ಶನಿವಾರ, ಜನವರಿ 08, 2011

ಮೀನಿನಲ್ಲಿ ಅಲ್ಲಾಹನ ನಾಮ

ಮೀನಿನಲ್ಲಿ ಅಲ್ಲಾಹನ ನಾಮ
ಕೃಷ್ಣಾಪುರದ ಮನೆಯಲ್ಲಿ ಜನಸಾಗರ
ಮಂಗಳೂರು: ಸುರತ್ಕಲ್ ಬಳಿಯ ಕೃಷ್ಣಾಪುರದ ಒಂಬತ್ತನೇ ಬ್ಲಾಕ್‌ನಲ್ಲಿರುವ ಮೀನು ವ್ಯಾಪಾರಿ ಅಬೂಬಕ್ಕರ್ ಅವರ ಮನೆ ಸದ್ಯ ಕುತೂಹಲದ ಕೇಂದ್ರಬಿಂದುವಾಗಿದೆ. ಇದಕ್ಕೆ ಕಾರಣ ಅವರಿಗೆ ದೊರೆತ ಮೀನಿನಲ್ಲಿ ಕಂಡುಬಂದ ಅಲ್ಲಾಹನ ಹೆಸರು. ವಿಷಯ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತಿದ್ದಂತೆ ಅಬೂಬಕ್ಕರ್ ಮನೆಗೆ ಹಿಂದೂ-ಮುಸ್ಲಿಮರೆಂಬ ಭೇದ-ಭಾವವಿಲ್ಲದೆ ಜನರು ಬರುತ್ತಿದ್ದಾರೆ.
ಮೀನಿನ ವ್ಯಾಪಾರ ಮಾಡುತ್ತಿ ರುವ ಅಬೂಬಕ್ಕರ್ ಕಳೆದ ಶನಿವಾರ ಜನವರಿ ಒಂದರಂದು ಮಲ್ಪೆಯ ಬಂದರಿಗೆ ಹೋಗಿ ಮೀನು ಖರೀದಿಸಿದ್ದರು. ಹಾಗೆ ಖರೀದಿಸಿದ ಮೀನಿನಲ್ಲಿ ಒಂಬತ್ತು ದೊಡ್ಡ ಬಂಗುಡೆ ಮೀನು ಇದ್ದುದರಿಂದ ಅದನ್ನು ಸ್ಥಳೀಯ ಹೋಟೆಲ್‌ಗೆ ನೀಡೋಣವೆಂದು ನಿರ್ಧರಿಸಿದ್ದರು. ಹಾಗೆ ಹೋಟೆಲ್‌ಗೆ ಅದನ್ನು ಕೊಡಲು ಹೋದಾಗ ಒಂದು ಬಂಗುಡೆಯನ್ನು ಮನೆಗೆ ಪದಾರ್ಥಕ್ಕೆ ಇರಲಿ ಎಂದು ಉಳಿಸಿಕೊಂಡರು. ಆ ಮೀನಿನ ಜತೆ ಬೆರಕೆ ಮೀನನ್ನೂ ಮನೆಗೆ ಕಳುಹಿಸಿ ಪದಾರ್ಥ ಮಾಡಲು ಹೇಳಿದ್ದರು.
ಗಂಡ ಅಬೂಬಕ್ಕರ್ ಮನೆಗೆ ಕಳುಹಿಸಿದ ಮೀನನ್ನು ಪತ್ನಿ ಜುಬೇದಾ ಕೊಯ್ಯಲು ಯತ್ನಿಸಿದ ವೇಳೆ ಪವಾಡ ವೊಂದು ನಡೆಯಿತಂತೆ. ಮೀನು ಕತ್ತಿಯ ಅಲಗಿನಲ್ಲಿ ಸಿಕ್ಕಿದ ಕೂಡಲೇ ಒಮ್ಮೆಲೇ ಕಣ್ಣು ಕೋರೈಸುವ ಬೆಳ ಕೊಂದು ಮೂಡಿದ್ದು ಜುಬೇದಾ ಸಮೇತ ಮನೆಮಂದಿ ಆಶ್ಚರ್ಯಚಕಿತ ರಾದರು. ಅಷ್ಟರಲ್ಲಿ ಮೀನಿನ ಮೈಮೇಲೆ ಏನೋ ಬರೆದಿದ್ದಂತೆ ಹೊಳೆಯಲಾ ರಂಭಿಸಿತು. ಗಮನಿಸಿ ನೋಡಿದಾಗ ಮೀನಿನ ಒಂದು ಬದಿಯಲ್ಲಿ ‘ಲಾ ಇಲಾಹ ಇಲ್ಲಲ್ಲಾ ಹಾಗೂ ಇನ್ನೊಂದು ಬದಿಯಲ್ಲಿ ‘ಅಲ್ಲಾ ಮುಹಮ್ಮದ್ ಎಂಬ ಅರಬಿ ಭಾಷೆಯ ಅಕ್ಷರಗಳು ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಅದನ್ನು ಪದಾರ್ಥ ಮಾಡದೆ ಹಾಗೆ ಉಳಿಸಲಾಯಿತು. ಅಬೂಬಕ್ಕರ್ ಮನೆಗೆ ಬಂದಾಗ ಈ ವಿಚಾರ ತಿಳಿದು ಸ್ಥಳೀಯ ಮಸೀದಿಯ ಧರ್ಮಗುರು ಗಳಿಗೆ ವಿಚಾರ ತಿಳಿಸಲಾಯಿತು. ಅವರೂ ಬಂದು ನೋಡಿ ಮೀನಿನ ಮೇಲೆ ಇರುವುದು ಅಲ್ಲಾಹನ ಹೆಸರು ಎಂದು ದೃಢಪಡಿಸಿದರು.
ಆದರೂ ಅಬೂಬಕ್ಕರ್ ಸ್ಥಳೀಯ ಮಸೀದಿಗಳ ಧರ್ಮಗುರು ಗಳಿಗೆ ತೋರಿಸಿದರು. ಉಳ್ಳಾಲದ ಸೈಯದ್ ಮದನಿ ದರ್ಗಾದ ಧರ್ಮ ಗುರುಗಳಿಗೂ ತೋರಿಸಲಾಯಿತು. ಅವರೂ ಇದನ್ನು ಪರೀಕ್ಷಿಸಿದ ಬಳಿಕವಷ್ಟೇ ಇವರಿಗೆ ಈ ಮೀನಿನಲ್ಲಿ ಏನೋ ವಿಶೇಷವಿದೆ ಎಂದು ಅನ್ನಿಸತೊಡಗಿತ್ತು.
ಅವರು ಅದನ್ನು ಉಸ್ತಾದರು ಹೇಳಿದಂತೆ ಮನೆಯ ಫ್ರಿಡ್ಜ್‌ನೊಳಗೆ ಬಾಕ್ಸ್‌ನಲ್ಲಿ ನೀರು ಹಾಕಿ ಇಟ್ಟರು. ಇದಾಗಿ ದಿನ ಕಳೆಯುವಷ್ಟರಲ್ಲಿ ಮನೆಯಲ್ಲಿ ಪವಾಡಗಳು ನಡೆಯ ತೊಡಗಿತು ಎನ್ನುತ್ತಾರೆ ಅಬೂಬಕ್ಕರ್.
ರೋಗ ಶಮನವಾಯಿತು!
ಮೀನನ್ನು ಸಂರಕ್ಷಿಸಿ ಇಟ್ಟ ನೀರು ಹೂವಿನ ಸುವಾಸನೆ ಬರುತಿತ್ತು. ಅಬೂಬಕ್ಕರ್ ಪತ್ನಿ ಜುಬೇದಾ ಅವರಿಗೆ ಕಳೆದ ಕೆಲವು ವರ್ಷಗಳಿಂದ ಸಕ್ಕರೆ ಕಾಯಿಲೆ ಇದೆ. ಪ್ರತಿನಿತ್ಯ ದಿನವೊಂದಕ್ಕೆ ಇಂತಿಷ್ಟು ಮಾತ್ರೆಗಳನ್ನು ಸೇವಿಸದಿದ್ದರೆ ಆರೋಗ್ಯದಲ್ಲಿ ಏರುಪೇರಾಗಿ ಊಟ ಮಾಡಲೂ ಆಗುವುದಿಲ್ಲ. ಹೀಗಿರುವಾಗ ಕುತೂಹಲಕ್ಕೆ ಈ ಮೀನಿನ ನೀರನ್ನು ಕುಡಿದ ಜುಬೇದಾ ಆ ನಂತರ ಲವಲವಿಕೆಯನ್ನು ಪಡೆದರು. ಮಾತ್ರೆ ಸೇವಿಸದೆಯೂ ಎಲ್ಲರಂತೆ ಆರೋಗ್ಯವಾಗಿದ್ದು ಊಟ ಮಾಡುವಷ್ಟು ಆರೋಗ್ಯವಾಗಿರುವುದು ಮನೆಮಂದಿ ಮಾತ್ರವಲ್ಲದೆ ಪರಿಸರವಾಸಿಗಳಲ್ಲೂ ಬೆರಗು ಮೂಡಿಸಿದೆ. ಮನೆಯಲ್ಲಿ ಅಬೂಬಕ್ಕರ್ ಅವರ ಮಗಳಿಗೆ ಹಲ್ಲುನೋವು ಇದ್ದು, ಈ ನೀರನ್ನು ನೋವಿನ ಜಾಗಕ್ಕೆ ಮುಟ್ಟಿಸಿದ ತಕ್ಷಣ ನೋವು ಶಮನವಾಗಿದೆ. ಇವರ ಹತ್ತಿರದ ಮನೆಯ ಮಹಿಳೆಯೊಬ್ಬರು ಉಬ್ಬಸ ರೋಗದಿಂದ ಬಳಲುತ್ತಿದ್ದು, ಈ ನೀರನ್ನು ಸೇವಿಸಿದ ಪರಿಣಾಮ ಗುಣಮುಖರಾಗಿದ್ದಾರೆ.
ಈ ಮೀನು ಸದ್ಯ ಸಂರಕ್ಷಿಸಲ್ಪಟ್ಟಿದ್ದು, ಧರ್ಮಗುರುವೊಬ್ಬರು ಇದನ್ನು ಮನೆಯ ಸಣ್ಣ ಮಗುವಿಗೆ ಪದಾರ್ಥ ಮಾಡಿಕೊಡಿ ಇಲ್ಲವೇ ಮಣ್ಣಿನಲ್ಲಿ ಹೂತುಬಿಡಿ ಎಂದಿದ್ದಾರೆ. ಆದರೆ ಮೀನನ್ನು ಕೇರಳಕ್ಕೆ ಕಳುಹಿಸಿ ಅಲ್ಲಿನ ಧರ್ಮಗುರುವೊಬ್ಬರಿಗೆ ತೋರಿಸಿ ಅವರ ಸಲಹೆಯಂತೆ ನಡೆಯಲು ಮನೆಮಂದಿ ತೀರ್ಮಾನಿಸಿದ್ದಾರೆ.
ಪವಾಡವೇ? (ಮೂಢ)ನಂಬಿಕೆಯೇ?
ಕೃಷ್ಣಾಪುರದ ಅಬೂಬಕ್ಕರ್ ಮನೆಯಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು ವಿಚಿತ್ರವೆಂದು ತೋರಿದರೂ ಇದನ್ನು ಮನೆಮಂದಿ, ಪರಿಸರದ ಜನರು ಮಾತ್ರ ಮೂಢನಂಬಿಕೆಯೆಂದು ಅಲ್ಲಗಳೆಯುತ್ತಿಲ್ಲ. ಇಂದಿನ ವೈeನಿಕ ಯುಗದಲ್ಲೂ ಅಲ್ಲೊಂದು-ಇಲ್ಲೊಂದು ಎಂಬಂತೆ ಜರುಗುವ ಇಂತಹ ಘಟನೆಗಳಿಗೆ ವೈಜ್ಞಾನಿಕ ಸಮರ್ಥನೆ ಸಿಕ್ಕಿಲ್ಲ. ಹಾಗಾಗಿ ಸದ್ಯ ಇದನ್ನು ಪವಾಡವೇ ಅಥವಾ ಮೂಢನಂಬಿಕೆಯೋ ಎನ್ನುವುದು ಅವರವರ ತರ್ಕಕ್ಕೆ ಬಿಟ್ಟಿದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ