ಶನಿವಾರ, ಜನವರಿ 08, 2011

ಬಡತನದಿಂದ ಮಾನವ ಹಕ್ಕುಗಳ ದಮನ: ಶಿವಸುಂದರ್

ಮಾನವ ಹಕ್ಕುಗಳ ರಾಷ್ಟ್ರೀಯ ಕಾರ್ಯಾಗಾರ
ಮಂಗಳೂರು, ಜ.7: ದೇಶದ ಸಂವಿಧಾನ ಈ ದೇಶದ ಪ್ರತಿ ಪ್ರಜೆಗೂ ಘನತೆ ಯೊಂದಿಗೆ ಜೀವಿಸುವ ಹಕ್ಕನ್ನು ನೀಡಿದೆ. ಆದರೆ ಬಹುಸಂಖ್ಯಾತ ಜನರನ್ನು ಬಾಧಿಸುತ್ತಿರುವ ಬಡತನದಿಂದ ಮಾನವ ಹಕ್ಕುಗಳು ದಮನಿಸಲ್ಪಟ್ಟಿವೆ ಎಂದು ಖ್ಯಾತ ಅಂಕಣಕಾರ ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್ ಅಭಿಪ್ರಾಯಿಸಿದ್ದಾರೆ.

ಸಂತ ಅಲೋಶಿಯಸ್ ಕಾಲೇಜು
ಬಡತನದಿಂದ ಮಾನವ ಹಕ್ಕುಗಳ ದಮನ: ಶಿವಸುಂದರ್ಆಡಿಟೋರಿಯಂನಲ್ಲಿ ದ.ಕ.ಜಿಲ್ಲಾ ಮಾನವ ಹಕ್ಕು, ರಾಜ್ಯ ಮಾನವ ಹಕ್ಕು ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಮಾನವ ಹಕ್ಕು ವಿಭಾಗಗಳ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತದಲ್ಲಿ ಸಂಪತ್ತು ಹಾಗೂ ಅಧಿಕಾರದ ಅಸಮಾನತೆಯಿಂದ ಉಂಟಾ ಗಿರುವ ಬಡತನದಿಂದ ಬಹು ಸಂಖ್ಯಾತ ಜನರು ಘನತೆಯಿಂದ ಬದುಕುವ ಹಕ್ಕನ್ನು ಕಳೆದುಕೊಂಡಿದ್ದಾರೆ. ದೇಶದ ಶೇ. 20 ಜನ ಕನಿಷ್ಠ ಎರಡು ಹೊತ್ತಿನ ಊಟವನ್ನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಅರ್ಜುನ್ ಸಕ್ಸೇನಾ ಕಮಿಟಿಯ ವರದಿ ಯಲ್ಲಿ ಹೇಳುವಂತೆ ದೇಶದ ಗ್ರಾಮೀಣ ಪ್ರದೇಶದಲ್ಲಿ ಶೇ.77 ಜನ ಹಾಗೂ ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಮಂದಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಬದುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ನಮ್ಮನ್ನಾಳುವ ಸರಕಾರವು ಜವಾಬ್ದಾರಿಯಾಗಿದೆ ಎನ್ನುವುದನ್ನು ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.
ಮಾನವ ಘನತೆಯಿಂದ ಬದುಕಬೇಕಾದರೆ ಆತನಿಗೆ ಆಹಾರ, ಶಿಕ್ಷಣ, ಆರೋಗ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಹಕ್ಕು ಇರ ಬೇಕಾಗಿದೆ. ಆದರೆ ಭಾರತದಲ್ಲಿ ಬಹಳಷ್ಟು ಜನರು ಈ ಮೂಲಭೂತ ಆವಶ್ಯಕತೆ ಇರುವ ಹಕ್ಕುಗಳಿಂದಲೇ ವಂಚಿತರಾ ಗಿದ್ದಾರೆ. ಹಾಗಿರುವಾಗ ಅವರು ಘನತೆ ಯಿಂದ ಜೀವನ ನಡೆಸುವ ಹಕ್ಕು ಚಲಾ ಯಿಸಲು ಹೇಗೆ ಸಾಧ್ಯ ಎಂದು ಶಿವಸುಂದರ್ ಪ್ರಶ್ನಿಸಿದರು.
ಸ್ವಾತಂತ್ರ ನಂತರ ಈ ದೇಶದಲ್ಲಿ ಹಸಿವು, ಬಡತನ, ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳನ್ನು ಜನರು ಅನುಭವಿಸಲು ಸಾಧ್ಯವಾಗದೆ ಇರಲು ನಮ್ಮನ್ನಾಳುತ್ತಿರುವ ಸರಕಾರವು ಕಾರಣ ವಾಗಿರುತ್ತದೆ. ಇಲ್ಲಿನ ಪ್ರಭುತ್ವವು ಪ್ರಜೆಗಳನ್ನು ಪ್ರಭುಗಳಾಗಿ ಕಂಡಿಲ್ಲ ಎಂದು ಅವರು ಹೇಳಿದರು. ದೇಶದಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಬಲ ಗೊಂಡರೆ ಮಾನವಹಕ್ಕು ಹೋರಾಟ ಗಾರರಿಗೆ ಕಿರುಕುಳ ತಪ್ಪಿದ್ದಲ್ಲ ಎಂದು ಶಿವಸುಂದರ್ ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಸ್ವೀಬರ್ಟ್ ಡಿಸಿಲ್ವ, ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ಉಳೆಪಾಡಿ, ಅಬ್ದುಲ್ ಮಜೀದ್ ಖಾನ್, ಪಿಯುಸಿಎಲ್ ರಾಜ್ಯಾಧ್ಯಕ್ಷ ಪಿ.ಬಿ.ಡೇಸಾ, ಉಪಾಧ್ಯಕ್ಷ ಸುರೇಶ್ ಭಟ್, ಕಾಲೇಜಿನ ಮಾನವ ಹಕ್ಕು ವಿಭಾಗದ ಅಧ್ಯಕ್ಷೆ ಡಾ.ರೋಸಾ ವೀರಾ ಡಿಸೋಜ ಉಪಸ್ಥಿತರಿದ್ದರು.
ಜಿಲ್ಲಾ ಘಟಕದ ಅಧ್ಯಕ್ಷ ಸಾದುದ್ದೀನ್ ಎಂ. ಸಾಲಿಹ್ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಕಕ್ಕಿಂಜೆ ಸ್ವಾಗತಿಸಿದರು. ಸುಪ್ರೀತಾ ಜೆ. ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ