ಶುಕ್ರವಾರ, ಡಿಸೆಂಬರ್ 17, 2010

ಲಷ್ಕರೆ ತಯ್ಯಿಬಾಗಿಂತ ಕೇಸರಿ ಉಗ್ರರು ಭಾರತಕ್ಕೆ ದೊಡ್ಡ ಬೆದರಿಕೆ: ರಾಹುಲ್ ಹೇಳಿಕೆಯನ್ನು ವಿಕಿಲೀಕ್ಸ್ ಬಿಡುಗಡೆ

ಹೊಸದಿಲ್ಲಿ, ಡಿ.17: ಉಗ್ರ ಸಂಘಟನೆ ಲಷ್ಕರೆ ತಯ್ಯಿಬಾಗಿಂತ ತೀವ್ರವಾದಿ ಕೇಸರಿ ಪಡೆಯಿಂದ ಭಾರತಕ್ಕೆ ಅತಿ ದೊಡ್ಡ ಬೆದರಿಕೆ ಇದೆ. ಇದು ಭಾರತದಲ್ಲಿ ಧಾರ್ಮಿಕ ವಿಷಯದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿ, ಮುಸ್ಲಿಂ ಸಮುದಾಯದೊಂದಿಗೆ ಘರ್ಷಣೆಗೆ ಇಳಿಯುತ್ತಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಭಾರತದಲ್ಲಿರುವ ಅಮೆರಿಕದ ರಾಯಭಾರಿ ತಿಮೋಟಿ ರೋಮರ್ ಬಳಿ ಹೇಳಿರುವುದಾಗಿ ವಿಕಿಲೀಕ್ಸ್ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಹೇಳಿದೆ.
ತಿಮೋಟಿ ರೋಮರ್‌ಗೆ ಪ್ರಧಾನಿ ಮನಮೋಹನ್ ಸಿಂಗ್ ಆಗಸ್ಟ್ 3, 2009ರಂದು ಏರ್ಪಡಿಸಿದ್ದ ಔತಣ ಕೂಟದಲ್ಲಿ ರಾಹುಲ್ ಈ ಹೇಳಿಕೆ ನೀಡಿದ್ದಾರೆ ಎಂದು ವಿಕಿಲೀಕ್ಸ್ ಹೇಳಿದೆ.
ಭಾರತದಲ್ಲಿರುವ ಕೆಲವು ತೀವ್ರವಾದಿ ಮುಸ್ಲಿಮರ ಬೆಂಬಲದೊಂದಿಗೆ ಲಷ್ಕರೆ ತಯ್ಯಿಬಾ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಕೆಲವು ಸಾಕ್ಷಾಧಾರಗಳಿವೆ. ಆದರೂ ಇದಕ್ಕಿಂತಲೂ ಕೇಸರಿ ಉಗ್ರರು ಬೆಳೆಯುತ್ತಿರುವುದು ಭಾರತಕ್ಕೆ ದೊಡ್ಡ ಬೆದರಿಕೆಯಾಗಿದೆ. ಅವರು ಇಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತೀಮೋಟಿಯೊಂದಿಗೆ ರಾಹುಲ್ ಹೇಳಿದ್ದಾರೆ ಎಂದು ವಿಕಿಲೀಕ್ಸ್ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಹೇಳಿದೆ.
ರಾಹುಲ್ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ