ಬುಧವಾರ, ಫೆಬ್ರವರಿ 09, 2011

ಆಯೋಗ ಸಂಘ-ಪರಿವಾರದ ಕೈಗೊಂಬೆ:ಪಿಎಫ್‌ಐ ಮುಖಂಡ ಅಬ್ದುಲ್ ರಜಾಕ್

ಬಂಟ್ವಾಳ: ಮಂಗಳೂರು ಚರ್ಚ್ ಹಾಗೂ ಕ್ರೈಸ್ತರ ಧಾರ್ಮಿಕ ಕೇಂದ್ರಗಳ ಮೇಲಾದ ದಾಳಿ ಸಂಘ-ಪರಿವಾರದ ವ್ಯವಸ್ಥಿತ ಸಂಚಾಗಿದ್ದರೂ, ಜಸ್ಟೀಸ್ ಸೋಮಶೇಖರ್ ಆಯೋಗ ವರದಿ ಮಾತ್ರ ದಾಳಿಕೋರರನ್ನು ಸಂಪೂರ್ಣ ರಕ್ಷಿಸಿದೆ ಎಂದು ಪಿಎಫ್‌ಐ ಮುಖಂಡ ಅಬ್ದುಲ್ ರಜಾಕ್ ಸೀಮಾ ಅವರು ಆರೋಪಿಸಿದ್ದಾರೆ.
ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಡೆಸಿದ ಪ್ರತಿಭಟನೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು ದೇಶದ ಇಡೀ ಅಲ್ಪಸಂಖ್ಯಾತ ವರ್ಗ ಸೋಮಶೇಖರ್ ಆಯೋಗದ ವರದಿಯಿಂದ ಕಂಗೆಟ್ಟಿದೆ ಎಂದರು. ಚರ್ಚ್‌ಗಳ ಮೇಲಾದ ದಾಳಿಯನ್ನು ಬಜರಂಗದಳ, ಶ್ರೀರಾಮಸೇನೆ ಮತ್ತಿತರ ಸಂಘಟನೆಗಳ ಮುಖಂಡರಾದ ಮಹೇಂದ್ರ ಕುಮಾರ್, ಎಂ.ಬಿ. ಪುರಾಣಿಕ್, ಪ್ರಮೋದ್ ಮುತಾಲಿಕ್ ಮೊದಲಾದವರೇ ಸಮರ್ಥಿಸು ತ್ತಿರುವಾಗ ಈ ಸತ್ಯವನ್ನು ಬಹಿರಂಗ ಪಡಿಸಲು ಆಯೋಗಕ್ಕೆ ಯಾಕೆ ಭಯ ಎಂದು ಪ್ರಶ್ನಿಸಿರುವ ಅವರು, ಆಯೋಗ ಸಂಘ-ಪರಿವಾರದ ಕೈಗೊಂಬೆಯಾಗಿ ವರ್ತಿಸಿದೆ ಎಂದು ದೂರಿದರು. ಕ್ರೈಸ್ತ ಸಮುದಾಯದ ಮೇಲಾದ ಪೊಲೀಸ್ ದೌರ್ಜನ್ಯ ಹಾಗೂ ಹಿಂದು ಉಗ್ರವಾದಿಗಳ ರುದ್ರ ತಾಂಡವ ಈಗಲೂ ನಮ್ಮ ಕಣ್ಣ ಮುಂದೆ ಸಾಕ್ಷಿಯಾಗಿ ನಿಂತಿವೆ. ಜಸ್ಟೀಸ್ ಸೋಮಶೇಖರ್ ಆಯೋಗದ ದೇಶದ ಜನತೆ ನಂಬಿಕೆ ಹಾಗೂ ವಿಶ್ವಾಸ ಇರಿಸಿಕೊಂಡಿದ್ದರು. ಆದರೆ ಅವು ಗಳನ್ನು ಆಯೋಗಕ್ಕೆ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಮಾಜ ಪರಿವರ್ತನಾ ವೇದಿಕೆಯ ಮುಖಂಡ ಡೀಕಯ್ಯ ಅವರು ಸೋಮಶೇಖರ್ ಆಯೋಗ ವರದಿಯನ್ನು ಸಿಬಿಐಗೆ ಒಪ್ಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ. ಪಿಎಫ್‌ಐನ ವಲಯಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್ ಅಧ್ಯಕ್ಷತೆ ವಹಿಸಿದ್ದ ಪ್ರತಿಭಟನಾ ಸಭೆಯಲ್ಲಿ ಕ್ರೈಸ್ತ ಮುಖಂಡ ಡೇನಿಯಲ್ ಸಿಕ್ವೇರಾ, ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ರಿಯಾಝ್ ಉಪಸ್ಥಿ ತರಿದ್ದರು. ತಹಶೀಲ್ದಾರ್ ಅವರ ಮುಖೇನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಅರ್ಪಿಸಿ ವರದಿಯ ಬಗ್ಗೆ ತಮ್ಮ ಹಕ್ಕುಗಳನ್ನು ಮಂಡಿಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ