ಶುಕ್ರವಾರ, ಡಿಸೆಂಬರ್ 10, 2010

ಕುಂಪಲ ಮಸೀದಿಗೆ ಮಾಂಸ ಎಸೆತ

ಮಂಗಳೂರು: ತೊಕ್ಕೊಟ್ಟು ಸಮೀಪದ ಕುಂಪಲದ ಮಸೀದಿ ಯೊಳಗೆ ದುಷ್ಕಮಿಗಳು ಮಾಂಸ ಎಸೆದು ಅಪವಿತ್ರಗೊಳಿಸಿದ ಘಟನೆ ಇಂದು ಮುಂಜಾನೆ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಂಪಲ ಬೈಪಾಸ್‌ನ ನೂರಾನಿ ಯತಿಂಖಾನದ ಬಳಿ ಇರುವ ಮಸೀದಿಗೆ ಮಾಂಸದ ತುಂಡನ್ನು ಎಸೆಯಲಾಗಿದ್ದು, ಇಂದು ಮುಂಜಾನೆ ಸ್ಥಳೀಯರು ಪ್ರಾರ್ಥನೆಗೆಂದು ತೆರಳಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಶಾಂತಿ ಕದಡುವ ಉದ್ದೇಶದಿಂದ ದುಷ್ಕರ್ಮಿಗಳು ಮಸೀದಿಯೊಳಗೆ ಮಾಂಸದ ತುಂಡನ್ನು ಎಸೆದಿರ ಬಹುದು ಎಂದು ಸಂಶಯಿಸಲಾಗಿದೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂಜಾನೆ ಘಟನಾ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದು ಪೊಲೀಸರು ಬಿಗಿ ಬಂದೊಬಸ್ತ್ ಏರ್ಪಡಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೂ ಇಲ್ಲಿ ದುಷ್ಕರ್ಮಿಗಳು ಮಸೀದಿಗೆ ಕಲ್ಲೆಸೆದು ಕಿಟಕಿಯ ಗಾಜುಗಳನ್ನು ಪುಡಿಗೊಳಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ