ಶುಕ್ರವಾರ, ಜನವರಿ 21, 2011

ಎಸ್‌ಡಿಪಿಐ ಸವಾಲಿಗೆ ಬರುತ್ತೀರಾ ಕಾಂಗ್ರೆಸ್ಸಿಗರೇ?





ದ.ಕ.ಜಿಲ್ಲೆಯಲ್ಲಿ ಸಂಪೂರ್ಣ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷದ ಕೇವಲ ಫೈನಾನ್ಸಿಯರ್ ನಾಯಕರಿಗೆ ಎಸ್‌ಡಿಪಿಐ ಪಕ್ಷದ ಮೇಲೆ ಗೂಬೆ ಕೂರಿಸುವ ಪ್ರಯತ್ನವು ಜನಸಾಮಾನ್ಯರ ಮುಂದೆ ಸಂಪೂರ್ಣವಾಗಿ ವಿಫಲವಾಗಿದೆ




ಇತ್ತೀಚೆಗೆ ನಡೆದ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ೧೦೦ ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಬಹಳ ಹಿನ್ನೆಡೆಯಾಗಿದೆ. ಏಕೆಂದರೆ ನಾವು ಶತಮಾನ ಕಾಲದಿಂದಲೂ ಮತ್ತು ನಮ್ಮ ಪರಂಪರೆ ಕಾಲಗಳಿಂದಲೂ ಕಾಂಗ್ರೆಸ್ಸನ್ನು ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ಆದರೆ ಯಾವುದೇ ಒಂದೋ ಒಂದು ಸಹಾಯ ಆಗಲಿ ಅಥವಾ ನಾವು ನಿರೀಕ್ಷಿಸಿದ ಅಭ್ಯರ್ಥಿಗಳು ಆಯ್ಕೆ ಮಾಡಿ ಬಂದರೂ ನಮಗೆ ಸಿಗಬೇಕಾದ ಯಾವುದೇ ಸಹಾಯ ಸಿಗಲಿಲ್ಲ. ನಾವು ನಂಬಿ ಆಯ್ಕೆ ಮಾಡಿದ ಅಭ್ಯರ್ಥಿಗಳು ನಮಗೆ ದ್ರೋಹ ಮಾಡಿದಾಗ ಅದಕ್ಕೆ ತಕ್ಕ ಪಾಠ ಕಲಿಸುವ ದೃಷ್ಟಿಯಿಂದ ಮತ್ತು ಯಾವುದೇ ತಾರತಮ್ಯ ಇಲ್ಲದೇ ಎಲ್ಲರನ್ನೂ ಒಂದೇ ದೃಷ್ಟಿಯಿಂದ ಕಾಣು ವಂತಹ ಮತ್ತು ಅಧಿಕಾರ ಅವಧಿಯಲ್ಲಿ ಇಲ್ಲದಿದ್ದರೂ ಅದೆಷ್ಟೋ ಕಾರ್ಯಕ್ರಮಗಳನ್ನು ಸಹಾಯಗಳನ್ನು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬರುವ ಸೋಶಿಯಲ್ ಡೆಮಾ ಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ನಾವು ಆಯ್ಕೆ ಮಾಡಿದೆವು.

ಇದರಿಂದ ಜಾತ್ಯತೀತ ಹಣೆಪಟ್ಟಿ ಕಟ್ಟಿದ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಗಣಿಸಿದೆ.

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರು ಎಸ್‌ಡಿಪಿಐ ಪಕ್ಷವು ಬಿಜೆಪಿ ಮುಖಂಡರಿಂದ ಹಣವನ್ನು ಪಡೆದು ಕಾಂಗ್ರೆಸ್ ಸೋಲಿಗೆ ಕಾರಣವಾಯಿತು ಎಂದು ಹಾಸ್ಯಾ ಸ್ಪದ ಹೇಳಿಕೆಯನ್ನು ನೀಡಿದ್ದಾರೆ.

ಈ ಮೂಲಕ ಸುಮಾರು ೧೦೦ ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನ ಮಾನವನ್ನು ನಡುಬೀದಿಗೆ ಹಾಕಿದ್ದಾರೆ. ಈ ಪಕ್ಷದ ಒಂದು ಜವಾಬ್ದಾರಿಯುತ ಸ್ಥಾನ ದಲ್ಲಿರುವ ಇವರು ಕೇವಲ ಇತ್ತೀಚೆಗೆಯಷ್ಟೇ ಅಂದರೆ ಒಂದು ವರ್ಷದ ಹಿನ್ನೆಲೆ ಇರು ವಂತಹ ಶೋಷಿತರ ಎಲ್ಲಾ ವರ್ಗದ ಪಕ್ಷವಾದ ಎಸ್‌ಡಿಪಿಐ ಪಕ್ಷಕ್ಕೆ ಮಾಡಿರುವ ಈ ಆರೋಪವು ಅವರ ಘನತೆಯನ್ನು ಕುಗ್ಗಿಸು ವಂತಹ ವಿಷಯವಾಗಿರುತ್ತದೆ. ಕೈಯಲ್ಲಾ ಗದವ ಮೈಯೆಲ್ಲಾ ಪರಚಿಕೊಂಡ ಎಂಬಂತೆ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷದ ಕೇವಲ ಫೈನಾನ್ಸಿಯರ್ ನಾಯಕರಿಗೆ ಎಸ್‌ಡಿಪಿಐ ಪಕ್ಷದ ಮೇಲೆ ಗೂಬೆ ಕೂರಿಸುವ ಪ್ರಯತ್ನವು ಜನಸಾ ಮಾನ್ಯರ ಮುಂದೆ ಸಂಪೂರ್ಣವಾಗಿ ವಿಫಲ ವಾಗಿದೆ.

ಅಷ್ಟಕ್ಕೂ ಕೇವಲ ಒಂದು ವರ್ಷ ಹಿನ್ನೆಲೆ ಇರುವ ಎಸ್‌ಡಿಪಿಐಗೆ ಈ ರೀತಿಯಲ್ಲಿ ಇಲ್ಲಸಲ್ಲದ ಅಪಾದನೆ ಯಾಕೆ? ಎಸ್‌ಡಿಪಿಐ ಯಿಂದ ಕಾಂಗ್ರೆಸ್‌ಗೆ ಸೋಲಿನ ಭಯವಾ ಯಿತೇ?

ಎಸ್‌ಡಿಪಿಐಯಿಂದ ಇನ್ನು ಮುಂದೆ ಒಂದು ಅರ್ಧ ಬಿರಿಯಾನಿ ಅಥವಾ ಅರ್ಧ ಕಟ್ಟಿಂಗ್ ಚಹಾ ಕೊಟ್ಟರೆ ತಮ್ಮ ಹತ್ತಿರ ಇನ್ನೂ ಯಾರೂ ಬರುವುದಿಲ್ಲ ಅಂತ ಅನ್ನಿಸಿತೇ? ಅಥವಾ ಇದರಿಂದ ಇನ್ನೂ ಮುಂದೆ ನಮಗೆ ಬಿಂದಾಸ್ ಆದ ರಾಜಕೀಯ ಮಾಡಲಿಕ್ಕೆ ಬರುವುದಿಲ್ಲ ಎಂಬ ಅಂಶಗಳನ್ನು ಇಂದು ಕಾಂಗ್ರೆಸ್ಸಿಗರು ಅಲೋಚಿಸುತ್ತಾ ಇದ್ದಾರೆ.

ನಿಜಕ್ಕೂ ಎಸ್‌ಡಿಪಿಐ ಇಂದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿ ಸಿದೆ. ಆದ್ದರಿಂದಲೇ ನಮಗೆ ಈ ರೀತಿಯಲ್ಲಿ ಇಲ್ಲ ಸಲ್ಲದ ಆಪಾದನೆಗಳು ಕೇಳಿಬರುತ್ತಿದೆ.

ಜಾತ್ಯಾತೀತ ಮತಗಳನ್ನು ಪಡೆದು ಆಯ್ಕೆ ಯಾದಂತಹ ಅದೆಷ್ಟೋ ಜನಪ್ರತಿನಿಧಿಗಳು ಲಕ್ಷ, ಕೋಟಿ ಪಡೆದು ತಮ್ಮ ಮಾನಮರ್ಯಾ ದೆಯನ್ನು ಕೋಮುವಾದಿಗಳ ಮುಂದೆ ಬಿಚ್ಚಿ ಟ್ಟಂತಹ ಹಿನ್ನೆಲೆಯುಳ್ಳ ಪಕ್ಷದ ನಾಯಕರು ಗಳು ಎಸ್‌ಡಿಪಿಐಯಂತಹ ಪಕ್ಷದ ಮೇಲೆ ಆರೋಪ ಮಾಡುವಂತಹ ನೈತಿಕತೆಯನ್ನು ಸಂಪೂರ್ಣವಾಗಿಯೂ ಕಳೆದುಕೊಂಡಿದ್ದಾರೆ ಎಂಬುವುದನ್ನು ಇವರು ಮರೆಯಬಾರದು. ಜಾತ್ಯತೀತ ಮತಗಳು ಎಸ್‌ಡಿಪಿಐ ಕಡೆಗೆ ಬಂದಿದೆ ಎಂಬುದನ್ನು ಈ ಪ್ರಚಾರ ಪ್ರಿಯ ನಾಯಕರ ಸ್ವತಃ ಒಪ್ಪಿಕೊಂಡಿರುವುದು ಎಸ್‌ಡಿಪಿಐ ಪಕ್ಷದ ಮುಂದಿನ ಹಾದಿ ಸುಗಮ ವಾದಂತಾಗಿದೆ.
ಹಣ ಪಡೆದು ಮತ್ತು ಹಣಕೊಟ್ಟು ಯಾರೆಲ್ಲಾ ರಾಜಕೀಯ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ಎಂಬುದನ್ನು ಒಂದೇ ವೇದಿಕೆ ಯಲ್ಲಿ ಕುಳಿತು ಸಾಕ್ಷಿ ಸಮೇತವಾಗಿ ಚರ್ಚಿಸಲು ಎಸ್‌ಡಿಪಿಐಯ ನಾಯಕರು ಸಿದ್ಧರಿದ್ದಾರೆ. ಕಾಂಗ್ರೆಸ್‌ನ ನಾಯಕರಿಗೆ ನೈತಿಕತೆ ಎನ್ನುವುದು ಇದ್ದರೆ ದಿನಾಂಕ, ಸಮಯ ಹಾಗೂ ಸ್ಥಳವನ್ನು ನಿಗದಿಪಡಿಸಲಿ ಎಂದು ಇತ್ತೀಚೆಗೆ ಪತ್ರಿಕಾ ಹೇಳಿಕೆಯಲ್ಲಿ ಕೂಡಾ ನಮ್ಮ ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಯವರು ಸವಾಲೆಸೆದಿದ್ದಾರೆ. ಆದರೆ ಈ ರೀತಿಯ ನೈಜ ಅಥವಾ ಪ್ರಾಮಾ ಣಿಕವಾದ ಮಾತು ಜಾತ್ಯತೀತ ಮುಖವಾಡ ಹಾಕಿದ ಕಾಂಗ್ರೆಸ್‌ಗೆ ಹೇಳಲು ಸಾಧ್ಯ ಉಂಟಾ? ಖಂಡಿತವಾಗಿಯೂ ಸಾಧ್ಯವಿಲ್ಲ. ಏಕೆಂದರೆ ಎಲ್ಲರೂ ಕಳ್ಳರು. ಬೆರಳೆಣಿಕೆಯಷ್ಟು ಜನರು ಪ್ರಾಮಾಣಿಕ ರಾಜಕೀಯ ನಾಯ ಕರಾಗಿದ್ದಾರೆ ಹೆಚ್ಚಿನವರು ಎಲ್ಲರೂ ಕಳ್ಳರಾಗಿದ್ದಾರೆ.

ಈಗಾಗಲೇ ಪ್ರeವಂತರಾದ ನಾಗರಿಕ ರೆಲ್ಲರೂ ಅಲೋಚಿಸಿದ್ದಾರೆ ಮತ್ತು ಎಸ್‌ಡಿಪಿ ಐಯನ್ನು ಬೆಂಬಲಿಸಿದ್ದಾರೆ. ಆದರೆ ಎಸ್‌ಡಿಪಿಐ ಅವರಿಗೆ ಹಣ ಆಗಲಿ, ಶರಾಬು ಆಗಲಿ, ಬಿರಿಯಾನಿ ಆಗಲಿ, ಸೀರೆ ಆಗಲಿ ಕೊಟ್ಟಿಲ್ಲ ಮತ್ತು ಕೊಡುವುದು ಇಲ್ಲ. ಇದು ಪ್ರಾಮಾಣಿಕ ರಾಜಕೀಯ ಮತ್ತು ಅಶುದ್ಧವಾದ ರಾಜಕೀಯ ಮಾನವನ್ನು ಎಸ್‌ಡಿಪಿಐ ಎಂಬ ಶುದ್ಧವಾದ ನೀರಿನಿಂದ ತೊಳೆದು ಶುದ್ಧಿ ಮಾಡಲಿದೆ. ಇನ್ನಾದರೂ ನಿಮ್ಮ ದುರ್ಬಲತೆಯನ್ನು ದೂರ ಮಾಡಿ ಎಸ್‌ಡಿಪಿಐ ಯ ಬಗ್ಗೆ ತಿಳಿದಿದ್ದಾರೋ ಇನ್ನೂ ಕೂಡಾ ಸ್ವಲ್ಪ ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಎಸ್‌ಡಿಪಿಐ ಪ್ರಥಮ ಹಂತದಲ್ಲಿಯೇ ಉತ್ತಮವಾದ ಫಲಿತಾಂಶವನ್ನು ಪಡೆಯುತ್ತಾ ಜನಸಾಮಾನ್ಯರ ಹೃದಯದೊಳಗೆ ಮನೆ ಮಾಡಿ ಕೂತಿದೆ ಎಂಬುದನ್ನು ಕಾಂಗ್ರೆಸ್ಸಿಗರು ಅರ್ಥಮಾಡಿಕೊಳ್ಳಬೇಕು. ಎಸ್‌ಡಿ ಪಿಐ ಯಾವತ್ತೂ ಭ್ರಷ್ಟಾಚಾರದೊಂದಿಗೆ ಕೈ ಚಾಚಿದಂತಹ ನೀಚ ಕೃತ್ಯ ಮಾಡುವ ಪಕ್ಷವಲ್ಲ ಮತ್ತು ಯಾವತ್ತೋ ಲಂಚ, ಭ್ರಷ್ಟಾಚಾರಗಳಂತಹ ದರೋಡೆಕೋರರಿಗೆ ತಕ್ಕ ಪಾಠ ಕಲಿಸುವ ಪಕ್ಷವಾಗಿದೆ. ಅಲ್ಲದೆ ಕೋಮು ವಾದಿಗಳೊಂದಿಗೆ ಯಾವತ್ತೋ ಕೈ ಚಾಚು ವಂತಹ ಕಾಂಗ್ರೆಸ್ ಅಂತ ನೀಚವಾದ ಪಕ್ಷವಲ್ಲ. ಎಸ್‌ಡಿಪಿಐ ಈಗಾಗಲೇ ನಿಮ್ಮ ಕಾಂಗ್ರೆಸ್‌ನ ಪಕ್ಷದ ಮಾನ ಮರ್ಯಾದೆ ನೀವು ಬೀದಿಗೆ ತಳ್ಳಿ ದ್ದೀರಾ ಇನ್ನಾದರೂ ಸ್ವಲ್ಪ ಜವಾಬ್ದಾರಿಯು ತವಾದ ಮತ್ತು ಪ್ರಾಮಾಣಿಕವಾದ ಕೆಲಸ ಮಾಡಿ ನೊಂದ ಮತ್ತು ಅಭಿವೃದ್ಧಿ ವಂಚಿತ ಜನರ ಪರ ವಾದ ಪಕ್ಷವಾಗಿ ಇರಿ. ಈ ಪಕ್ಷಕ್ಕೆ ಪ್ರಥಮ ಹಂತ ದಲ್ಲಿಯೇ ಜನರು ಬೆಂಬಲಿಸುತ್ತಾ ಬರುತ್ತಿದ್ದಾರೆ. ಇನ್ನು ಕೂಡಾ ಮಾಡಲಿದ್ದಾರೆ ಎಂಬುದು ನೀವು ಅರ್ಥ ಮಾಡಿಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ರಾಜಕೀಯದ ಬೆಳವಣಿಗೆಯನ್ನು ನೋಡಿ ದಾಗ ಮತದಾರರಾದ ನಮಗೆ ನಾಚಿಕೆ ಯಾಗುತ್ತದೆ. ಅಧಿಕಾರದ ಆಸೆಗೋಸ್ಕರ ಏನನ್ನು ಮಾಡಲು ಹೇಸದ ರಾಜಕೀಯ ಮುಖಂಡ ರನ್ನು ನೋಡಿದಾಗ ಅಸಹ್ಯವಾಗುತ್ತದೆ. ಅಧಿಕಾರದ ಆಸೆ, ಭ್ರಷ್ಟಾಚಾರ, ಲಂಚ ಆಸ್ತಿ ವಿವಾದ ಇವೆಲ್ಲಾ ಈಗ ರಾಜ್ಯ ರಾಜಕೀಯದಲ್ಲಿ ತಾಂಡವಾಡುತ್ತಿವೆ. ಅಧಿಕಾರದ ಆಸೆಗಾಗಿ ಒಂದು ಪಕ್ಷವನ್ನು ಇನ್ನೊಂದು ಪಕ್ಷ ದೂರು ವುದು, ಇಲ್ಲಸಲ್ಲದ ಆರೋಪ ಹೊರಿಸುವುದು, ಇಲ್ಲದ ಪುರಾವೆಗಳನ್ನು ಮಾಧ್ಯಮದ ಮುಂದೆ ತೋರಿಸಿ ಮತದಾರರ ಓಲೈಕೆ ಮಾಡುವುದು ಇದನ್ನೆಲ್ಲಾ ನೋಡುವಾಗ ನಾವು ಮತದಾನ ಮಾಡುವುದು ಎಷ್ಟು ಒಳಿತು ಎಂದಾಗುತ್ತದೆ.

ಇದಕ್ಕೆಲ್ಲಾ ಕಡಿವಾಣ ಹಾಕಲು ಹೊಸ ತೊಂದು ಪಕ್ಷ ರೂಪುಗೊಳ್ಳಬೇಕಾಗಿದೆ. ಕೇವಲ ರಾಜ್ಯದ ಅಭಿವೃದ್ಧಿಯೇ ಪಕ್ಷದ ಗುರಿ ಯಾಗಿ ರಬೇಕು. ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿ, ನ್ಯಾಯ ದೊರಕಿಸುವ ಪಕ್ಷ ಬೇಕಾಗಿದೆ. ಈ ನಿಟ್ಟಿನಲ್ಲಿ ಎಸ್‌ಡಿಪಿಐ ಪಕ್ಷ ತನ್ನ ಹೆಜ್ಜೆಯನ್ನು ಮುಂದಿಟ್ಟಿದೆ. ಇದಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ.



ಎನ್.ಎ.ಕಣ್ಣೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ