ಮಂಗಳವಾರ, ಫೆಬ್ರವರಿ 15, 2011

ಪ್ರೀತಿ ಎಂಬ ಅಸ್ತ್ರದ ಮೂಲಕ ಪ್ರಪಂಚ ಜಯಿಸಿದ ಪ್ರವಾದಿ ಮುಹಮ್ಮದ್(ಸ.ಅ)

ಲೇಖನ : shiha ullal
ಮನುಕುಲದ ಸರ್ವತೋಮುಖ ಸುಧಾರಣೆ ಗಾಗಿ ನಿಯುಕ್ತಿಗೊಂಡ ಅಂತಿಮ ದೇವದೂತ ರಾಗಿದ್ದಾರೆ ವಿಶ್ವಪ್ರವಾದಿ ಮುಹಮ್ಮದ್ ಪೈಗಂಬರ್(ಸ). ಹದಿನಾಲ್ಕು ಶತಮಾನಗಳ ಹಿಂದೆ ಅರೇಬಿಯಾದ ಮರಳುಗಾಡಿನಲ್ಲಿ ಅವರು ಮೊಳಗಿಸಿದ ವಿಮೋಚನೆಯ ಸಂದೇಶ ಗಳು ಇಡೀ ಮಾನವ ರಾಶಿಯನ್ನೇ ಬದಲಾ ಯಿಸಿ ಬಿಟ್ಟಿತು. ಪ್ರವಾದಿ ಮುಹಮ್ಮದ್(ಸ) ಜನ್ಮ ತಾಳಿದ ಅರಬ್ ಜನಾಂಗ ಪ್ರಪಂಚದ ನಿಷ್ಠುರ ಮನೋ ಗತಿಯ ಒಂದು ವಿಭಾಗವಾಗಿತ್ತು. ತಮಗೆ ಸರಿ ಕಂಡದ್ದನ್ನು ಮಾತ್ರ ಅಂಗೀಕರಿಸುವ, ಒಪ್ಪಲು ಆಗದ್ದನ್ನು ಯಾವುದೇ ಒತ್ತಡವಿದ್ದರೂ ತಿರಸ್ಕರಿ ಸುವ ವಿಶೇಷವಾದ ಸ್ವಭಾವ ಅವರದ್ದಾಗಿತ್ತು. ಈ ವಿಶಿಷ್ಟ ಜನ ಸಮೂಹದ ಮುಂದೆ ಸಂಕೀರ್ಣವಾದ ಸಿದ್ಧಾಂತವೊಂದನ್ನು ಮಂಡಿಸಿ ಅವರಿಗೆ ಮನವರಿಕೆ ಮಾಡಿಸಿ ಅಲ್ಲಿನ ಬಹು ಸಂಖ್ಯಾತ ಜನರು ಅದನ್ನು ಎತ್ತಿ ಹಿಡಿಯುವಂತೆ ಮಾಡುವಲ್ಲಿ ಪ್ರವಾದಿ (ಸ) ಯಶಸ್ವಿಯಾದರು. ಇದುವೇ ಅವರ ಜೀವನದ ಅತೀದೊಡ್ಡ ಅದ್ಭುತ.

ಭೂಮ ಮಂಡಲದಲ್ಲಿ ವಾಸಿಸುವ ಮನು ಷ್ಯರು ತಮ್ಮ ಬದುಕಿನ ಹಿತ- ಅಹಿತಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಕೇವಲ ಅವರ ಬುದ್ಧಿಯನ್ನು ಮಾತ್ರ ಅವಲಂಬಿಸಿದರೆ ಗುರಿ ತಲುಪಲು ಸಾಧ್ಯವಿಲ್ಲ. ಮನುಷ್ಯನ ದೀರ್ಘ ದೃಷ್ಟಿಗೂ ಒಂದು ಇತಿಮಿತಿಯಿದೆ. ಅವನ ಜೀವನದುದ್ದಕ್ಕೂ ಅಗತ್ಯವಾಗುವ ಪ್ರತಿ ಯೊಂದು ಮಾರ್ಗದರ್ಶನವನ್ನೂ ನೀಡುವ ಸಮಗ್ರವಾದ ದರ್ಶನವೊಂದರ ಅಗತ್ಯ ಆತನಿಗಿದೆ. ಅದು ತನ್ನಂತಹ ಇತರ ಮಾನವರು ರೂಪುಕೊಟ್ಟಿದ್ದಾಗಿದ್ದರೆ ಅದರಲ್ಲೂ ಸಂಪೂರ್ಣತೆ ದರ್ಶಿಸಲು ಸಾಧ್ಯವಾಗದು. ಕಾಲ ಕಳೆದಂತೆ ಮನುಷ್ಯ ಬುದ್ಧಿಯಲ್ಲಿ ಪರಿಣಾಮಕಾರಿ ಪರಿವರ್ತ ನೆಗಳು ಘಟಿಸುತ್ತಿರುತ್ತವೆ. ವಿಜ್ಞಾನ ಲೋಕದ ಇವತ್ತಿನ ಹೊಸ ಹೊಸ ಸಂಶೋಧನೆಗಳು ಕಳೆದ ಕಾಲದ ಮನುಷ್ಯರ ಪಾಲಿಗೆ ನಂಬಲೂ ಸಾಧ್ಯ ವಾಗದ ರೀತಿಯ ಮಹಾ ಆಶ್ಚರ್ಯ ಗಳಾ ಗಿವೆ. ಮನುಷ್ಯ ಬುದ್ಧಿಯ ಶೀಘ್ರ ಬೆಳವಣಿಗೆ ಯನ್ನೂ ಇದು ತೋರಿಸುತ್ತದೆ. ಹೀಗಿರುವಾಗ ಕೆಲವು ನೂರು ವರ್ಷಗಳ ಹಿಂದೆ ಯಾರಾದ ರೊಬ್ಬ ಮನುಷ್ಯ ಅಥವಾ ಮನುಷ್ಯರ ಒಂದು ಗುಂಪು ರೂಪು ಕೊಟ್ಟ ಒಂದು ಸಿದ್ಧಾಂತವು ಆನಂತರದ ಕಾಲದ ಮನುಷ್ಯನ ಬುದ್ಧಿಗೆ ಒಪ್ಪಿಗೆಯಾಗಿ ನಿತ್ಯ ನೂತನವಾಗಿ ಮುಂದುವರಿ ಯುವಂತೆ ಆಗುವುದು ಖಂಡಿತ ದೂರದ ಮಾತು.




ಈ ವಿಶೇಷವಾದ ಸನ್ನಿವೇಶದಲ್ಲಿ ‘ದೇವ ದೂತರು’ ಎಂಬ ಪರಮಾರ್ಥವನ್ನು ಒಪ್ಪಿ ಕೊಳ್ಳಲು ನಾವು ಬಾಧ್ಯಸ್ಥರಾಗುತ್ತೇವೆ. ಜಗತ್ತಿನ ಸಕಲ ಸ್ಥಿರಾಸ್ಥಿರ ವಸ್ತುಗಳನ್ನು ಸೃಷ್ಟಿಸಿ ಪರಿಪಾ ಲಿಸುತ್ತಿರುವ ಪ್ರಪಂಚದ ಸೃಷ್ಟಿಕರ್ತನೂ ಪರಿ ಪಾಲಕನೂ ಆಗಿರುವ ಒಬ್ಬ ದೇವನಿಗೆ ಮಾತ್ರ ಮನುಷ್ಯ ಕುಲಕೋಟಿಗೆ ಸರ್ವ ಕಾಲ ದಲ್ಲೂ ಸ್ವೀಕಾರಾರ್ಹವಾಗುವ ಒಂದು ಜೀವನ ಸಿದ್ಧಾಂತವನ್ನೂ ಪ್ರತಿಪಾದಿಸಿ ಅವತೀರ್ಣಗೊಳಿ ಸಲು ಸಾಧ್ಯ.
ಹೀಗೆ ಅಲ್ಲಾಹನು ತನ್ನ ಶ್ರೇಷ್ಠ ಸೃಷ್ಟಿಯಾದ ಮನುಷ್ಯನ ಲೌಕಿಕ ಮತ್ತು ಪಾರಲೌಕಿಕವಾದ ಬದುಕಿನ ಸರ್ವತ್ರ ಸುಧಾರಣೆಗೆ ತಾನು ರೂಪಿಸಿದ ತತ್ವ ಸಿದ್ಧಾಂತಗಳನ್ನು ಭೂಮಿಗೆ ತಲುಪಿಸಿ ಕೊಡಲು ನಿಯೋಜಿಸಿದ ಪವಿತ್ರ ದೂತರಾಗಿದ್ದಾರೆ ಪ್ರವಾದಿಗಳು. ಮನುಕುಲದ ಯಾವನೇ ಒಬ್ಬ ಸದಸ್ಯನೂ ದೈವಿಕ ಮಾರ್ಗದರ್ಶನದಿಂದ ವಂಚಿತರಾಗ ಬಾರದು ಎಂಬ ದೃಷ್ಟಿಯಿಂದ ಸೃಷ್ಟಿಕರ್ತನು ತನ್ನ ಮೊದಲ ಮನುಷ್ಯ ಸೃಷ್ಟಿಯನ್ನೇ ಪ್ರವಾದಿ ಯನ್ನಾಗಿ ನೇಮಕ ಮಾಡಿದ. ನಾಗರಿಕ ಮತ್ತು ಪ್ರಬುದ್ಧ ಮನುಷ್ಯನಾಗಿ ರೂಪು ತಳೆದ ಆದಂ, ಸ್ವಲ್ಪ ಕಾಲ ಸ್ವರ್ಗದಲ್ಲಿದ್ದು ಆನಂತರ ತನ್ನ ಕರ್ಮಭೂಮಿಯಾದ ಭೂಮಿಗೆ ಇಳಿದು ಬಂದಾಗ ತನ್ನ ಸಂತಾನ ಪರಂಪರೆಗೆ ದೈವಿಕ ಸಂದೇಶವನ್ನು ತಲುಪಿಸುವ ಜವಾಬ್ದಾರಿ ಯೊಂದಿಗೆ ಪ್ರವಾದಿಯಾಗಿಯೇ ಅವತರಿಸಿ ದರು. ಅವರು ಇಸ್ಲಾಮಿನ ಪ್ರಥಮ ಸಂದೇಶ ವಾಹಕರು.
ಅಲ್ಲಿಂದ ಸುಮಾರು ಏಳುವರೆ ಸಹಸ್ರ ಮಾನದಲ್ಲಿ ಒಟ್ಟು ಒಂದು ಲಕ್ಷದ ಇಪ್ಪತ್ತ ನಾಲ್ಕು ಸಾವಿರ ದೇವತೂತರು ಭೂಮಿಯ ಹಲವೆಡೆಗಳಲ್ಲಿ ನಿಯುಕ್ತರಾಗಿದ್ದಾರೆ. ಆ ಪರಂಪರೆಯ ಕಟ್ಟಕಡೆಯ ಪ್ರವಾದಿಯಾಗಿ ಬಂದವರೇ ಹಝ್ರತ್ ಮುಹಮ್ಮದ್ ರಸೂಲುಲ್ಲಾಹಿ(ಸ). ಇಸ್ಲಾಮೀ ಕ್ಯಾಲೆಂಡರಿನ ಮೂರನೆ ತಿಂಗಳಾದ ರಬೀವುಲ್ ಅವ್ವಲ್ ಹನ್ನೆರಡ ರಂದು ಕ್ರಿಸ್ತಶಕೆ 571, ಎಪ್ರಿಲ್ ತಿಂಗಳ 21ರಂದು ಸೋಮವಾರ ಸುಪ್ರಭಾತದಲ್ಲಿ ಸೌದಿ ಅರೇಬಿಯಾದ ಮಕ್ಕಾ ಎಂಬ ಊರಲ್ಲಿ ಅವರ ಜನನವಾಯಿತು.
ಇಸ್ರಾಈಲ್ ವರ್ಗದ ಪ್ರವಾದಿಯಾಗಿದ್ದ ಈಸಾ(ಅ)ರ ನಂತರ ಸುಮಾರು ಆರುನೂರು ವರ್ಷಗಳ ಕಾಲ ಜಗತ್ತಿನಲ್ಲಿ ಪ್ರವಾದಿಗಳ ಆಗಮನವಾಗಿರಲಿಲ್ಲ. ಈ ಮಧ್ಯೆ ಈಸಾ(ಅ) ಬೋಧಿಸಿದ ತತ್ವಾದರ್ಶಗಳು ಮರೆಯಾಗಿ ಅನೇಕ ಹಸ್ತಕ್ಷೇಪಗಳಿಗೂ ತಿದ್ದುಪಡಿಗೂ ಗುರಿಯಾಗಿ ಸತ್ವವನ್ನು ಕಳೆದುಕೊಂಡಾಗ ಮತ್ತೊಮ್ಮೆ ದೇವನೆಡೆಗೆ ಮಾನವನನ್ನು ಆಹ್ವಾನಿಸುವ ಸಮರ್ಥ ದೂತನೊಬ್ಬನ ಅಗತ್ಯ ಎದ್ದು ಬಂತು. ಪ್ರಪಂಚದಲ್ಲಿ ಬಿಂಬಾರಾಧನೆ ವ್ಯಾಪಕವಾಗಿದ್ದ ಕಾಲವದು. ನಂಬಿಕೆಯಲ್ಲಿನ ವೈಕಲ್ಯದಂತೆ ಕರ್ಮಗಳಲ್ಲೂ ಅಂದಿನ ಜನತೆ ದಾರಿ ತಪ್ಪಿದ್ದರು. ಮದ್ಯಪಾನ ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಮದ್ಯದ ಮೇಲಿನ ಅಮಿತಾಸಕ್ತಿಯಿಂದಾಗಿ ಸತ್ತ ಮೇಲೆ ತಮ್ಮನ್ನು ದ್ರಾಕ್ಷಿ ಬಳ್ಳಿಗಳ ಅಡಿಯಲ್ಲಿ ಹೂತು ಬಿಡುವಂತೆ ಅಪೇಕ್ಷಿಸಿ ಪ್ರಾಣ ಬಿಡುವ ಮದ್ಯಕಾಮಿಗಳೂ ಅವರಲ್ಲಿದ್ದರು.
ತೋಳ್ಬಲವಿದ್ದವರು ದುರ್ಬಲರ ಮೇಲೆ ದಬ್ಬಾಳಿಕೆ ನಡೆಸುವುದು, ಧನಾಢ್ಯರು ದರಿದ್ರರನ್ನು ಗುಲಾಮರಂತೆ ನಡೆಸಿಕೊಳ್ಳುವುದು, ಸ್ತ್ರೀಯರನ್ನು ಕೇವಲ ಭೋಗವಸ್ತುವಿಗಿಂತ ಮಿಗಿಲಾದ ರೀತಿಯಲ್ಲಿ ಕಾಣಲು ಒಪ್ಪದವರು, ಸಂದರ್ಭ ಬಂದಾಗಲೆಲ್ಲ ಸಣ್ಣಪುಟ್ಟ ವಿಷಯಗಳ ಹೆಸರಲ್ಲಿ ನೂರಾರು ವರ್ಷಗಳ ಕಾಲ ಕಾದಾಡು ವವರು...ಹೀಗೆ ಬಹು ವಿಚಿತ್ರ ನಡವಳಿಕೆಯನ್ನು ಹೊಂದಿದ್ದ ಒಂದು ಜನಾಂಗವಾಗಿತ್ತು ಪ್ರವಾದಿ ಮುಹಮ್ಮದ್ (ಸ)ಅವರ ಪ್ರವಾದಿತ್ವ ಕಾಲದ ಮೊದಲು ಅರೇಬಿಯಾದಲ್ಲಿ ವಾಸಿಸುತ್ತಿದ್ದವರು.
ಈ ಕ್ಲಿಷ್ಟಕರವಾದ ಸನ್ನಿವೇಶವನ್ನು ಅತ್ಯಂತ ತನ್ಮಯತೆಯೊಂದಿಗೆ ನಿಭಾಯಿ ಸಬೇಕಾದ ಜವಾಬ್ದಾರಿ ಪ್ರವಾದಿ (ಸ) ಮೇಲಿತ್ತು. ಕೇವಲ ಇಪ್ಪತ್ತ ಮೂರು ವರ್ಷಗಳಲ್ಲಿ ತನ್ನ ನಾಡು ಮತ್ತು ಪರಿಸರ ದಲ್ಲಿ ಬೇರೂರಿದ್ದ ಎಲ್ಲ ಕೆಡುಕುಗಳನ್ನೂ ಮೂಲೋತ್ಪಾಟನೆ ಮಾಡಿ ಪ್ರದೇಶದಲ್ಲಿ ಸಮಗ್ರ ಸುಧಾರಣೆ ತಂದು ಕೆಡುಕಿನ ಉಪಾಸಕರಾಗಿದ್ದ ಜನ ಸಮೂಹವೊಂದ ನ್ನು ಸರ್ವ ಶ್ರೇಷ್ಠ ಸಮುದಾಯವಾಗಿ ಪರಿವರ್ತಿಸಿದ ಸಾಧನೆ ಅವರದ್ದಾ ಗಿತ್ತು.

ಕೆಲವರಾದರೂ ಭಾವಿಸಿದಂತೆ ಈ ಮಹಾ ಕ್ರಾಂತಿಯ ಹಿಂದೆ ಕಾರ್ಯಾ ಚರಿಸಿದ್ದು ಜನಬಲವಾಗಲಿ, ಧನಬಲ ವಾಗಲಿ, ಬಲವಂತವಾಗಲಿ ಅಲ್ಲ. ಕೇವಲ ವಿಶ್ವವ್ಯಾಪಿಯಾದ ಪ್ರೀತಿ ಮಾತ್ರ. ಅನಿವಾರ್ಯ ಸಂದರ್ಭಗಳಲ್ಲಿ ಕೆಲವೊಂದು ಪ್ರತಿರೋಧ ಸಮರಗಳಲ್ಲಿ ಅವರು ಭಾಗವಹಿಸಿ ರಬಹುದು. ಅದು ಧರ್ಮ ಪ್ರಚಾರಕ್ಕಾಗಿ, ಸಾಮ್ರಾಜ್ಯಗಳನ್ನು ವಶಪಡಿಸು ವುದಕ್ಕಾಗಿ ಕೈಗೊಂಡ ಅಕ್ರಮಾಸಕ್ತ ಯುದ್ಧ ಗಳಲ್ಲ, ಇತರರು ಆಕ್ರಮಿಸಲು ಬಂದಾಗ ಅದನ್ನು ತಡೆದು ತಮ್ಮನ್ನು ಕಾಪಾಡಿಕೊಳ್ಳಲು ಕೈಗೊಂಡ ಸಮಯೋಚಿತ ಕ್ರಮಗಳು ಮಾತ್ರ.
ಪ್ರೀತಿಯ ಕ್ರಾಂತಿಯೊಂದಿಗೆ ವಿಶ್ವವನ್ನು ಜಯಿಸಿದ ವಿಶ್ವಗುರು ಜಗತ್ತಿಗೆ ನೀಡಿದ ಉದಾತ್ತ ಸಂದೇಶಗಳು ಇಂದು ಅತ್ಯಂತ ಪ್ರಸ್ತುತ. ಜಾತಿ-ಮತ-ಪಕ್ಷ-ಪಥಗಳಿಗೆ ಅತೀತ ವಾಗಿ ಮನುಷ್ಯರನ್ನು ಪ್ರೀತಿಸುವಂತೆ ಅವರು ಕರೆ ನೀಡಿದರು.
ಮನುಷ್ಯರೆಲ್ಲರೂ ಅಲ್ಲಾಹನ ಆಶ್ರಿತರು, ಅಲ್ಲಾಹನಿಗೆ ಅತ್ಯಂತ ಪ್ರೀತಿ ಪಾತ್ರರಾದ ಮನುಷ್ಯರೆಂದರೆ ಇತರರಿಗೆ ಒಳಿತನ್ನು ಮಾಡು ವವರಾಗಿದ್ದಾರೆ ಎಂಬ ಪ್ರವಾದಿ ವಚನವನ್ನು ಸಾಕ್ಷಾತ್ಕಾರಗೊಳಿಸಿ ಪ್ರೀತಿಯ ಪ್ರಪಂಚ ಕಟ್ಟಲು ಇಂದಿನ ಸಂಘರ್ಷಮಯ ವಾತಾವರಣದಲ್ಲಿ ಮುಂದೆ ಬರುವುದೇ ಪ್ರವಾದಿ ಅನುಯಾಯಿ ಗಳು ತಮ್ಮ ಪ್ರೀತಿಯ ನಾಯಕನಿಗೆ ನೀಡುವ ಜನ್ಮದಿನದ ಉಡುಗೊರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ