ಶನಿವಾರ, ಜನವರಿ 08, 2011

ಅನಧಿಕೃತ ದೇವಸ್ಥಾನಗಳ ನೆಲಸಮಕ್ಕೆ ಹೈಕೋರ್ಟ್‌ ಆದೇಶ

ನಗರದೊಳಗೆ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಎಲ್ಲ ದೇವಸ್ಥಾನಗಳನ್ನು ನೆಲಸಮಗೊಳಿಸಲು ಕಟಕ್‌ ಜಿಲ್ಲಾಡಳಿತಕ್ಕೆ ಒರಿಸ್ಸಾ ಹೈಕೋರ್ಟ್‌ ಆದೇಶಿಸಿದೆ.

ಕಟಕ್‌ ನಗರದೊಳಗೆ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಅಥವ ರಸ್ತೆಗಳನ್ನು ಅತಿಕ್ರಮಣ ಮಾಡಿರುವ ಎಲ್ಲ ದೇವಸ್ಥಾನಗಳನ್ನು ಎರಡು ತಿಂಗಳಲ್ಲಿ ಕೆಡವಿ ಹಾಕಬೇಕು ಎಂದು ಜಸ್ಟಿಸ್‌ ಬಿ. ಪಿ. ದಾಸ್‌ ಮತ್ತು ಜಸ್ಟಿಸ್‌ ಎಂ. ಎಂ. ದಾಸ್‌ ಅವರ ನ್ಯಾಯಪೀಠ ಕಟಕ್‌ ನಗರದ ಸಮಸ್ಯೆಗಳ ಕುರಿತಾಗಿ ಸಲ್ಲಿಸಿದ್ದ ಪಿಐಎಲ್‌ ಒಂದನ್ನು ಇತ್ಯರ್ಥಪಡಿಸಿ ಆದೇಶಿಸಿದೆ.

ನಗರದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಎಲ್ಲ ಪೂಜಾಸ್ಥಳಗಳ ಯಾದಿ ತಯಾರಿಸಲು ವಿಭಾಗೀಯ ಪೀಠ ಜಿಲ್ಲಾಡಳಿತಕ್ಕೆ ಹೇಳಿತ್ತು.

ರಿಂಗ್‌ ರೋಡ್‌ನ್ನು ನಿರ್ವಹಿಸುತ್ತಿರುವ ರಾಜ್ಯ ನೀರಾವರಿ ಇಲಾಖೆ ಕಟಕ್‌ ನಗರಪಾಲಿಕೆ ಜತೆಗೆ ನಡೆಸಿದ ಸಮೀಕ್ಷೆಯಲ್ಲಿ ನಗರದೊಳಗೆ ರಸ್ತೆಗಳನ್ನು ಅತಿಕ್ರಮಿಸಿ ನಿರ್ಮಿಸಲಾಗಿರುವ ಕನಿಷ್ಠ 111 ದೇವಸ್ಥಾನಗಳನ್ನು ಗುರುತಿಸಿದೆ. ಪೂಜೆಯ ವೇಳೆ ಮತ್ತು ಉತ್ಸವಗಳ ಸಂದರ್ಭದಲ್ಲಿ ಈ ದೇವಸ್ಥಾನಗಳಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.

72 ದೇವಸ್ಥಾನಗಳು ನಗರದೊಳಗಿದ್ದರೆ , ಇತರ 39 ದೇವಸ್ಥಾನಗಳು ಒಂಬತ್ತು ಕಿ.ಮೀ.ಉದ್ದದ ರಿಂಗ್‌ ರೋಡ್‌ನ‌ ಬದಿಗಳಲ್ಲಿವೆ ಎಂದು ಸಮೀಕ್ಷೆ ಪತ್ತೆ ಹಚ್ಚಿದೆ.

ಸುಮಾರು ಮೂರು ವರ್ಷಗಳ ಹಿಂದೆ ಮೂರು ಕಡೆಗಳಿಂದ ನದಿಗಳಿಂದಾವೃತ್ತವಾಗಿರುವ ಈ ಮಿಲೇನಿಯಂ ನಗರವನ್ನು ಪ್ರವಾಹದಿಂದ ಸಂರಕ್ಷಿಸುವ ರಿಂಗ್‌ ರೋಡ್‌ ಬದಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕನಿಷ್ಠ 10 ದೇವಾಲಯಗಳನ್ನು ನೆಲಸಮ ಮಾಡಲಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ