ಪಿಡಿಪಿ ನಾಯಕ ಅಬ್ದುನ್ನಾಸರ್ ಮಅದನಿ ವಿರುದ್ಧದ ಸಾಕ್ಷಿ ಗಳನ್ನು ಭೇಟಿಯಾದ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದ ಭಯೋತ್ಪಾದನೆ ನಿಗ್ರಹ ದಳ ವಶಕ್ಕೆ ತೆಗೆದುಕೊಂಡಿದ್ದ ಕಾರು ಚಾಲಕನನ್ನು ಬಿಡುಗಡೆಗೊಳಿಸಿದೆ.
ಮಅದನಿ ವಿರುದ್ಧದ ಸಾಕ್ಷಿಗಳನ್ನು ಭೇಟಿಯಾಗಲು ತೆಹಲ್ಕಾ ವರದಿಗಾರ್ತಿ ಶಾಹಿನಾ ಕಾಸರಗೋಡಿನಿಂದ ಮಡಿಕೇರಿಗೆ ಸಂಚರಿಸಿದ್ದ ಕಾರಿನ ಚಾಲಕನೇ ಬಿಡುಗಡೆಗೊಂಡಾತ.
ಮಾಂಗಾಡ್ ನಿವಾಸಿ, ಕಾಸರಗೋಡಿನ ಅತಿಥಿಗೃಹವೊಂದರ ಕಾರು ಚಾಲಕನಾಗಿದ್ದ ಈತನನ್ನು 3 ದಿನಗಳ ಹಿಂದೆ ಭಯೋತ್ಪಾದನ ನಿಗ್ರಹ ದಳವು ಕಾಸರಗೋಡಿ ಲ್ಲಿ ವಶಕ್ಕೆ ತೆಗೆದುಕೊಂಡಿತ್ತು. ತನಿಖೆಯ ವೇಳೆ ಈತ ನಿರಪರಾಧಿ ಎಂಬುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಎರಡು ತಿಂಗಳ ಹಿಂದೆ ಕಾಸರಗೋಡಿನಿಂದ ಕಾರಿನ ಮೂಲಕ ತೆಹಲ್ಕಾ ವರದಿ ಗಾರ್ತಿ ಶಾಹಿನಾ ಹಾಗೂ ಇನ್ನಿಬ್ಬರು ಮಡಿಕೇರಿಗೆ ತೆರಳಿ ಮಅದನಿ ವಿರುದ್ಧದ ಸಾಕ್ಷಿ ಗಳಿಂದ ಮಾಹಿತಿ ಕಲೆ ಹಾಕಿದ್ದರು. ಈ ಬಗ್ಗೆ ಮಡಿಕೇರಿ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳವು ಶಾಹಿನಾ ಹಾಗೂ ಇತರ ಇಬ್ಬರ ವಿರುದ್ಧ ಮಅದನಿ ವಿರುದ್ಧದ ಸಾಕ್ಷಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಮೊಕದ್ದಮೆ ದಾಖಲಿಸಿಕೊಂಡಿತ್ತು. ಅದರಂತೆ ಕಾಸರಗೋಡಿಗೆ ತಲುಪಿದ ಭಯೋತ್ಪಾದನಾ ನಿಗ್ರಹ ದಳವು ಶಾಹಿನಾ ಹಾಗೂ ಮತ್ತಿಬ್ಬರು ಸಂಚರಿಸಿದ್ದ ಕಾರಿನ ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ