ಶುಕ್ರವಾರ, ಜನವರಿ 21, 2011

ಅನ್ಯಾಯ-ಆಲಯಗಳಾಗುತ್ತಿರುವ ನ್ಯಾಯಾಲಯಗಳು: ನಿವೃತ್ತ ನ್ಯಾಯಧೀಶ ಸಲ್ದಾನ

ಮಂಗಳೂರು: ವಾಸ್ತವದಲ್ಲಿ ಬಾಬರಿ ಮಸ್ಜಿದ್ ವಾಜ್ಯಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲು ಯಾವುದೇ ಗೊಂದಲಗಳಿಲ್ಲ. ಆದರೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಕಾನೂನಿಗೆ ವಿರುದ್ಧವಾದದ್ದಾಗಿದೆ. ಇದು ನ್ಯಾಯಾಲಯದಿಂದ ನಿರೀಕ್ಷಿಸುವಂತಹದ್ದಲ್ಲ. ಬದಲಾಗಿ ಇದೊಂದು ರಾಜಕೀಯ ತೀರ್ಪಾಗಿದೆ ಎಂದು ಮುಂಬೈ ಮತ್ತು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಂ.ಎಫ್.ಸಲ್ದಾನಾ ನುಡಿದರು.
ಅವರು ಪಿಯುಸಿಎಲ್, ಎನ್‌ಸಿಎಚ್‌ಆರ್‌ಒ ಮತ್ತು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಕರ್ನಾಟಕವು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಆಯೋಜಿಸಿದ ಸಾರ್ವಜನಿಕ ಹಕ್ಕೊತ್ತಾಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆಯ ಪ್ರಕಾರ ತೀರ್ಪು ನೀಡುವ ವ್ಯಕ್ತಿಯಲ್ಲಿ ತಪ್ಪು ಸಂಭವಿಸಬಹುದಾಗಿರುವುದರಿಂದ ತೀರ್ಪಿನಲ್ಲಿ 2% ಅಥವಾ 3% ಪ್ರಮಾದಗಳು ಸಂಭವಿಸಬಹುದಾಗಿದೆ. ಆದರೆ ನಮ್ಮ ದೇಶದ ಕಾನೂನು ವ್ಯವಸ್ಥೆಯಲ್ಲಿ ನೀಡುವ ತೀರ್ಪುಗಳು 96% ಶೇಕಡ ತಪ್ಪಾಗಿರುತ್ತದೆ. ಇದರಿಂದಾಗಿ ಕಾನೂನು ವ್ಯವಸ್ಥೆ ಮುರಿದು ಬೀಳುವ ಸ್ಥಿತಿ ತಲುಪಿದೆ ಎಂದು ಅವರು ಎಚ್ಚರಿಸಿದರು.

Justice Saldana
K.M.Shareef
P.B.Desa

P.B.Desa speaking
ಯಾವುದೇ ಒಂದು ಘಟನೆ ಸಂಭವಿಸಿದರೂ, ಅದನ್ನು ಸಮೀಪದಲ್ಲೇ ವೀಕ್ಷಿಸಬಲ್ಲ ಕಾವಲುಗಾರನಂತಹ ವೃತ್ತಿಯನ್ನು ಮಾಡುವ ಬಡವರನ್ನು ಬಂಧಿಸಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ಅವರು ಹೇಳಿದರು.
ಮುಂಬೈಯಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದು ನಡೆದಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಪ್ರಮುಖ ಭಾಷಣಗಾರರು ಉಪಾಂತ್ಯಕ್ಕೆ ಬಂದಿರುವುದೆಂದರೆ ಈ ದೇಶದ ನ್ಯಾಯಾಲಯಗಳು ‘ಅನ್ಯಾಯಾಲಯ’ಗಳಾಗಿ ಪರವಿರ್ತನೆಯಾಗಿದೆ ಎಂದಾಗಿತ್ತು ಎಂದು ಅವರು ತಿಳಿಸಿದರು.
ಜನರು ನ್ಯಾಯದ ನಿರೀಕ್ಷೆಯಲ್ಲಿ ಕೋರ್ಟ್‌ಗೆ ಬರುತ್ತಾರೆ. ಆದರೆ ಅಲ್ಲಿಯೂ ಅವರಿಗೆ ಅನ್ಯಾಯವಾಗುತ್ತದೆ. ನ್ಯಾಯಾಲಯದ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಬಿಜೆಪಿ ಆಡಳಿತದಲ್ಲಿರುವ ಕರ್ನಾಟಕದಲ್ಲಿ ನ್ಯಾಯ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಅವರು ಹೇಳಿದರು.
‘‘ಕರ್ನಾಟಕದ ಹೈಕೋರ್ಟ್ ಹಾಗೂ ಇತರ ಕೋರ್ಟ್‌ಗಳಿಗೆ ಆಗಮಿಸಿದ ದೂರುದಾರರೊಂದಿಗೆ ತಮಗೆ ನ್ಯಾಯಾಲಯದಿಂದ ನ್ಯಾಯವು ದೊರಕುತ್ತಯೆಂಬ ಭರವಸೆಯಿದೆಯೇ ಎಂಬ ಅಭಿಪ್ರಾಯವನ್ನು ಸಂಗ್ರಹಿಸುವಂತೆ ಇತ್ತೀಚೆಗೆ ಕೆಲವು ಕಾನೂನು ವಿದ್ಯಾರ್ಥಿಗಳೊಂದಿಗೆ ಹೇಳಲಾಯಿತು. ಹಾಗೆಯೇ ಕಾನೂನು ವಿದ್ಯಾರ್ಥಿಗಳು ಒಂದು ತಿಂಗಳಿನಲ್ಲಿ 24,000 ಮಂದಿಯನ್ನು ಭೇಟಿಯಾದರು. 30% ಅಥವಾ 40% ಶೇಕಡಾ ಮಂದಿ ನ್ಯಾಯಾಲಯದ ಬಗ್ಗೆ ಅತೃಪ್ತಿ ಹೊಂದಿರಬಹುದೆಂಬ ಭಾವನೆ ನಮ್ಮಲ್ಲಿತ್ತು. ಆದರೆ ದುರದೃಷ್ಟವೆಂದರೆ ಯಾವನೇ ಒಬ್ಬ ವ್ಯಕ್ತಿಯೂ ನ್ಯಾಯಾಲಯದ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿಲ್ಲ’’ ಎಂದು ಅವರು ಹೇಳಿದರು.
ಡಾ ಬಿನಾಯಕ್ ಸೇನ್ ಒಬ್ಬ ವೈದ್ಯನಾಗಿದ್ದರು. ಅವರು ಛತ್ತೀಸ್‌ಗಢದ ಕಾಡಿನಲ್ಲಿ ಬಡ ಆದಿವಾಸಿಗಳ ಶುಶ್ರೂಷೆಮಾಡುತ್ತಾ ಸಮಾಜಸೇವೆಯಲ್ಲಿ ನಿರತರಾಗಿದ್ದರು. ಸರಕಾರಕ್ಕೆ ಆದಿವಾಸಿಗಳಿಂದ ಆಗುವ ಅನ್ಯಾಯದ ವಿರುದ್ಧ ಅವರು ಧ್ವನಿಯೆತ್ತಿದ್ದರು. ಆದರೆ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪಿತ್ತಿದೆ. ಈ ತೀರ್ಪಿಗೆ ಯಾವುದೇ ಆಧಾರಗಳಿಲ್ಲ ಎಂದು ನ್ಯಾ ಸಲ್ದಾನ ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಕೆ.ಎಂ.ಶರೀಫ್ ಮಾತನಾಡಿ, ನ್ಯಾಯಾಲಯಗಳು ಸಾಕ್ಷ, ಪುರಾವೆಗಳು ಹಾಗೂ ದಾಖಲೆಗಳನ್ನು ತಿರಸ್ಕರಿಸಿ ಪುರಾಣ ಕಥೆಗಳು ಹಾಗೂ ಧಾರ್ಮಿಕ ನಂಬುಗೆಗಳನ್ನು ಆಧರಿಸಿ ತೀರ್ಪು ನೀಡಲು ಆರಂಭಿಸಿವೆ. ನ್ಯಾಯಾಲಯಗಳಿಗೂ ಕೋಮುವಾದವು ಹೊಕ್ಕಿದೆ. ಆದುದರಿಂದಲೇ ನ್ಯಾಯಾಲಯಗಳಿಂದ ಬಹುಸಂಖ್ಯಾತರ ಪರವಾಗಿ ತೀರ್ಪುಗಳು ಹೊರಬೀಳುತ್ತಿವೆ ಎಂದರು. ತ್ತೀಸ್‌ಗಢದಲ್ಲಿ ಬಡ ಆದಿವಾಸಿಗಳ ಪರವಾಗಿ ಕೆಲಸ ಮಾಡಿರುವುದೇ ಬಿನಾಯಕ್ ಸೇನ್ ಮಾಡಿದ ಪ್ರಮಾದವಾಗಿತ್ತು! ಅದಕ್ಕಾಗಿ ಕೋರ್ಟು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಮಾನವ ಹಕ್ಕುಗಳ ಹೋರಾಟಗಾರರನ್ನು ದಮನಿಸುವುದೇ ಇದರ ಹಿಂದೆ ಅಡಗಿರುವ ಉದ್ದೇಶವಾಗಿದೆ ಎಂದು ಅವರು ಹೇಳಿದರು.

Rajashekhar
nchro program
B.T.Lalitha Naik

nchro program
ದೇಶದಾದ್ಯಂತ ನಡೆದ ಹಲವು ಸ್ಫೋಟಗಳಿಗೆ ಸಂಬಂಧಿಸಿದಂತೆ ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದೆ. ಹಿಂದುತ್ವ ಭಯೋತ್ಪಾದನೆಯು ಬಯಲಾಗಿರುವ ಹೊರತಾಗಿಯೂ ಮಾಲೆಗಾಂವ್, ಅಜ್ಮೀರ್ ಹಾಗೂ ಮೆಕ್ಕಾ ಮಸ್ಜಿದ್ ಸ್ಫೋಟದಲ್ಲಿ ಬಂಧಿಸಲ್ಪಟ್ಟ ಅಮಾಯಕರನ್ನು ಬಿಡುಗಡೆಗೊಳಿಸದೆ ಇರುವುದು ದುರದೃಷ್ಟವಾಗಿದೆ ಎಂದು ಅವರು ಹೇಳಿದರು.
ಪಿಯುಸಿಎಲ್ ಜಿಲ್ಲಾಧ್ಯಕ್ಷ ಪಿ.ಬಿ.ಡೇಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬಿ.ಟಿ.ಲಲಿತಾ ನಾಯಕ್, ಎನ್‌ಸಿಎಚ್‌ಆರ್‌ಒ ಜಿಲ್ಲಾಧ್ಯಕ್ಷ ಸಾದುದ್ದೀನ್ ಎಂ. ಸಾಲಿ, ಪ್ರಗತಿಪರ ಚಿಂತಕ ಹಾಗೂ ವಿಮರ್ಶಕ ಜಿ.ರಾಜಶೇಖರ್, ಒನೀಲ್ ಡಿಸೋಜ, ಆಲ್ವಿನ್ ಕೊಲಾಸ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಲೆಪಾಡಿ, ಸುರೇಶ್ ಭಟ್ ಬಾಕ್ರಬೈಲು, ಸಿ.ಎನ್.ಶೆಟ್ಟಿ, ನ್ಯಾಯವಾದಿ ಮುಹಮ್ಮದ್ ಹನೀಫ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

nchro program

nchro program

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ