ಕೊಣಾಜೆ ಠಾಣಾಧಿಕಾರಿ ಎಸ್‌ಎಫ್ ಲೋಹಾರ್ ಅನಿರ್ದಿಷ್ಟ ರಜೆಯಲ್ಲಿ ತೆರಳಿದ್ದ ಸಂದರ್ಭ ಪ್ರಭಾರ ಎಸ್‌ಐಯಾಗಿ ಠಾಣೆಗೆ ಬಂದಿದ್ದ ಸುನಿಲ್ ಪಾಟೀಲ್ ಬೆರಳೆಣಿಕೆಯ ದಿನಗಳಲ್ಲೇ ತಮ್ಮ ದಕ್ಷತೆಯಿಂದಾಗಿ ಸ್ಥಳೀಯರ ಪ್ರಶಂಸೆಗೆ ಕಾರಣವಾಗಿದ್ದರು.
ಪಾಟೀಲ್ ಕೊಣಾಜೆ ಠಾಣೆಗೆ ಬಂದ ಬಳಿಕ ಕಾನೂನಿನ ನೆಪದಲ್ಲಿ ವಾಹನ ಚಾಲಕರು, ಸಾರ್ವಜನಿಕರಿಗೆ ಪೊಲೀಸರಿಂ ದಲೇ ನಡೆಯುತ್ತಿದ್ದ ವಸೂಲಿ ಬಾಜಿಗೆ ಕಡಿ ವಾಣ ಬಿದ್ದಿತ್ತು. ಮಾಡಬಾರದ ಕೆಲಸವನ್ನು ಮಾಡಿ ಪೊಲೀಸ್ ಅತಿಥಿಯಾಗುತ್ತಿದ್ದ ಪುಂಡು-ಪೋಕರಿಗಳ ಪರ ವಕಾಲತ್ತಿಗಾಗಿ ಠಾಣೆಗೆ ವಕ್ಕರಿಸುತ್ತಿದ್ದ ಜನಪ್ರತಿನಿಧಿಗಳು, ಚಿಲ್ಲರೆ ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದ್ದರು.
ಕಳೆದ ಕೆಲ ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿರುವ, ಹಿಂದಿನ ಜಿಲ್ಲಾ ಧಿಕಾರಿ ಮೇಲೇ ಹಲ್ಲೆ ಮಾಡಲು ಮುಂದಾಗಿದ್ದ ಪ್ರಭಾವಿ ಮರಳು ಮಾಫಿಯಾ ವಿರುದ್ಧ ಸಮರ ಸಾರಿದ್ದ ಸುನೀಲ್ ಪಾಟೀಲ್ ಹಲವರಿಗೆ ತಲೆ ನೋವಾಗಿದ್ದರು. ಪೊಲೀಸರ ಜೊತೆಯೇ ಒಳ ಒಪ್ಪಂದ ಮಾಡಿ ಕೇರಳಕ್ಕೆ ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಮರಳಿಗೆ ಪಾಟೀಲ್ ಕಡಿವಾಣ ಹಾಕಿದ್ದರು. ಇದೆಲ್ಲದರಿಂದ ಬೇಸತ್ತಿದ್ದ ರಾಜಕಾರಣಿಗಳು, ಮರಳು ದಂಧೆಕೋರರು, ಹಾಗೂ ಅವರ ಹಿಂಬಾಲಕರು ಪಾಟೀಲ್‌ರನ್ನು ವರ್ಗಾಯಿಸಬೇಕೆನ್ನುವ ವ್ಯರ್ಥ ಪ್ರಯತ್ನ ಮಾಡಿ ಹಲ್ಲು ಕಚ್ಚಿಕೊಂಡಿದ್ದರು. ಕಳೆದ ತಿಂಗಳು ರಾಜ್ಯ ಸರಕಾರವೇ ಪ್ರಾಯೋ ಜಿಸಿದ್ದ ಬಂದ್‌ನ ಎರಡು ದಿನಗಳ ಬಳಿಕ ಅಸೈಗೋಳಿಯಲ್ಲಿ ನಡೆದ ಕಾಂಗ್ರೆಸ್-ಬಿ.ಜೆ.ಪಿ ಮಾರಾಮಾರಿಯ ಸಂದರ್ಭ ಎರಡೂ ಪಕ್ಷದ ಪರ ಲಾಬಿ ನಡೆಸಲು ಬಂದಿದ್ದ ರಾಜಕಾರಣಿಗಳನ್ನೂ ಅವರು ಕೇರ್ ಅಂದಿರಲಿಲ್ಲ. ಇದು ಜನಸಾಮಾನ್ಯ ರಿಗೆ ಮೆಚ್ಚುಗೆಯಾಗಿದ್ದರೂ ರಾಜ ಕಾರಣಿಗಳಿಗೆ ಪಥ್ಯವಾಗಿರಲಿಲ್ಲ.
ಇದೇ ಸಂದರ್ಭವನ್ನು ಸಮರ್ಥ ವಾಗಿ ಬಳಸಿಕೊಂಡ ಮರಳು ದಂಧೆ ಕೋರರು ರಾಜಕಾರಣಿಗಳ ಕಿವಿಯೂದಿ ರಾಜ್ಯಮಟ್ಟದಲ್ಲಿ ತಮ್ಮ ಪ್ರಭಾವವನ್ನು ಬಳಸಿದ್ದು ಇದರಿಂದಾಗಿ ಪಾಟೀಲ್ ವರ್ಗಾವಣೆಯ ಆದೇಶ ಹೊರ ಬಂದಿದೆ. ಮರಳು ದಂಧೆಯಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಮುಖಂಡರೇ ನಿರತರಾಗಿದ್ದು ಅವರಿಗೆ ಪಾಟೀಲ್ ಸೊಪ್ಪು ಹಾಕದಿದ್ದ ಕಾರಣ ಸರಕಾರವೇ ಖುದ್ದಾಗಿ ವರ್ಗಾವಣೆ ಆದೇಶ ಹೊರಡಿಸಿದೆ ಎಂದು ಹೇಳಲಾ ಗಿದೆ. ಪಾಟೀಲ್ ಅವರ ವರ್ಗಾವಣೆಯ ಸುದ್ಧಿ ತಿಳಿಯುತ್ತಿದ್ದಂತೆಯೇ ನಿನ್ನೆ ಸಂಜೆ ಠಾಣಾ ವ್ಯಾಪ್ತಿಗೊಳಪಡುವ ಗ್ರಾಮಗಳ ಸಾರ್ವಜನಿಕರು, ರಿಕ್ಷಾ-ಟೆಂಪೋ ಚಾಲಕರ ಸಹಿತ ಎಲ್ಲಾ ವರ್ಗ, ಸಮು ದಾಯದ ಅನ್ಯಾಯದ ವಿರೋಧಿಗಳು ಠಾಣೆಯೆದುರು ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ವರ್ಗಾವಣೆ ಆದೇಶ ರದ್ದು ಪಡಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ವರ್ಗಾವಣೆಗೆ ಪ್ರಮುಖ ಕಾರಣ
ಎಸ್.ಐ ಸುನಿಲ್ ಪಾಟೀಲ್ ಒಂದೆಡೆ ಮರಳು ಮಾಫಿಯಾಕ್ಕೆ ಜಗ್ಗದ ಹಿನ್ನೆಲೆಯಲ್ಲಿ ವರ್ಗಾವಣೆ ಕಾರಣವಾ ದರೆ ಇದಕ್ಕೆ ಬಲ ನೀಡುವ ಮೂಲ ಕಾರಣ ಇತ್ತೀಚೆಗೆ ಅಸೈಗೋಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರನ್ನು ಬಿಡುಗಡೆಗೊಳಿಸಲು ತೆರಳಿದ್ದ ಸಂಸದರ ಆಪ್ತಕಾರ‍್ಯದರ್ಶಿ ದಯಾನಂದ ಕೊಣಾಜೆ ಎಂಬವರನ್ನು ಎಸ್.ಐ ಬಂಧಿಸಿದ್ದರು. ಇದರಿಂದ ಕೆರಳಿದ ರಾಜಕೀಯ ನೇತಾರರು ಹೆಚ್ಚಿನ ಬಲವನ್ನು ಉಪಯೋಗಿಸಿ ಆದಷ್ಟು ಬೇಗ ವರ್ಗಾವಣೆ ಮಾಡಿಸು ವಲ್ಲಿ ಕೈಹಾಕಿದ್ದಾರೆ.
ನಾಯಕರಿಲ್ಲದ ಪ್ರತಿಭಟನೆ
ವಿಶೇಷವೆಂದರೆ ಕೆಲವೆಡೆ ಪೂರ್ವಯೋಜಿತ ಎಂಬಂತೆ ಸಂಘಟನೆಗಳು ಅಥವಾ ಪಕ್ಷಗಳು ಮುಂದೆ ನಿಂತು ಪ್ರತಿಭಟನೆ ನಡೆಸಿದರೆ, ನಿನ್ನೆ ನಡೆದ ಪ್ರತಿಭಟನೆಯಲ್ಲಿ ಯಾವ ಪಕ್ಷದ ನಾಯಕರಾಗಲಿ, ಸಂಘಟನೆಯ ಮುಖಂಡರಾಗಲಿ ಉಪಸ್ಥಿತರಿಲ್ಲದೆ, ೫೦೦ಕ್ಕೂ ಹೆಚ್ಚು ಭಾಗವಹಿಸಿದ್ದವರು ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು ಹಾಗೂ ನೆಮ್ಮದಿ ಕಂಡ ನಾಗರಿಕರು.
ಕಾನೂನು ಪಾಲಕರಿಗೆ ನೆಲೆ ಇಲ್ಲ
ನೀತಿ-ನ್ಯಾಯ, ಶಿಸ್ತಿನ ಪಕ್ಷ ಎಂದು ಬಡಾಯಿ ಕೊಚ್ಚಕೊಳ್ಳುತ್ತಿದ್ದ ಬಿ.ಜೆ.ಪಿ. ಅಧಿಕಾರದ ಗದ್ದುಗೇರಿದ ಬಳಿಕ ಮೂರನ್ನೂ ಬಿಟ್ಟು ತಮ್ಮ ಖಜಾನೆಗೆ ಗಂಟು ಕೊಡುವವರ ಪರವಾಗಿ ನಿಂತಿದ್ದಾರೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಕೆಲವು ದಿನಗಳ ಹಿಂದೆ ಬಂಟ್ವಾಳ ಠಾಣೆಯಲ್ಲಿ ಎಎಸ್‌ಪಿ ಅಮಿತ್ ಸಿಂಗ್ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿ ಹಲವಾರು ಕೇಸುಗಳನ್ನು ತಲೆಮೇಲೆ ಹಾಕಿಕೊಂಡಿದ್ದ ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದಾಗ ಅದಕ್ಕೆ ಬಿ.ಜೆ.ಪಿ. ಮುಖಂಡರೋರ್ವರು ತಡೆಯೊಡ್ಡಿದ್ದರು. ಇದನ್ನೇ ರಂಪಾಟ ಮಾಡಿದ್ದ ಸಂಸದ, ಶಾಸಕರು ಎಎಸ್‌ಪಿ ಅಮಿತ್ ಸಿಂಗ್ ಮನೆಯೆದುರು ರಾತೋರಾತ್ರಿ ಧರಣಿ ನಡೆಸಿದ್ದರು. ಆದರೂ ತಮ್ಮ ಪಕ್ಷದ ಮುಖಂಡರಿಗೆ ಮೂಗುದಾರ ತೊಡಿಸಬೇಕಾಗಿದ್ದ ಸರಕಾರ ಅಮಿತ್ ಸಿಂಗ್ ಅವರನ್ನು ವರ್ಗಾವಣೆ ಮಾಡಿತ್ತು. ಇದೀಗ ತಮ್ಮ ಪಕ್ಷದ ಬೆರಳೆಣಿಕೆಯ ಅದೂ ಅಕ್ರಮ ದಂಧೆಕೋರರಿಗೆ ಬೇಕಾಗಿ ಕೋಣಾಜೆ ಠಾಣಾಧಿಕಾರಿಯನ್ನು ವರ್ಗಾಯಿಸಲಾಗಿದೆ. ಇದರ ಮೂಲಕ ತಮ್ಮದು ಅನ್ಯಾಯಕೋರರ ಆಡಳಿತ ಎಂಬುದನ್ನು ಬಿ.ಜೆ.ಪಿ. ಸಾಬೀತುಪಡಿಸಿದೆ ಎನ್ನುವ ಲೇವಡಿಭರಿತ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಕಣ್ಣೀರಿಟ್ಟ ಸುನಿಲ್ ಪಾಟೀಲ್
ವರ್ಗಾವಣೆಯ ಸುದ್ದಿ ಜನರಿಗೆ ತಿಳಿಯುತ್ತಲೇ ೫೦೦ಕ್ಕೂ ಹೆಚ್ಚು ಸಾರ್ವಜನಿಕರು ಠಾಣೆ ಯೆದುರು ಜಮಾಯಿಸಿ ಸುನೀಲ್ ಪಾಟೀಲ್ ಬೇಕೇ ಬೇಕು ಎಂದು ಘೋಷಣೆ ಕೂಗಿದರು. ನಂತರ ಸ್ಥಳಕ್ಕಾಗಮಿಸಿ ಮೇಲಧಿಕಾರಿಗಳಲ್ಲಿ ಎಸ್‌ಐ ಅವರ ಜನಪ್ರೀತಿಯ ಬಗ್ಗೆ ಒಬ್ಬೊಬ್ಬ ಪ್ರತಿಭಟನಾಕಾರರು ವಿವರಿಸುತ್ತಾ ತಮ್ಮ ನೆಚ್ಚಿನ ಪಾಟೀಲ್ ಅವರನ್ನು ವರ್ಗಾ ವಣೆಗೊಳಿಸದಂತೆ ಬೇಡಿದರು. ಇದನ್ನು ದೂರದಿಂದಲೇ ಗಮನಿಸಿದ ಎಸ್‌ಐ ಪಾಟೀಲ್ ಅವರು ತನ್ನ ಮೇಲೆ ಜನರಿಟ್ಟಿದ್ದ ಪ್ರೀತಿಯನ್ನು ಕಂಡು ದುಃಖ ತಡೆಯಲಾರದೆ ಕಣ್ಣೀರಿಟ್ಟರು. ಪಾಟೀಲ್ ಪರ ಬಂದವರಲ್ಲಿ ಸಾಮಾನ್ಯರು, ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ