ಶುಕ್ರವಾರ, ಜನವರಿ 07, 2011

ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಹಿರಿದು: ಸೀಮಂತ್‌ಕುಮಾರ್

ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಹಿರಿದು: ಸೀಮಂತ್‌ಕುಮಾರ್ಮಂಗಳೂರು, ಜ.7: ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ಅಪರಾಧಗಳು ನಡೆಯುವುದು ಸಹಜವಾಗಿದ್ದರೂ ಅದನ್ನು ತಡೆಗಟ್ಟುವುದು ಹಾಗೂ ಆಗದಂತೆ ಮುಂಜಾಗರೂಕತೆ ವಹಿಸುವುದು ನಮ್ಮ ಕರ್ತವ್ಯ ಎಂದು ಮಂಗಳೂರು ಪೊಲೀಸ್ ಕಮಿಶನರ್ ಸೀಮಂತ್ ಕುಮಾರ್ ಸಿಂಗ್ ಅಭಿಪ್ರಾಯಿಸಿದ್ದಾರೆ. 
ನಗರದ ರೋಶನಿ ನಿಲಯ ಕಾಲೇಜಿ ನಲ್ಲಿ ಇಂದು ಅಪರಾಧ ತಡೆ ಮಾಸಾ ಚರಣೆ ಅಂಗವಾಗಿ ‘ಅಪರಾಧ ತಡೆಗಟ್ಟುವಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಕುರಿತು ಮಂಗಳೂರು ಕಮಿಷನರೇಟ್ ಹಾಗೂ ರೋಶನಿ ನಿಲಯ ಕಾಲೇಜಿನ ಅಪರಾಧ ಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾದ ಕಾರ್ಯಾಗಾರವನ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.

ಈ ರೀತಿಯ ಕಾರ್ಯಕ್ರಮಗಳ ಮೂಲಕ ಯುವಜನತೆಗೆ ಪೊಲೀಸ್ ಇಲಾಖೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆಯಲ್ಲದೆ, ಪೊಲೀಸ್ ಇಲಾಖೆಯಲ್ಲಿನ ತಪ್ಪುಗಳನ್ನು ಕೂಡಾ ತಿದ್ದಿಕೊಳ್ಳಲು ಅವಕಾಶ ದೊರಕಿದಂ ತಾಗುತ್ತದೆ. ಇಂದು ನಡೆಯುವ ಕಾರ್ಯಕ್ರಮದ ಕುರಿತಂತೆ ವರದಿ ಯನ್ನು ಡಿಜಿಪಿ ಮತ್ತು ಐಜಿಪಿಗೆ ಕಳುಹಿಸಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ನುಡಿದರು.

ರೋಶನಿ ನಿಲಯದ ಪ್ರಾಂಶುಪಾಲೆ ಡಾ. ಜೆಸಿಂತಾ ಡಿಸೋಜ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಸಿಪಿಗಳಾದ ಆರ್. ರಮೇಶ್, ಮುತ್ತೂರಾಯ, ಪಾರ ಶೆಟ್ಟಿ ಉಪಸ್ಥಿತರಿದ್ದರು. ರೋಶನಿ ನಿಲಯದ ಅಪರಾಧ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ. ಅಶೋಕ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಅಪರಾಧ ತಡೆ ಬಗ್ಗೆ ಮಾರ್ಗದರ್ಶನ ಅಗತ್ಯ’
ಸಂಜೆ ನಡೆದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತ ನಾಡಿದ ಮಂಗಳೂರು ವಿವಿಯ ಉಪಕುಲಪತಿ ಡಾ.ಟಿ.ಸಿ. ಶಿವಶಂಕರ ಮೂರ್ತಿ, ಸಮಾಜವನ್ನು ಅಪರಾಧ ಮುಕ್ತವಾಗಿಸಲು 16ರಿಂದ 18ರ ಹರೆಯದ ಯುವಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡಬೇಕಿದೆ. ಸಾಮಾ ಜಿಕ ಚಟುವಟಿಕೆಗಳಲ್ಲಿ ಯುವಜನತೆ ಯನ್ನು ತೊಡಗಿಸುವಂತೆ ಮಾಡುವು ದರಿಂದ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಲಿದೆ ಎಂದರು.

ಅಪಾರ ಯುವಶಕ್ತಿಯನ್ನು ಹೊಂದಿ ರುವ ನಮ್ಮ ದೇಶದಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಸಮಾಜದಲ್ಲಿರುವ ದುಷ್ಟಶಕ್ತಿಗಳಿಂದ ಯುವಶಕ್ತಿಯನ್ನು ದೂರವಿಡಲು ಸಾಧ್ಯ. ಅಂತಹ ಉತ್ತಮ ಪ್ರಯತ್ನವನ್ನು ಪೊಲೀಸ್ ಮತ್ತು ರೋಶನಿ ನಿಲಯದ ಅಪರಾಧ ವಿಭಾಗ ಮಾಡಿದ್ದು, ಇಂತಹ ಪ್ರಯತ್ನಗಳಲ್ಲಿ ಮಾಧ್ಯಮದ ಪಾತ್ರ ಕೂಡಾ ಪ್ರಮುಖವಾಗಿರುತ್ತವೆ ಎಂದು ಡಾ.ಶಿವಶಂಕರ್ ಮೂರ್ತಿ ನುಡಿದರು.

ಸಮಾರಂಭದಲ್ಲಿ ಮಾಧ್ಯಮ ಮತ್ತು ಅಪರಾಧ-2010, ಹಾಸ್ಯ ಮತ್ತು ಅಪರಾಧ ಎಂಬ ಪುಸ್ತಕಗಳನ್ನು ಬಿಡು ಗಡೆ ಮಾಡಲಾಯಿತು. ಟ್ರಾಫಿಕ್ ಪೊಲೀಸರಿಗಾಗಿ ಎಲೆಕ್ಟ್ರಾನಿಕ್ ಚಲನ್ ಕಲೆಕ್ಷನ್ ಮೀಟರ್‌ನ್ನು ಬಿಡುಗಡೆ ಮಾಡಲಾಯಿತು.

ಅಪರಾಧ ಜಗತ್ತಿನೆಡೆ ಬೆಳಕು ಚೆಲ್ಲಿದ ಪ್ರಹಸನ...
ಕಾರ್ಯಾಗಾರದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕಾಲೇಜಿನ ಬಯಲು ವೇದಿಕೆಯಲ್ಲಿ ರೋಶನಿ ನಿಲಯ ಕಾಲೇಜು ವಿದ್ಯಾರ್ಥಿಗಳು, ಇತ್ತೀಚೆಗೆ ಸಮಾಜವನ್ನು ತಲ್ಲಣಗೊಳಿಸಿದ ಅಪರಾಧ ಜಗತ್ತಿನ ಕೆಲವೊಂದು ಘಟನೆಗಳ ಕುರಿತಂತೆ ಪ್ರಹಸನದ ಮೂಲಕ ಸಭಿಕರನ್ನು ರಂಜಿಸಿದರು.
 ಸಯನೆಡ್ ಕಿಲ್ಲರ್, ವಾಮಾಚಾರ, ಹಣಕ್ಕಾಗಿ ವೃದ್ಧೆಯ ಕೊಲೆ ಮೊದಲಾದ ವಿಷಯಗಳನ್ನು ಆಧರಿಸಿ ರಚಿಸಲಾದ ಪ್ರಹಸನ ಗಮನ ಸೆಳೆದವು. ಈ ರೀತಿಯ ಕೃತ್ಯಗಳನ್ನೆಸಗಿದ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ಕರ್ತವ್ಯ, ಸಾಮಾಜಿಕ ಜವಾಬ್ದಾರಿಯ ಜೊತೆಯಲ್ಲೇ ಸಮಾಜಕ್ಕೆ ಅಪರಾಧ ಜಗತ್ತಿನ ಕ್ಷಣ ಕ್ಷಣದ ರೋಚಕ ಸುದ್ದಿಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ವಿದ್ಯಾರ್ಥಿಗಳು ಪ್ರಹಸನದ ಮೂಲಕ ಬೆಳಕು ಚೆಲ್ಲಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ