ಕಳೆದ ಬಾರಿ ನೀರುಮಾರ್ಗ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎಮಿಲ್ಡಾ ಪಿಂಟೋ ಭರ್ಜರಿಯಾಗಿ ಜಯಗಳಿಸಿದ್ದರೆ, ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ನಂತರದ ಸ್ಥಾನಗಳಿಗೆ ತೃಪ್ತಿಪಟ್ಟಿದ್ದವು. ಆದರೆ ಕ್ಷೇತ್ರದಲ್ಲಿ ಈ ಬಾರಿ ಎಸ್.ಡಿ.ಪಿ.ಐ. ಬಲಿಷ್ಟಗೊಂಡಿದ್ದು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆಯನ್ನೂ ನಡೆಸಿರು ವುದರಿಂದ ರಾಜಕೀಯ ಚಿತ್ರಣವೇ ಬದಲಾಗಿದೆ.
ಈ ಬಾರಿ ಹಿಂದುಳಿದ ಬಿ ವರ್ಗಕ್ಕೆ ಮೀಸಲಾತಿ ಬಂದಿದ್ದು ಕ್ರೈಸ್ತರು ಮತ್ತು ಬಂಟ ಆಕಾಂಕ್ಷಿಗಳು ಚುರು ಕುಗೊಂಡಿದ್ದಾರೆ. ಮುಖ್ಯಮಂತ್ರಿಯವರ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದು ಇದರ ಪ್ರಭಾವ ಜಿಲ್ಲೆಯ ಮೇಲೂ ಬಿದ್ದಿದೆ. ಜಿಲ್ಲೆಯಲ್ಲೂ ಮತದಾರರ ಒಲವು ಜೆ.ಡಿ.ಎಸ್.ನತ್ತ ಇದ್ದು ಇದರ ಲಾಭ ಪಡೆಯಲು ನಾಯಕರು ಸಿದ್ಧತೆ ನಡೆಸಿ ದ್ದಾರೆ. ಇದೇ ಉದ್ದೇಶ ಹೊಂದಿರುವ ಜೆ.ಡಿ.ಎಸ್. ಮುಖಂಡರು ಕ್ರೈಸ್ತ ಅಭ್ಯ ರ್ಥಿಗೆ ಮಣೆ ಹಾಕಲು ತೀರ್ಮಾನಿಸಿ ದ್ದಾರೆನ್ನಲಾಗಿದೆ. ಜಿಲ್ಲಾ ಜೆ.ಡಿ.ಎಸ್.ನಲ್ಲಿ ಅಬೂಬಕ್ಕರ್ ನಾಟೆಕಲ್ ಪ್ರಭಾವಿ ನಾಯಕರಾಗಿದ್ದು ಇವರ ಸಹಿತ ಬಹು ತೇಕ ನಾಯಕರು ವಲೇರಿಯನ್ ಡಿ ಸೋಜರತ್ತ ಒಲವು ಹೊಂದಿದ್ದು ಇತ್ತೀಚೆಗೆ ನಡೆದ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬಂದಿದೆ ಯೆನ್ನಲಾ ಗಿದೆ. ಈ ವಿಷಯ ಕಾಂಗ್ರೆಸ್ ನಾಯ ಕರ ಗಮನಕ್ಕೆ ಬಂದಿದ್ದು ಅವರೂ ಕೂಡಾ ಪ್ರಬಲ ಅಭ್ಯರ್ಥಿಗಾಗಿ ಹುಡು ಕಾಟ ಆರಂಭಿಸಿದ್ದಾರೆ.
ಇದೇ ರೀತಿ ಕೊಣಾಜೆಗೆ ಹಿಂದು ಳಿದ ಎ ಮೀಸಲಾತಿ ಬಂದಿದ್ದು ಜೆ.ಡಿ. ಎಸ್.ನಿಂದ ಅಝೀಝ್ ಮಲಾರ್‌ಗೆ ಮತ್ತೆ ಟಿಕೆಟ್ ದೊರಕುವ ನಿರೀಕ್ಷೆ ಇದೆ. ಆದರೆ ಅವರು ಕಳೆದ ಬಾರಿ ನಡೆಸಿದ ರಾಜಕೀಯ ದೊಂಬರಾಟ ಹಾಗೂ ಅಬೂಬಕ್ಕರ್ ಜೊತೆ ಹೊಂದಿದ ವೈಮನಸ್ಸು ಟಿಕೆಟಿಗೆ ಕತ್ತರಿ ಬೀಳುವ ನಿರೀಕ್ಷೆ ಇದೆ. ಜೆ.ಡಿ.ಎಸ್.ನ ಕೆಲವು ಕಾರ್ಯಕರ್ತರೂ ಅಝೀಝ್ ಮೇಲೆ ವೈಮನಸ್ಸು ಹೊಂದಿದ್ದು ಇದನ್ನು ಅರಿತಿರುವ ಅವರು ಟಿಕೆಟ್ ಪಡೆಯಲು ಉತ್ಸುಕರಾಗಿಲ್ಲ ಎನ್ನಲಾಗಿದೆ. ಕಳೆದ ಬಾರಿ ಕ್ಷೇತ್ರವನ್ನು ಕೈಚೆಲ್ಲಿದ್ದ ಕಾಂಗ್ರೆಸ್ ಈ ಬಾರಿ ಜಯಕ್ಕಾಗಿ ಪ್ರಯತ್ನಿಸಲಿದ್ದು ಪಕ್ಷದಿಂದ ಇಬ್ರಾಹಿಂ ಕೊಡಿಜಾಲ್ ಅಥವಾ ಮುಸ್ತಫಾ ಹರೇಕಳರನ್ನು ಕಣಕ್ಕಿಳಿಸಲಿದೆ ಎನ್ನಲಾಗಿದೆ.
ಹರೇಕಳ ತಾಲೂಕು ಪಂಚಾ ಯತ್ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಿದ್ಧತೆಯಲ್ಲಿರುವ ಸಿ.ಪಿ.ಐ.ಎಂ. ಈ ಬಾರಿ ಡಿವೈಎಫ್ಐ ಮುಖಂಡ ರಫೀಕ್ ಹರೇಕಳರನ್ನು ಕಣಕ್ಕಿಳಿಸಲು ಉತ್ಸುಕವಾಗಿದೆಯೆನ್ನಲಾಗಿದೆ. ಅದೇ ರೀತಿ ಜೆ.ಡಿ.ಎಸ್.ನಿಂದ ರಹೀಂ ಬೋಳಿಯಾರ್ರನ್ನು ಕಣಕ್ಕಿಳಿಸಲು ನಾಯಕರು ಉತ್ಸುಕರಾಗಿದ್ದು ಕಾಂಗ್ರೆಸ್ ನಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಈಗಾ ಗಲೇ ಕೆಲವು ಮಂದಿ ಕಸರತ್ತು ನಡೆ ಸುತ್ತಿದ್ದು ಪಕ್ಷದ ಆಯ್ಕೆ ನಿಗೂಢವಾಗಿದೆ. ಇದಲ್ಲದೆ ಕಾಂಗ್ರೆಸ್ ವಿರುದ್ಧ ರಾಜಕೀಯ ಹೋರಾಟ ನಡೆಸುತ್ತಿರುವ ಎಸ್.ಡಿ.ಪಿ.ಐ.ನಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಇದರಿಂದಾಗಿ ಇವೆರಡೂ ಕ್ಷೇತ್ರದ ರಾಜಕೀಯವು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇನ್ನೊಂದು ವಾರದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳ ಆಯ್ಕೆಯು ನಡೆಯುವ ನಿರೀಕ್ಷೆಯನ್ನು ಮತದಾರರು ಹೊಂದಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ