ಶುಕ್ರವಾರ, ಜನವರಿ 21, 2011

http://popularfrontindia.com/pp/Kannada

ಕ್ರಿಮಿನಲ್ ವ್ಯಕ್ತಿಗಳ ಬಂಧನವನ್ನು ನೆಪವಾಗಿಟ್ಟುಕೊಂಡು ಪಾಪ್ಯುಲರ್ ಫ್ರಂಟ್ ಸಂಘಟನೆಯ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಪತ್ರಿಕೆಯೊಂದು ನಡೆಸುತ್ತಿರುವುದನ್ನು ಸಂಘಟನೆಯು ಖಂಡಿಸುತ್ತದೆ. ಕೋಮುವಾದ, ಭಯೋತ್ಪಾದನೆ ಹಾಗೂ ತಾರತಮ್ಯ ನೀತಿ ವಿರುದ್ಧ ಹೋರಾಟ ನಡೆಸುತ್ತಾ ಮುಸ್ಲಿಮರ ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ನಿರಂತರ ಶ್ರಮಿಸುತ್ತಿರುವ ಸಂಘಟನೆಯಾಗಿದೆ ಪಾಪ್ಯುಲರ್ ಫ್ರಂಟ್.

ದೇಶದ ಸೌಹಾರ್ದತೆ ಹಾಗೂ ಶಾಂತಿಯನ್ನು ಕದಡುವ ಫ್ಯಾಶಿಷ್ಟ್ ಶಕ್ತಿಗಳ ಅಜೆಂಡಾಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಾ ಸಮಾಜದ ಎಲ್ಲಾ ಹಿಂದುಳಿದ ವರ್ಗಗಳ ಜೊತೆಗೂಡಿ ಸೌಹಾರ್ದಯುತ ದೇಶವನ್ನು ಕಟ್ಟಲು ಪಾಪ್ಯುಲರ್ ಫ್ರಂಟ್ ಹೋರಾಟ ನಡೆಸುತ್ತಿದೆ. ಇದರಿಂದ ಕೆಲ ಕೋಮುವಾದಿ ಶಕ್ತಿಗಳ ವಿಚ್ಛಿದ್ರಕಾರಿ ಪ್ರಯತ್ನಗಳಿಗೆ ತೀವ್ರ ಹಿನ್ನಡೆಯುಂಟಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ವಿವಿಧ ರೀತಿಯ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ದೇಶದಲ್ಲಿ ಭಾವೈಕ್ಯತೆಯನ್ನು ಹರಡಲು ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಫ್ರೀಡಂ ಪರೇಡ್ ಮತ್ತು ವಿವಿಧ ಕಾರ್ಯರಕ್ರಮಗಳನ್ನು ನಡೆಸಿ ನಾಡಿನ ಜನರ ಮಧ್ಯೆ ದೇಶ ಪ್ರೇಮವನ್ನು ಸಂಘಟನೆಯು ಬಡಿದೆಬ್ಬಿಸಿದೆ. ಕೇಂದ್ರ ಸರಕಾರ ರಚಿಸಿದ ಸಾಚಾರ್ ಸಮಿತಿಯ ವರದಿಯ ಆಧಾರದಂತೆ ದೇಶದ ಮುಸ್ಲಿಮರು ಶೈಕ್ಷಣಿಕ ಮತ್ತು ಆರ್ಥಿಕ ರಂಗಗಳಲ್ಲಿ ಪರಿಶಿಷ್ಠ ಜಾತಿ ಪಂಗಡಗಳಿಗಿಂತಲೂ ಹಿಂದುಳಿದಿದ್ದಾರೆ. ಮುಸ್ಲಿಮರಿಗೆ ಸಲ್ಲಬೇಕಾಗಿದ್ದ ಮೀಸಲಾತಿಯು ಇದುವರೆಗೂ ಲಭಿಸಲಿಲ್ಲ. ಇವೆಲ್ಲವನ್ನೂ ಮುಂದುಟ್ಟುಕೊಂಡು ದೇಶದಾದ್ಯಂತ ‘ಮೀಸಲಾತಿ ಅಭಿಯಾನ’ವನ್ನು ನಡೆಸಿ ಕೇಂದ್ರ ಸರಕಾರ ಮತ್ತು ರಾಷ್ಟ್ರಪತಿಯವರಿಗೆ ಮನವಿಯನ್ನು ಸಲ್ಲಿಸಿದೆ.
ಸ್ವಾತಂತ್ರಾ ನಂತರ 60 ವರ್ಷಗಳಲ್ಲಿ ಮೂಲಗೆಸೆಯಲ್ಪಟ್ಟ ಮುಸ್ಲಿಮ್ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಬಲೀಕರಣದ ಕನಸಿನೊಂದಿಗೆ ಸಮಾಜದ ಮಧ್ಯೆ ಕಾರ್ಯಾಚರಿಸಿ ಈ ದೇಶದ ಕಟ್ಟೋಣದಲ್ಲಿ ಆಹೋರಾತ್ರಿ ದುಡಿಯುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಾಮಾಣಿಕತೆಯನ್ನು ಕೋಮುವಾದಿ ಹಿನ್ನೆಲೆಯುಳ್ಳ ಈ ಪತ್ರಿಕೆಯು ಪ್ರಶ್ನಿಸಿದ್ದು ದುರದೃಷ್ಟಕರ.
ಆರೋಗ್ಯಕರ ಸಮಾಜದ ಬೆಳವಣಿಗೆಗೆ ಕಾರಣವಾಗಬೇಕಾಗಿದ್ದ ಪತ್ರಿಕೆಯು ಸಮಾಜದ ದಾರಿ ತಪ್ಪಿಸುವ ಬೇಜವಾಬ್ದಾರಿತನ ಕ್ರಮವು ಖಂಡನೀಯ, ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯೋರ್ವನ ಬಂಧನವನ್ನು ಆಧಾರವಾಗಿಟ್ಟುಕೊಂಡು ಪತ್ರಿಕೆಯೊಂದು ಸಂಘಟನೆಯನ್ನು ಸಿಮಿಯ ಜೊತೆಗೆ ಜೋಡಿಸುವ ಪ್ರಯತ್ನವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ.

http://popularfrontindia.com/pp/Kannada

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ