ಬುಧವಾರ, ಡಿಸೆಂಬರ್ 29, 2010

ಮ೦ಗಳೂರು : ಈಶ್ವರಪ್ಪ ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸಲೂ ಅನರ್ಹ: ವಿಜಯಕುಮಾರ್

ಮಂಗಳೂರು, ರಾಜ್ಯಪಾಲರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲಿ ಎಂಬ ಹೇಳಿಕೆ ನೀಡಿ ನಗೆಪಾಟಲಿಗೀಡಾಗಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಈಶ್ವರಪ್ಪ ಕಾಂಗ್ರೆಸ್ ನಲ್ಲಿ ಕಚೇರಿ ಗುಡಿಸಲು ಕೂಡಾ ನಾಲಾಯಕ್ಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪರ ವಿರುದ್ಧ ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹರಿಹಾಯ್ದರು.
ಸುರತ್ಕಲ್‌ನ ಬ್ಲಾಕ್ ಕಾಂಗ್ರೆಸ್ ಕಚೇರಿ ಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿ ಯನ್ನುದ್ದೇ ಶಿಸಿ ಮಾತನಾಡಿದ ಅವರು, ದೇಶದ ಭ್ರಷ್ಟ ಮುಖ್ಯಮಂತ್ರಿ ಎಂದು ಹೆಸರು ಗಳಿಸಿರುವ ಯಡಿಯೂರಪ್ಪಗೆ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ಇಲ್ಲ. ಲೋಕಾಯುಕ್ತರು ರಾಜೀ ನಾಮೆ ನೀಡಿದಾಗ ಅವರ ಕಾಲು ಹಿಡಿದು ರಾಜೀನಾಮೆ ಹಿಂಪಡೆ ಯುವಂತೆ ಮಾಡಿದ ಅಡ್ವಾಣಿ ಮತ್ತು ನಿತಿನ್ ಗಡ್ಕರಿ ಈಗ ಲೋಕಾಯುಕ್ತರನ್ನು ವಿಪಕ್ಷ ನಾಯಕ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ವಿಜಯಕುಮಾರ್ ಹೇಳಿದರು.
ಕರ್ನಾಟಕದಲ್ಲಿ ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಗ್ರಾ.ಪಂ.ಗಳಿಗೆ ಮೀಸಲಾಗಿದ್ದ 1 ಲಕ್ಷ ರೂ. ಅನುದಾನವನ್ನು 5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿತ್ತು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಕೂಡಲೇ ರೈತರ ಮೇಲೆ ಗುಂಡು ಹಾರಿಸುವ ಮೂಲಕ ತನ್ನ ದುರಾಡಳಿತದತ್ತ ಹೆಜ್ಜೆ ಇರಿಸಿತು.
ಬಳಿಕ ಭೂಹಗರಣ, ಅಕ್ರಮ ಗಣಿಗಾರಿಕೆ, ಮಹಿಳೆಯರ ಮೇಲೆ ಅತ್ಯಾಚಾರ, ಭ್ರಷ್ಟಾಚಾರ, ಕಳ್ಳ ಸಾಗಾಣಿಕೆ, ಮರಳು ಮಾಫಿಯಾ, ಸ್ವಜನ ಪಕ್ಷಪಾತ ಮೊದಲಾದವುಗಳಿಂದ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಗೊಳಗಾಯಿತೇ ಹೊರತು ಬದಲಾವಣೆಯ ನಿರೀಕ್ಷೆಯಲ್ಲಿ ಮತ ನೀಡಿದ್ದ ಮತದಾರರನ್ನು ಸಂಪೂರ್ಣವಾಗಿ ವಂಚಿಸಿದೆ ಎಂದು ಅವರು ಆರೋಪಿಸಿದರು.
ಅಮಸರ್ಪಕ ಬಿಪಿಎಲ್ ಕಾಡ್ ವಿತರಣೆ, ವಿದ್ಯುತ್ ಕೊರತೆ, ನೀರಿನ ಸಮಸ್ಯೆ, ಸಿಡಿಪಿ ತಿದ್ದುಪಡಿ ಇತ್ಯಾದಿ ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಸಚಿವೆ ಶೋಭಾ ಕರಂದ್ಲಾಜೆಯ ಚುನಾ ವಣಾ ಫಲಿತಾಂಶಕ್ಕೆ ಮುಂಚಿತವಾಗಿ ಇದು ಜನಾಭಿಪ್ರಾ ಯವಲ್ಲ ಎಂಬ ಹೇಳಿಕೆ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವು ದಾಗಿ ಯಡಿಯೂರಪ್ಪ ಹೇಳುತ್ತಿರುವುದು ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಬಿಜೆಪಿಗೆ ಸೋಲು ನಿಶ್ಚಿತ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ವಿಜಯ ಶೆಟ್ಟಿ ಅಭಿಪ್ರಾಯಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ