ಮಂಗಳವಾರ, ಜನವರಿ 11, 2011

ವಿಧಾನಮಂಡಲದಲ್ಲಿ ಭಾರೀ ಕೋಲಾಹಲ

ಬೆಂಗಳೂರು: ಅಕ್ರಮಗಣಿಗಾರಿಕೆ, ಭೂ ಹಗರಣ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವಿಚಾರ ವಿಧಾನ ಮಂಡಲ ದಲ್ಲಿ ಪ್ರತಿಧ್ವನಿಸಿ, ಭಾರಿ ಕೋಲಾಹಲಕ್ಕೆ ಎಡೆಮಾಡಿಕೊಟ್ಟಿತು.
ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಭಾರೀ ಭ್ರಷ್ಟಾಚಾರ ದಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು ಆರೋಪಿಸಿದವು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಿಯಮ ೬೦ರಡಿಯಲ್ಲಿ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕೋಲಾಹಲವೆಬ್ಬಿಸಿದ ಪ್ರತಿಪಕ್ಷಗಳು, ಇದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಧರಣಿ ನಡೆಸಿದ ಪರಿಣಾಮವಾಗಿ ಯಾವುದೇ ಕಲಾಪ ನಡೆಯದೇ ಸದನ ನಾಳೆಗೆ ಮುಂದೂ ಡಲ್ಪಟ್ಟಿತು.
ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಪದೇ ಪದೇ ನಡೆದ ವಾಗ್ವಾದ, ನಿಂದನೆ, ಅವಹೇಳನಗಳ ನಡುವೆ ಇಡೀ ಸದನ ಕಂಪನಕ್ಕೊ ಳಗಾಯಿತಲ್ಲದೇ ಅಂತಿಮವಾಗಿ ನಿಯಮ ಅರವತ್ತರ ಅಡಿಯಲಲಿ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆ ಯಲ್ಲಿ ಸರ್ಕಾರದ ತೀರ್ಮಾನವನ್ನು ಪ್ರತಿಭಟಿಸಿ ಪ್ರತಿಪಕ್ಷಗಳು ಧರಣಿ ಗಿಳಿದವು. ಅಧಿವೇಶನ ಆರಂಭ ವಾಗುತ್ತಿದ್ದಂತೆ ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾದ ಸಿದ್ಧ ರಾಮಯ್ಯ, ಉಪನಾಯಕ ಟಿ.ಬಿ. ಜಯಚಂದ್ರ, ಜೆಡಿಎಸ್ ಹೆಚ್.ಡಿ. ರೇವಣ್ಣ, ಪರಿಷತ್ತಿನಲ್ಲಿ ಮೋಟಮ್ಮ, ನಿಲುವಳಿ ಸೂಚನೆ ಮಂಡಿಸಿ, ಮುಖ್ಯಮಂತ್ರಿ ಹಾಗೂ ಅವರ ಸಹೋದ್ಯೋಗಿಗಳು ನಡೆಸಿರುವ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಡಿಸಿಡಲು ಅವಕಾಶ ಮಾಡಿಕೊಡ ಬೇಕೆಂದು ಸಭಾ ಪೀಠಕ್ಕೆ ಮನವಿ ಮಾಡಿದರು. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಇಲ್ಲಿಯವರೆಗೆ ನಿರಂ ತರವಾಗಿ ಹಗರಣಗಳು ನಡೆದಿದ್ದು ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚೆಸಲು ನಿಯಮ ಅರವತ್ತರಡಿಯಲ್ಲಿ ಚರ್ಚಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಬಿಡಿಎ ವಶಪಡಿಸಿಕೊಂಡ ಭೂಮಿಯನ್ನು ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿದ್ದು, ಬೇಕು ಬೇಕಾದವರಿಗೆ ಭೂಮಿ ಮಂಜೂರು ಮಾಡಿದ್ದು ಹೀಗೆ ನಿರಂತರವಾಗಿ ಹಗರಣಗಳನ್ನು ನಡೆಸಿಕೊಂಡು ಬರಲಾಗಿದೆ. ಹೀಗೆ ಸಾವಿರಾರು ಕೋಟಿ ರೂ. ಹಣವನ್ನು ಲೂಟಿ ಹೊಡೆಯಲಾಗಿದ್ದು ಇದರಲ್ಲಿ ಹಗರಣ, ಸ್ವಜನಪಕ್ಷಪಾತ ಸೇರಿದಂತೆ ಎಲ್ಲ ವಿಷಯಗಳು ಅಡಕವಾಗಿವೆ. ಹೀಗಾಗಿ ನಿಯಮ ಅರವತ್ತರಡಿಯಲ್ಲಿ ನಿಲುವಳಿ ಸೂಚನೆ ಮಂಡಿಸಲು ತಮಗೆ ಅವಕಾಶ ನೀಡಬೇಕು ಎಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಒತ್ತಾಯಿಸುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಕಾನೂನು ಹಾಗೂ ನಗರಾಭಿವೃದ್ಧಿ ಸಚಿವ ಸುರೇಶ್ಕುಮಾರ್, ವಿಷಯ ನಿಲುವಳಿ ಸೂಚನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಕ್ರಿಯಾಲೋಪ ಎತ್ತಿದರು. ನಿಲುವಳಿ ಸೂಚನೆ ಮಂಡಿಸಲು ವಿಷಯ ಇತ್ತೀಚಿಗೆ ನಡೆದದ್ದಾಗಿರಬೇಕು. ಆದರೆ ಇವರು ಹೇಳುತ್ತಿರುವುದು ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಎಂದು. ಹೀಗಾಗಿ ಇದು ನಿಯಮಾವಳಿಯಡಿ ಚರ್ಚೆಗೆ ಬರಲು ಅವಕಾಶ ನೀಡಬಾರದು ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ