ಮಂಗಳವಾರ, ಡಿಸೆಂಬರ್ 28, 2010

ಸಕಲೇಶಪುರದಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿ ಪರ ಕೋಡಿಹಳ್ಳಿ ಚಂದ್ರಶೇಖರ್ ಪ್ರಚಾರ

ಸಕಲೇಶಪುರ : ಸಕಲೇಶಪುರ ತಾಲ್ಲೂಕು ಪಂಚಾಯಿತಿಗೆ ಆನೆಮಹಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್.ಡಿ.ಪಿ.ಐ ಅಭ್ಯರ್ಥಿ ಸಲ್ಮಾ ಬಾಯಿ ಪರ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಚುನಾವಣಾ ಪ್ರಚಾರ ನಡೆಸಿದರು. ಕಾಂಗ್ರೆಸ್ ,ಬಿಜೆಪಿ ಮತ್ತು ಜನತಾ ದಳಗಳನ್ನು ತಿರಸ್ಕರಿಸಿ ಹೊಸ ರಾಜಕೀಯ ಶಕ್ತಿಯೊಂದರ ಉದಯಕ್ಕೆ ನಾಡಿನ ಜನ ಮುಂದಾಗಬೇಕಿದೆ ಎಂದರು. ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಆರ್.ಪಿ. ವೆಂಕಟೇಶಮೂರ್ತಿ , ನಾಗರೀಕ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿ ಕುಮಾರ್ , ವೀರಶೈವ ಸಮಾಜದ ಮುಖಂಡ ಸಾ.ಸು . ವಿಶ್ವನಾಥ್ , ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ನಾಡ್ ಮಹಬೂಬ್ , ದಲಿತ ಮುಖಂಡ ಮೀಸೆ ಮಂಜಯ್ಯ ಸಭೆಯಲ್ಲಿ ಮಾತನಾಡಿ ಎಸ್.ಡಿ.ಪಿ.ಐ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕೋರಿದರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ