ಭಾನುವಾರ, ಜನವರಿ 09, 2011

ಜಾತ್ಯಾತೀತ ಮತಗಳ ವಿಭಜನೆಗಾಗಿ ಎಸ್.ಡಿ.ಪಿ.ಐ ಸ್ಪರ್ಧೆ – ಮೊಯ್ದೀನ್ ಬಾವಾ ಆರೋಪ

musthaqbil.blogspot.comಮಂಗಳೂರು : ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಭರ್ಜರಿ ಸೋಲು ಕಂಡ ಕಾಂಗ್ರೆಸ್ ಪಕ್ಷ ಇದೀಗ ತನ್ನ ಸೋಲಿಗೆ ಎಸ್.ಡಿ.ಪಿ.ಐ ಸ್ಪರ್ಧೆಯೇ ಕಾರಣ ಎಂಬ ಏಕೈಕ ವಾದವನ್ನು  ಮುಂದಿಡುತ್ತಿದ್ದು ಇದೀಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೊಯ್ದೀನ್ ಬಾವಾ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಸೋಲಿಗೆ ಎಸ್.ಡಿ.ಪಿ.ಐ ಸ್ಪರ್ಧೆಯೇ ಕಾರಣವಾಗಿದ್ದು ಎಸ್.ಡಿ.ಪಿ.ಐ ಜಾತ್ಯಾತೀತ ಮತಗಳನ್ನು ವಿಭಜಿಸಲೆಂದೇ ಸ್ಪರ್ಧಿಸಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ.
 
ಕರಾವಳಿಯಲ್ಲಿ ಜೆಡಿಎಸ್ ಸಂಪೂರ್ಣವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದ್ದು ಆದರೂ ಆ ಪಕ್ಷ ಚುನಾವಣೆಗೆ ಸ್ಪರ್ಧಿಸಿತ್ತು. ಅದಲ್ಲದೇ ಜಿಲ್ಲೆಯಲ್ಲಿ ಪ್ರಬಲವಾಗಿಲ್ಲದೇ ಇದ್ದರೂ ಕೂಡ  ಎಸ್.ಡಿ.ಪಿ.ಐ ಚುನಾವಣೆಯಲ್ಲಿ ಸ್ಪರ್ಧಿಸಿ ಜಾತ್ಯಾತೀತ ಮತಗಳ ವಿಭಜನೆಗೆ ಕಾರಣವಾಯಿತು ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೇವಾದಳದ ಅಶ್ರಫ್ ಮತ್ತು ನಜೀರ್ ಬಜಾಲ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ