ಜಿಲ್ಲಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಖಾಸಗಿ ವಾಹನಗಳು ವಿರಳವಾಗಿ ಕಂಡು ಬಂದವು. ನಗರ ಪ್ರದೇಶದಲ್ಲಿ ಬಹುತೇಕ ಅಂಗಡಿಮುಂಗಟ್ಟುಗಳು ಮುಚ್ಚಿದ್ದು, ಜನಸಂಚಾರ ವಿರಳವಾಗಿತ್ತು.
ನಿನ್ನೆ ರಾತ್ರಿ ಮಂಜೇಶ್ವರ, ಪೊಸೋಟ್ ಬಳಿ ಕಾಸರಗೋಡು- ಮಂಗಳೂರು ದಾರಿಯಾಗಿ ಸಂಚರಿಸುವ ಖಾಸಗಿ ಬಸ್ ಮತ್ತು ಉಳಿಯತ್ತಡ್ಕದಲ್ಲಿ ಕಾಸರಗೋಡಿನಿಂದ ಮಧೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆಯಲಾಗಿದೆ. ಕಾಞಂಗಾಡ್‌ನಿಂದ ಕಾಸಗೋಡಿಗೆ, ಮತ್ತು ಕಾಸರಗೋಡಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಎರಡು ಕೆಎಸ್ಸಾರ್ಟಿಸಿ ಬಸ್‌ಗಳು ಕಲ್ಲೆಸೆತದಿಂದ ಹಾನಿಗೊಂಡಿವೆ. ಕಲ್ಲೆಸೆತದಿಂದ ಚಾಲಕ ಜೇಮ್ಸ್ ಎಂಬವರು ಗಾಯಗೊಂಡಿದ್ದು, ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಗರ ಹೊರವಲಯದ ನುಳ್ಳಿಪ್ಪಾಡಿ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸೊಂದಕ್ಕೆ ಇಂದು ಮುಂಜಾನೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಕಾಸರಗೋಡಿನಿಂದ ಗುರುವಾಯೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಅಣಂಗೂರು ಬಳಿ ಕಲ್ಲೆಸೆಯಲಾಗಿದೆ. ಈ ಕಾರಣಕ್ಕೆ ಬಸ್ ಸಂಚಾರಗಳನ್ನು ಸ್ಥಗಿತಗೊಳಿಸಲಾಗಿತ್ತು.
ಕಲ್ಲೆಸೆತದ ಹಿನ್ನೆಲೆಯಲ್ಲಿ ಕಾಸರಗೋಡು-ಮಂಗಳೂರು ದಾರಿಯಾಗಿ ಕೇರಳ ಕೆಎಸ್ಸಾರ್ಟಿಸಿ ಬಸ್‌ಗಳು ಪೊಲೀಸ್ ಬೆಂಗಾವಲಿನಲ್ಲಿ ಸಂಚಾರ ನಡೆಸಿದವು.
ನಗರದ ಹಾರ್ಡ್‌ವೇರ್ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಭಾರೀ ಹಾನಿ ಉಂಟಾಗಿರುವುದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಯನ್ನು ನಗರ ಠಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಂಗಡಿಯ ಹೊರಗಡೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಕಲ್ಲೆಸೆಯುತ್ತಿರುವ ಕಿಡಿಗೇಡಿಗಳ ದೃಶ್ಯದ ಚಿತ್ರೀಕರಣವಾ ಗಿದ್ದು, ಅದನ್ನು ಆಧರಿಸಿ ಕಿಡಿಗೇಡಿ ಗಳನ್ನು ಬಂಧಿಸಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ ಕಲ್ಪಿಸಲಾಗಿತ್ತು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ