ಮಣಿಪಾಲ- ಮಂಗಳೂರು- ಕಾಸರಗೋಡು ನಡುವೆ ಆರಂಭಿಸಿದ ವೋಲ್ವೊ ಬಸ್‌ಗಳಿಗೆ ಉತ್ತಮ ಸ್ಪಂದನೆ ದೊರೆತಿದೆ. ಮಂಗಳೂರು ನಗರ ಸಾರಿಗೆ ಆರಂಭಿಸುವ ಪ್ರಸ್ತಾವಕ್ಕೆ ಬಹಳ ದಿನಗಳ ಅನಂತರ ಇತ್ತೀಚೆಗೆ ಜರಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದೊರೆತಿದೆ.
ಇದೀಗ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ವೋಲ್ವೊ 6x2 ಮಲ್ಟಿ ಆಕ್ಸಿಲ್ ಬಸ್‌ಗಳನ್ನು ಪರಿಚಯಿಸುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಸರಕಾರಿ ವ್ಯವಸ್ಥೆಯಲ್ಲಿ ಈ ಹೈಟೆಕ್ ಬಸ್ ಹೊಂದಿರುವ ಎರಡನೇ ನಗರ ಮಂಗಳೂರು ಆಗಲಿದೆ. (ಕೆಲವು ಖಾಸಗಿ ಬಸ್ ಸಂಸ್ಥೆಗಳು ಈ ಸೌಲಭ್ಯ ಹೊಂದಿವೆ). ಪ್ರಥಮ ಹಂತದಲ್ಲಿ ಪ್ರಸ್ತುತ 2 ಹೊಸ ಬಸ್‌ಗಳು ಮಂಗಳೂರು - ಮುಂಬಯಿ (ಬೊರಿವಿಲಿ) ನಡುವೆ ಜ. 10ರಿಂದ ಪ್ರಯಾಣ ಆರಂಭಿಸಲಿವೆ. ಇನ್ನೂ 6 ಹೊಸ ಬಸ್‌ಗಳು ಶೀಘ್ರವೇ ಮಂಗಳೂರು ತಲುಪಲಿದ್ದು, ಇವು ಪುಣೆ, ಹೈದರಾಬಾದ್ ಮತ್ತು ತಿರುಪತಿ ನಡುವೆ ಸಂಚಾರ ಆರಂಭಿಸಲಿವೆ.
ಅನುಕೂಲಗಳು
13.8 ಮೀ. ಉದ್ದವಿರುವ ಈ ಬಸ್‌ಗಳು ದೂರದ ಊರಿಗೆ ಪ್ರಯಾಣಿಸುವ ಪ್ರಯಾಣಿಕರ ಸುಖ ಪ್ರಯಾಣವನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ನಿರ್ಮಿಸಲಾಗಿದೆ. ಪ್ರಯಾಣಿಕರು ನಿರಾಳವಾಗಿ ಮಲಗಿಕೊಳ್ಳಲು ಅನುಕೂಲವಾಗುವಂತೆ ಕಾಲುಗಳಿಗೆ ಬೆಂಬಲವಾಗಿ ನಿಲ್ಲುವ ಆಸನಗಳು, ಅಲುಗಾಟ ಕಿರಿಕಿರಿ ಇಲ್ಲದ ಪ್ರಯಾಣ ಸೌಕರ್ಯ ಒದಗಿಸುತ್ತದೆ ಎನ್ನುತ್ತವೆೆ ತಾಂತ್ರಿಕ ಮೂಲಗಳು.
47 ಮಂದಿ ಆಸನ ವ್ಯವಸ್ಥೆ, ಬಸ್‌ನ ಮುಂಭಾಗ ಮತ್ತು ಇಕ್ಕೆಲಗಳಿಂದ ತುಂಬಾ ದೂರದ ತನಕ ಪ್ರಕೃತಿ ಸೌಂದರ್ಯ ಸವಿಯಲು ಅನುಕೂಲವೆನಿಸುವಂತಹ ಗುಣಮಟ್ಟದ ಗಾಜು ಹಾಗೂ ಪೂರಕ ರಚನೆ ಇದೆ. 2 ಎಲ್‌ಸಿಡಿ ಟಿ.ವಿ., ಮೊಬೈಲ್, ಲ್ಯಾಪ್‌ಟಾಪ್ ಚಾರ್ಜರ್ ಸೇರಿದಂತೆ ವಿವಿಧ ಸೌಕರ್ಯಗಳನ್ನು ಬಸ್ ಹೊಂದಿದೆ.
ಟಿಕೆಟ್ ದರಮಂಗಳೂರು - ಮುಂಬಯಿ ನಡುವೆ ಸಂಚರಿಸುವ ಹೊಸ ಬಸ್‌ನ ಪ್ರಯಾಣ ದರ 1,100 ರೂ. (ಸಾಮಾನ್ಯ ವೋಲ್ವೊ ಬಸ್‌ಗಳ ಪ್ರಯಾಣ ದರ 1,033 ರೂ. ) ಅಂದರೆ ಹೊಸ ಹೈಟೆಕ್ ಬಸ್ ಪ್ರಯಾಣಕ್ಕಾಗಿ ಪ್ರಯಾಣಿಕ ಹಿಂದಿನ ಬಸ್‌ಗಳ ದರಕ್ಕಿಂತ 67 ರೂ. ಹೆಚ್ಚುವರಿ ಪಾವತಿಸಬೇಕಾಗಿದೆ.
ವೇಳಾಪಟ್ಟಿಬಸ್ ನಿರ್ದಿಷ್ಟ ಕೆಲವು ಪ್ರಮುಖ ನಿಲ್ದಾಣಗಳಿಗೆ ತಲುಪಬಹುದಾದ ಸಮಯವನ್ನು ಆವರಣದಲ್ಲಿ ನೀಡಲಾಗಿದೆ. ಮಂಗಳೂರು ನಗರದಿಂದ ಪ್ರತೀ ದಿನ ಮಧ್ಯಾಹ್ನ 2 ಗಂಟೆಗೆ ಪ್ರಯಾಣ ಆರಂಭಿಸಲಿರುವ ಮಲ್ಟಿ ಆ್ಯಕ್ಸೆಲ್ ಬಸ್‌ಗಳು ಕುಲಶೇಖರ, ವಾಮಂಜೂರು, ಗುರುಪುರ, ಕೈಕಂಬ, ಎಡಪದವು, ಮೂಡಬಿದಿರೆ (3 ಗಂಟೆ), ಕಾರ್ಕಳ (3.15), ನಿಟ್ಟೆ ಬೆಳ್ಮಣ್ ಮಂಚಕಲ್ ಕಟಪಾಡಿ, ಉಡುಪಿ (4), ಕುಂದಾಪುರ (4.35), ಭಟ್ಕಳ (5.35), ಹೊನ್ನಾವರ ಕುಮಟಾ (6.30), ಅಂಕೋಲಾ (7.20), ಯಲ್ಲಾಪುರ (8.20), ಹುಬ್ಬಳ್ಳಿ (9.20), ಧಾರವಾಡ (10), ಬೆಳಗಾವಿ (11.10), ನಿಪ್ಪಾಣಿ (12.10), ಕೊಲ್ಹಾಪುರ (12.55), ಕರ್ಹಾಡ (2) ಸಾತಾರ (2.55), ಪುಣೆ ಬೈಪಾಸ್ (ಬೆಳಗ್ಗೆ 4.15) ಮಾರ್ಗವಾಗಿ ಮುಂಬಯಿ (ಬೊರಿವಿಲಿ) ತಲುಪಲಿದೆ.
ಹಿಂದಿರುಗುವ ಪ್ರಯಾಣದ ವೇಳಾಪಟ್ಟಿ ಹೀಗಿದೆಮುಂಬಯಿಯಿಂದ ಮಧ್ಯಾಹ್ನ 12.30 ಗಂಟೆಗೆ ಹೊರಟು ಪುಣೆ ಬೈಪಾಸ್ (4.30), ಸಾತಾರ (8.10), ಕರಡ (9.00), ಕೊಲ್ಲಾಪುರ (10.00), ನಿಪ್ಪಾಣಿ (11.00), ಬೆಳಗಾವಿ (12.20), ಧಾರವಾಡ (1.30), ಹುಬ್ಬಳ್ಳಿ (1.40), ಯಲ್ಲಾಪುರ (1.45), ಅಂಕೋಲಾ (3.45), ಕುಮಟ (4.25), ಹೊನ್ನಾವರ ಭಟ್ಕಳ (5.25), ಕುಂದಾಪುರ (6.20), ಉಡುಪಿ (7.00), ಕಟಪಾಡಿ ಮಂಚಕಲ್ ಬೆಳ್ಮಣ್ ನಿಟ್ಟೆ ಕಾರ್ಕಳ (ಬೆಳಗ್ಗೆ 7.35), ಮೂಡಬಿದಿರೆ (7.55), ಎಡಪದವು ಕೈಕಂಬ (8.10) ಮಾರ್ಗವಾಗಿ ಮಂಗಳೂರು ತಲುಪಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ