ಶನಿವಾರ, ಜನವರಿ 08, 2011

ಖ್ಯಾತ ಇಸ್ಲಾಮಿಕ್ ಟಿವಿ ಚಾನೆಲ್ ಪೀಸ್ ಟಿವಿ ಕೇಬಲ್ ಟಿವಿಯಿಂದ ಮಾಯವಾಗಿದೆ

ಮಂಗಳೂರು ಪೊಲೀಸರಿಗೆ ಸುತ್ತೋಲೆ ಕಳಿಸಲು ಸೂಚಿಸಿದ್ದು ಯಾರು?
ಮಂಗಳೂರು, ಜ.8: ಮಂಗಳೂರಿನ ಕೇಬಲ್ ನೆಟ್‌ವರ್ಕ್ ಜಾಲದಲ್ಲಿ (ವಿ4 ಚಾನೆಲ್) ನಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಇಸ್ಲಾಮಿಕ್ ಟಿವಿ ಚಾನೆಲ್ ಇದ್ದಕ್ಕಿದ್ದಂತೆ ಕಳೆದೆರಡು ವಾರ ಗಳಿಂದ ಮಾಯವಾಗಿದೆ. ಇದರಿಂದ ಗೊಂದಲ ಕ್ಕೀಡಾದ ವೀಕ್ಷಕರು ಕೇಬಲ್ ಚಾನೆಲ್ ಪೂರೈಕೆದಾರರನ್ನು ಸಂಪರ್ಕಿಸಿದಾಗ, ಮಂಗಳೂರು ಗ್ರಾಮಾಂತರ ಪೊಲೀಸರು ಸುತ್ತೋಲೆಯನ್ನು ನೀಡಿದ ಕಾರಣ ಕೆಲವು ಚಾನೆಲ್‌ಗಳ ಪ್ರಸಾರವನ್ನು ನಮ್ಮ ಕೇಬಲ್ ನೆಟ್‌ವರ್ಕ್ ಜಾಲದಲ್ಲಿ ಪ್ರಸಾರ ಮಾಡುತ್ತಿಲ್ಲ. ಈ ಬಗ್ಗೆ ಪೊಲೀಸರು ನೀಡಿದ ಸುತ್ತೋಲೆಯನ್ನು ಟಿವಿಯಲ್ಲಿ ಪ್ರಸಾರ ಮಾಡುತ್ತಿದ್ದೇವೆ ಎಂದು ಉತ್ತರ ನೀಡಿದ್ದಾರೆ. ಆದರೆ ಈ ಸುತ್ತೋಲೆ ಯನ್ನು ಯಾರು, ಯಾವ ಕಾರಣಕ್ಕಾಗಿ ಜಾರಿಗೊಳಿಸಿದ್ದಾರೆ ಎಂಬುದು ಮಾತ್ರ ನಿಗೂಢ.

ಪೀಸ್ ಟಿವಿ ಪಾಕಿಸ್ತಾನದ್ದೇ?
ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳೀಯ ಕೇಬಲ್ ಪೂರೈಕೆದಾರರಿಗೆ ನೀಡಿರುವ ನೋಟಿಸ್‌ನಲ್ಲಿ ಹೀಗೆ ಕೇಳಿದ್ದಾರೆ. ‘‘ರಾಷ್ಟ್ರಾದ್ಯಂತ ನಿಷೇಧಿಸಲಾಗಿರುವ ಪಾಕಿಸ್ತಾನಿ ಟಿವಿ ಚಾನೆಲ್‌ಗಳನ್ನು ನಿಮ್ಮ ಕೇಬಲ್ ಜಾಲದಲ್ಲಿ ಪ್ರಸಾರ ಮಾಡುತ್ತೀರಾ?
QTV, ARYTV, PTV, GEOTV, EXPRESSTV, NOORTV, PEACE TV, AAJ TV, HADDITV, TAWNTV ಚಾನೆಲ್‌ಗಳು ನಿಮ್ಮ ಜಾಲದಲ್ಲಿ ಪ್ರಸಾರವಾಗುತ್ತಿದೆಯೇ? ಪ್ರಸಾರವಾಗುತ್ತಿದ್ದರೆ ಯಾವಾಗ ಪ್ರಸಾರವಾಗಿದೆ ಎಂಬ ವಿವರಣೆಯನ್ನು ತಕ್ಷಣ ನೀಡಬೇಕು’’. ಆದರೆ ಪೀಸ್ ಟಿವಿ ಜಗತ್ತಿನಾದ್ಯಂತ ಪ್ರಸಾರವಾಗುತ್ತಿರುವ ದುಬೈ ಮೂಲದ ಧಾರ್ಮಿಕ ಟಿವಿ ಚಾನೆಲ್. ಭಾರತದ ಖ್ಯಾತ ಧಾರ್ಮಿಕ ವಿದ್ವಾಂಸ ಡಾ.ಝಾಕಿರ್ ನಾಕ್ ಇದರ ಸ್ಥಾಪಕಾಧ್ಯಕ್ಷರು. ಹಾಗಿದ್ದರೆ ಪಾಕಿಸ್ತಾನಿ ಟಿವಿ ಚಾನೆಲ್‌ಗಳ ಪಟ್ಟಿಯಲ್ಲಿ ಪೀಸ್ ಟಿವಿ ಹೇಗೆ ಸೇರಿತು?
ಸುತ್ತೋಲೆ ಹೊರಡಿಸಿಲ್ಲ: ಡಿಜಿಪಿ
ಅನಧಿಕೃತ ಟಿವಿ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಿ ಪೊಲೀಸ್ ಇಲಾಖೆಯಿಂದ ಯಾವುದೇ ಸುತ್ತೋಲೆ ಜಾರಿಯಾಗಿಲ್ಲ. ಆ ವಿಚಾರ ನನ್ನ ಗಮನಕ್ಕೂ ಬಂದಿಲ್ಲ. ಚಾನೆಲ್‌ಗಳ ಪ್ರಸಾರ ನಿರ್ಬಂಧಿಸುವ ಮತ್ತು ನಿಯಂತ್ರಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲ. ಅದಕ್ಕೆಂದೇ ಬೇರೆ ವಿಭಾಗವಿದೆ.
                                                               -ಡಾ.ಅಜಯ್‌ಕುಮಾರ್ ಸಿಂಗ್, ರಾಜ್ಯ ಪೊಲೀಸ್ ಮಹಾನಿರ್ದೇಶಕ.
ಆದರೆ ಡಿಟಿಎಚ್ ಸಂಪರ್ಕವಿರುವ (ಟಾಟಾ ಸ್ಕೈ, ಬಿಗ್‌ಟಿವಿ ಇತ್ಯಾದಿ) ವೀಕ್ಷಕರಿಗೆ, ಪಕ್ಕದ ಉಡುಪಿ ಸಹಿತ ರಾಜ್ಯದಹಲವು ಜಿಲ್ಲೆಗಳ ಕೇಬಲ್ ಟಿವಿಗಳ ಜಾಲದಲ್ಲೂ ಈ ಚಾನೆಲ್ ಪ್ರಸಾರವಾಗುತ್ತಿವೆ. ದ.ಕ. ಜಿಲ್ಲೆಯಲ್ಲಿ ಮಾತ್ರವೇಕೆ ಈ ನಿಷೇಧ ಎಂಬ ಪ್ರಶ್ನೆಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದಲೂ ತೃಪ್ತಿಕರ ಉತ್ತರ ಸಿಗುತ್ತಿಲ್ಲ.
ಚಾನೆಲ್ ಪೂರೈಕೆದಾರರು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯೇ ಪೀಸ್ ಟಿವಿ ಪ್ರಸಾರ ಸ್ಥಗಿತಕ್ಕೆ ಕಾರಣ ಎನ್ನುತ್ತಾರೆ. ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣಾಧಿಕಾರಿಯವರಲ್ಲಿ ವಿಚಾರಿಸಿದಾಗ ಅನಧಿಕೃತ ಟಿವಿ ಚಾನೆಲ್‌ಗಳನ್ನು ಪ್ರಸಾರ ಮಾಡುತ್ತಿರುವ ಸ್ಥಳೀಯ ಕೇಬಲ್ ನಿರ್ವಾ ಹಕರಿಗೆ ಮೇಲಧಿಕಾರಿಗಳ ಸೂಚನೆಯ ಪ್ರಕಾರ ವಿವರಣೆ ಕೋರಿ ಸುತ್ತೋಲೆ ನೀಡಿದ್ದೇವೆ ಎಂದಿದ್ದಾರೆ.

ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸೂಕ್ತ ವಿವರಣೆ ಸಿಗದೆ ರಾಜ್ಯ ಪೊಲೀಸ್ ಮಹಾ ನೀರ್ದೇಶಕ ರನ್ನು ‘ವಾರ್ತಾಭಾರತಿ’ ಸಂಪರ್ಕಿಸಿದಾಗ ‘ನಾವು ಅಂತಹ ಯಾವುದೇ ಸುತ್ತೊಲೆ ಹೊರ ಡಿಸಿಲ್ಲ ’ ಎಂದು ಅವರು ತಿಳಿಸಿದ್ದಾರೆ. ಹಾಗಾ ದರೆ ಮಂಗಳೂರು ಪೊಲೀಸರಿಗೆ ಚಾನೆಲ್ ಪ್ರಸಾರ ನಿಲ್ಲಿಸುವ ಸೂಚನೆ ಬಂದಿದ್ದಾದರೂ ಎಲ್ಲಿಂದ? ಯಾರಿಂದ? ಮತ್ತು ಯಾವ ಆಧಾರ ದಲ್ಲಿ ಪ್ರಸಾರ ನಿಲ್ಲಿಸಲಾಗಿದೆ? ಈ ಬಗ್ಗೆ ಸ್ಪಷ್ಟ ವಿವರಗಳಿಗಾಗಿ ಮಾಹಿತಿ ಹಕ್ಕು ಕಾಯ್ದೆ ಯಡಿ ಉನ್ನತ ಪೊಲೀಸ್ ಅಧಿಕಾರಿಗಳ ಬಳಿ ಮಾಹಿತಿ ಕೋರಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕಬೀರ್ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಸಾರ ಉದ್ಯಮದ ಪ್ರಕಾರ ದೇಶದಲ್ಲಿ 300 ಉಚಿತ ಚಾನೆಲ್‌ಗಳು ಮತ್ತು 125 ಪೇ ಚಾನೆಲ್‌ಗಳಿವೆ. ಭಾರತದಲ್ಲಿ ಸೆಟಲೈಟ್ ಸೇವೆ ಪಡೆಯಲು ಅನುಮತಿ ಪಡೆದ ಚಾನೆಲ್ ಗಳನ್ನು ದೇಶದೆಲ್ಲೆಡೆ ಪ್ರಸಾರ ಮಾಡಬಹು ದಾಗಿದೆ. ಆದರೆ ಕೆಲವೊಂದು ಚಾನೆಲ್ ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದ್ದು, ಅವು ಗಳನ್ನು ಕೇಬಲ್ ನೆಟ್‌ವರ್ಕ್‌ನವರು ಕೂಡಾ ಪ್ರಸಾರ ಮಾಡುವಂತಿಲ್ಲ ಎಂದು ಅಧಿಕಾರಿ ಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ