ಹಿರಿಯ ರಾಜಕಾರಣಿ ಕಾಂಗ್ರೆಸ್ಸ್ ಮುಖಂಡ ಎಂ ಪಿ ಪ್ರಕಾಶ ಇಂದು ಬೆಳಿಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವು ಸಮಯಗಳಿಂದ ಕ್ಯಾನ್ಸರ್ ಬಾಧಿತರಾಗಿ ಶಯ್ಯಾವಸ್ಥೆಯಲ್ಲಿದ್ದರು.
ಜನತಾ ಪರಿವಾರದಿಂದ ಇವರು ರಾಜಕೀಯ ಪ್ರವೇಶಿಸಿದ್ದರು.1984 ರಲ್ಲಿ ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಸಚಿವರಾಗಿದ್ದರು. ದರಂ ಸಿಂಗ್ ಸರಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗಿದ್ದರು. ಹೂವಿನಹಡಗಲಿ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು .2007ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ತೊರೆದಿದ್ದ ಅವರು, ಹರಪನಹಳ್ಳಿಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು. ಪ್ರಕಾಶ್ ಉತ್ತಮ ಚಿಂತಕ ಹಾಗೂ ವಾಗ್ಮಿಯೂ ಆಗಿದ್ದರು.

ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರು ಅಪಾರಬಂಧುಬಳಗವನ್ನು ಅಗಲಿದ್ದಾರೆ.ನಾಳೆ ಹೂವಿನಹಡಗಲಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅವರ ಮೃತದೇಹವನ್ನು ಇಂದು ಅಂತ್ಯದರ್ಶನಕ್ಕಾಗಿ ಇಡಲಾಗಿದೆ. ಅವರ ಅಂತ್ಯದರ್ಶನಕ್ಕಾಗಿ ಸಾವಿರಾರು ಅಭಿಮಾನಿಗಳು, ರಾಜಕಾರಣಿಗಳು, ಕಾಂಗ್ರೆಸ್ ಮುಖಂಡರು ಫ್ರೀಡಂ ಪಾರ್ಕ್‌ಗೆ ಆಗಮಿಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ