ್ಯವಿದ್ದ 35 ರೋಗಿಗಳಿಗೆ ಶಸಚಿಕಿತ್ಸೆಗೆ ಪೂರ್ವಭಾವಿಯಾಗಿ ನೀಡಬೇಕಾದ ಚಿಕಿತ್ಸೆಯನ್ನು ಉಚಿತವಾಗಿ ನೀಡುವುದರೊಂದಿಗೆ, ವೆಸ್ಟ್ ಲಯನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಲ್ಲ್ಲಿ ಚಿಕಿತ್ಸೆ, ವಸತಿ ಹಾಗೂ ಪ್ರಯಾಣ ವೆಚ್ಚಯವನ್ನು ರೋಗಿಗಳಿಗೆ ನೀಡಲಾಗುತ್ತದೆ. ಶಸಚಿಕಿತ್ಸೆಯ ನಂತರವೂ ರೋಗಿಗಳಿಗೆ ಅಗತ್ಯ ಚಿಕಿತ್ಸೆಯನ್ನು ನೀಡಲಾಗುವುದು.
ಾರ್ಯಕ್ರಮದಲ್ಲಿ ಮಾತನಾಡಿದ ರಿಹಾಬ್ ಇಂಡಿಯಾ ೌಂಡೇಶನ್‌ನ ನಿರ್ದೇಶಕ ಸಾಕಿಬ್, ವಿದ್ಯಾಭ್ಯಾಸದ ಕೊರತೆಯಿಂದಾಗಿ ಹಿಂದುಳಿದ ವರ್ಗಗಳು ಮತ್ತು ಬಡವರು ಯಾವ ರೀತಿಯಲ್ಲಿ ಆರೋಗ್ಯವಂತ ಜೀವನದಿಂದ ವಂಚಿತರಾಗಿದ್ದಾರೆ ಎಂಬುದನ್ನು ತಿಳಿಸಿದರು. ಸಂಘಟನೆಯು ಭವಿಷ್ಯದಲ್ಲಿ ಇಂತಹ ಇನ್ನೂ ಹಲವು ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ಅವರು ಹೇಳಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ