ಬುಧವಾರ, ಡಿಸೆಂಬರ್ 29, 2010

ಹಿ೦ದೂ ಸಮಾವೇಶ : ಕೋಮು ಪ್ರಚೋದಕ ಭಾಷಣ ಮಾಡದಂತೆ ಮನವಿ

ಮಂಗಳೂರು  ನೆಹರೂ ಮೈದಾನದಲ್ಲಿ  ನಡೆಯುವ ಹಿಂದೂ ಸಮಾ ಜೋತ್ಸವದ ಮೆರವಣಿಗೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಮತೀಯ ಸೌಹಾರ್ದ ಕೆಡಿಸು ವಂತಹ ಭಾಷಣ ಮತ್ತು ಘೋಷಣೆಯನ್ನು ಮಾಡದಂತೆ ಸಂಘಟಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ ದ.ಕ.ಜಿಲ್ಲಾಧಿಕಾರಿ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದೆ.
ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್‌ರ ನೇತೃತ್ವದ ನಿಯೋಗದಲ್ಲಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಬಿ.ಅಬೂಬಕರ್, ಅಹ್ಮದ್ ಬಾವಾ ಪಡೀಲ್, ಡಿ.ಎಂ. ಅಸ್ಲಂ, ಹಮೀದ್ ಕುದ್ರೋಳಿ, ರಿಯಾಝುದ್ದೀನ್ ಹಾಜಿ, ಸದಸ್ಯ ಮುಹಮ್ಮದ್ ಬಪ್ಪಳಿಗೆ ಮತ್ತಿತರರಿ ದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ