ಬಾರ್ ಮಾಲಿಕರಿಂದ ಲಂಚ ಸ್ವೀಕರಿಸುತ್ತಿದ್ದ ಉಡುಪಿ ಅಬಕಾರಿ ನಿರಕ್ಷಕ ಹನುಮಂತಪ್ಪ ಬುಧವಾರ ಬೆಳಿಗ್ಗೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಕೊಕ್ಕರ್ಣೆಯ ಪ್ಯಾಲೆಸ್ ವೀವ್ ಬಾರ್ ಗೆ ಹನುಮಂತಪ್ಪ ಮತ್ತು ಸಿಬ್ಬಂದಿಗಳು ಎರಡು ದಿನದ ಹಿಂದೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರವಾನಿಯಲ್ಲಿರುವಂತೆ 1ಕೌಂಟರ್ ನಲ್ಲಿ ಮದ್ಯ ಮಾರುವ ಮೊದಲು 3 ಕೌಂಟರ್ ನಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿತ್ತು. ಇದನ್ನು ನೋಡಿದ ಹನುಮಂತಪ್ಪ ಲೆಡ್ಜರ್ ಮತ್ತು ಇತರ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು ಮತ್ತು ಉಡುಪಿಯ ಕಛೇರಿಯಲ್ಲಿ ತಮ್ಮನ್ನು ಕಾಣುವಂತೆ ತಿಳಿಸಿದ್ದರು.
ಅದರಂತೆ ಉಡುಪಿ ಕಛೇರಿಗೆ ಬಂದ ಬಾರ್ ಮಾಲಿಕ ಉದಯ ಶೆಟ್ಟಿಗೆ 5000 ರೂ. ತಂದುಕೊಟ್ಟರೆ ಕೇಸ್ ದಾಖಲಿಸದೆ ಪ್ರಕರಣ ಮುಗಿಸುವುದಾಗಿ ತಿಳಿಸಿದ್ದರು. ಹಾಗೆ ಹಣ ತರಲು ಹೋಗಿದ್ದ ಉದಯ ಶೆಟ್ಟಿ ಲೋಕಾಯುಕ್ತರಿಗೆ ತಿಳಿಸಿದ್ದರು. ಲೋಕಾಯುಕ್ತ ಮೇರೆಗೆ ಅವರು ನೀಡಿದ್ದ ನೋಟನ್ನೇ ಬುಧವಾರ ಬೆಳಿಗ್ಗೆ ಲಂಚ ನಡೆಸುತ್ತಿರುವ ವೇಳೆ ದಾಳಿ ನಡೆಸಿದರು. ತನಿಖೆ ಮುಂದುವರೆದಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ