ಮಂಗಳೂರು: ಜನವರಿ ಎರಡ ರಂದು ನಗರದಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಬಾಂಬ್ ಇಟ್ಟು ಭೀತಿ ಸೃಷ್ಟಿಸುವ ವ್ಯವಸ್ಥಿತ ಸಂಚಿನ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಅಂಶ ಬಹಿರಂಗ ಗೊಂಡಿದೆ. ಈಹಿನ್ನೆಲೆಯಲ್ಲಿಯೇ ಲಕ್ಷ ದ್ವೀಪದಿಂದ ನಗರಕ್ಕೆ ಆಗಮಿಸಿದ್ದ ಹಡಗಿನಲ್ಲಿ ಮಾರಕಾಯುಧ ಜೊತೆಗೆ ಕೆಲವೊಂದು ದುಷ್ಕರ್ಮಿಗಳು ಇದ್ದಾರೆ ಎಂಬ ಶಂಕೆಯಲ್ಲಿ ಪೊಲೀಸರು ತಡಕಾಡಿದ್ದರು ಎಂದು ತಿಳಿದುಬಂದಿದೆ.
ಜನವರಿಗೆ ಮುನ್ನ ಮಂಗಳೂರಿನಲ್ಲಿ ಕೋಮುಗಲಭೆ ನಡೆಸುವ ಹುನ್ನಾರ ವೊಂದು ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಈ ಹಿಂದೆಯೇ ಮಾಹಿತಿ ಇತ್ತು. ಇದರ ಅನುಸಾರ ಅವರು ಹೊರ ರಾಜ್ಯದಿಂದ ನಗರವನ್ನು ಸಂಪರ್ಕ ಮಾಡುವ ಎಲ್ಲಾ ಮಾರ್ಗಗಳ ಮೇಲೆಯೂ ದೃಷ್ಠಿ ನೆಟ್ಟಿದ್ದರು. ಪರಿಣಾಮ ಅವರ ಒಂದು ಹಂತದ ಕಾರ್ಯಾಚರಣೆ ಯಶಸ್ವಿಯಾ ಗಿದ್ದು, ಲಕ್ಷದ್ವೀಪದಿಂದ ನಗರಕ್ಕೆ ಬಂದಿರುವ ಯುವಕರ ತಂಡವೊಂದನ್ನು ಸಂಶಯದ ನೆಲೆಯಲ್ಲಿ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಇವರ ವಿಚಾರಣೆ ನಡೆ ಯುತ್ತಿದ್ದು ವಿವರ ಇನ್ನಷ್ಟೇ ಹೊರ ಬೀಳಬೇಕಿದೆ. ಆದರೂ ಒಂದು ಮೂಲದ ಪ್ರಕಾರ ಲಕ್ಷದ್ವೀಪದಿಂದ ಬಂದ ಹಡಗಿನಲ್ಲಿ ಮಹತ್ವದ ಸುಳಿವು ಪತ್ತೆಯಾಗಲಿಲ್ಲ ಮತ್ತು ಶಂಕೆ ಮೇಲೆ ಬಂಧಿಸಿದ್ದ ಯುವಕರಿಂದಲೂ ಹೆಚ್ಚಿನ ಮಾಹಿತಿ ಹೊರಬಂದಿಲ್ಲ ಎನ್ನಲಾ ಗಿದೆ.
ನಗರದಲ್ಲಿ ಹಿಂದೂ ಸಮಾಜೋತ್ಸವ ನಡೆಸುವ ಬಗ್ಗೆ ತೀರ್ಮಾನವಾದ ನಂತರ ಹಿಂದೂ ನಾಯಕರಿಗೆ ಅನಾಮಿಕ ಕರೆಗಳು ಬಂದಿದ್ದು.ಈ ಬಾರಿ ಖಂಡಿತವಾಗಿಯೂ ಹಿಂದೂ ಸಮಾಜೋತ್ಸವ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ಜಿಲ್ಲೆಯ ಆಯ ಕಟ್ಟಿನ ಸ್ಥಳಗಳಲ್ಲಿ ನಾಕಾಬಂಧಿ ಹಾಕಲಾ ಗಿತು. ಈ ನಡುವೆ ಲಕ್ಷದ್ವೀಪದಿಂದ ನಗರಕ್ಕೆ ಬರುತ್ತಿರುವ ‘ಅಲ್ ಜಝಿರ್ ಹಡಗಿನಲ್ಲಿ ಸ್ಪೋಟಕದೊಂದಿಗೆ ಅಪರಿಚಿತರು ನಗರಕ್ಕೆ ಬರುತ್ತಿರುವ ಬಗ್ಗೆ ಮಾಹಿತಿಯೊಂದು ಪೊಲೀಸರಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯತತ್ಪರರಾದ ಪೊಲೀಸರು, ತಟ ರಕ್ಷಣಾ ಪಡೆ, ಮತ್ತು ಕಸ್ಟಮ್ಸ್ ಅಧಿಕಾರಿಗಳು ಹಡಗನ್ನು ಶೋಧಿಸಿದ್ದು ಸ್ಪೋಟಕ ಪತ್ತೆಯಾಗಿಲ್ಲವಾದರೂ ಶಂಕಿತ ಯುವಕರ ತಂಡವೊಂದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಇವರು ನಗರದಲ್ಲಿ ಅಶಾಂತಿ ಸೃಷ್ಠಿಗೆಂದೇ ಬಂದವರು ಎಂಬ ಸುದ್ದಿ ಇದೆಯಾದರೂ ಅದಿನ್ನೂ ದೃಢ ಪಟ್ಟಿಲ್ಲ. ಅಂತೆಯೇ ಈ ಹಿಂದೆಯೇ ನಗರ ಸೇರಿರುವ ತಂಡವೊಂದು ಅಹಿತಕರ ಘಟನೆ ಸೃಷ್ಠಿಗೆ ಸಂಚು ರೂಪಿಸುತ್ತಿದೆ ಎಂಬ ವದಂತಿಯೂ ಹರಡಿದೆ.
ಕೋಮುಗಲಭೆಯೇ ದುಷ್ಕರ್ಮಿಗಳ ಗುರಿ
ಹಿಂದೂ ಸಮಾಜೋತ್ಸವಕ್ಕೂ ಮೊದಲು ಕೋಮುಗಲಭೆ ಉಂಟು ಮಾಡುವುದೇ ದುಷ್ಕರ್ಮಿಗಳ ಮೂಲ ಉದ್ದೇಶ ಎಂದು ಹೇಳಲಾಗುತ್ತಿದೆ. ಆದರೆ ಸಮಾಜೋ ತ್ಸವದ ನಂತರವೂ ಕೋಮುಗಲಭೆಯ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸಮಾಜೋತ್ಸವದಲ್ಲಿ ಹಿಂದೂ ಮುಖಂ ಡರ ಉಗ್ರ ಭಾಷಣಗಳ ಪರಿಣಾಮ ಕೋಮುಗಲಭೆ ಭುಗಿಲೇಳುವ ಸಾಧ್ಯತೆಗಳೂ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಭಾಷಣಕಾರರಿಗೆ ಕೆಲವೊಂದು ನಿಯಂತ್ರಣ ಗಳನ್ನು ಖುದ್ದು ಸಂಘಪರಿವಾರದ ಮುಖಂಡರೇ ಹೇರಲಿದ್ದಾರೆ. ಈ ನಡುವೆ ಹಿಂದೂ ಸಂಘಟನೆಗಳ ಮುಖಂಡರುಗಳು ತುಸು ಎಚ್ಚರಿಕೆಯಲ್ಲಿದ್ದಾರೆ. ಸುಖಾಸುಮ್ಮನೆ ಯಾವುದೇ ಕಾರ‍್ಯಕ್ರಮಕ್ಕೂ ಮುಂದೆ ಬರುತ್ತಿಲ್ಲ ಎಂದು ಆಪ್ತರು ಹೇಳುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ