ಬೆಂಗಳೂರು: ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಕೋಮುವಾದಿ ಬಿಜೆಪಿ, ಭ್ರಷ್ಟ ಯಡಿ ಯೂರಪ್ಪ ಸರ್ಕಾರವನ್ನು ಮಣಿಸುವ ಸಲುವಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಪ್ರದೇಶ ಕಾಂಗ್ರೆಸ್ ವರಿಷ್ಟರನ್ನು ಒತ್ತಾಯಿಸಿದ್ದಾರೆ.
ಚುನಾವಣೆ ಹಾಗೂ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ನಿನ್ನೆ ನಡೆದ ಪಕ್ಷದ ಉನ್ನತ ಮಟ್ಟದ ಸಭೆಯ ನಂತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹೊಂದಾಣಿಕೆಗೆ ಶಿಫಾರಸ್ಸು ಮಾಡಿ ದ್ದಾರೆ.
ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಏಕಾಂಗಿಯಾಗಿ ಹೋರಾಟ ನಡೆಸಲು ಬಲಿಷ್ಠವಾಗಿದೆ. ಆದರೆ ಜಾತ್ಯತೀತ ಮತಗಳು ಹರಿದು ಹಂಚಿ ಹೋಗಿ, ಬಿಜೆಪಿಗೆ ಆಗುವ ಲಾಭವನ್ನು ತಪ್ಪಿಸುವ ಉದ್ದೇಶದಿಂದ ಮೈತ್ರಿ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ ಎಂದಿದ್ದಾರೆ.
ಕಳೆದ ಮೂವತ್ತು ತಿಂಗಳಿಂದ ಭದ್ರವಾಗಿ ಬೇರೂರಿರುವ, ಭ್ರಷ್ಟತೆಯ ಆಪಾದನೆಗಳ ನಡುವೆಯೂ ಹಣಬಲ ದಿಂದ ಚುನಾವಣಾ ರಣಾಂಗಣಕ್ಕಿಳಿ ದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್, ಜೆಡಿಎಸ್ ಪರಸ್ಪರ ಕೈಗೂಡಿಸುವುದು ಸೂಕ್ತ ಎಂದು ಅಭಿಪ್ರಾಯಿಸಿದ್ದಾರೆ.
ಇದುವರೆಗೂ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ವಿರೋಧ ವ್ಯಕ್ತಪಡಿಸುತ್ತಿದ್ದ ಪಕ್ಷದ ಹಿರಿಯ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಬೆಂಬ ಲಿಗರು ಒಲವು ತೋರಿದ್ದಾರೆ.
ಒಬ್ಬಿಬ್ಬರು ರಾಜ್ಯ ನಾಯಕರನ್ನು ಹೊರತುಪಡಿಸಿದರೆ ಇಡೀ ಪ್ರದೇಶ ಕಾಂಗ್ರೆಸ್ ಮೈತ್ರಿ ಕಡೆ ಒಲವು ತೋರಿದೆ. ಆದರೆ ಜಾತ್ಯತೀತ ಜನತಾದಳ ಏಕಾಂಗಿ ಹೋರಾಟ ನಡೆಸುವುದಾಗಿ ತಿಳಿಸಿದೆ.
ಇದರ ನಡುವೆಯೂ ಪರಮೇಶ್ವರ್ ವರಿಷ್ಠರಿಗೆ ವರದಿ ಕಳುಹಿಸಿ ದೇವೇಗೌಡ ನೇತೃತ್ವದ ಜೆಡಿಎಸ್ ಜತೆ ಹೊಂದಾ ಣಿಕೆ ಮಾಡಿಕೊಂಡರೆ ಆಗುವ ಸಾಧಕ ಭಾದಕಗಳೇನು ಎಂದು ವಿವರ ನೀಡಿ ದ್ದಾರೆ.
ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿ ಭದ್ರವಾಗಿ ತಳವೂರಿದ್ದು ಇತ್ತೀಚಿನ ಭ್ರಷ್ಟಾಚಾರದ ಪ್ರಕರಣಗಳ ಮೂಲಕ ಅದರ ವರ್ಚಸ್ಸು ಕುಗ್ಗಿದ್ದರೂ ಚುನಾವಣಾ ರಣಾಂಗಣದಲ್ಲಿ ಅದರೆ ದುರು ಏಕಾಂಗಿಯಾಗಿ ಹೋರಾಡು ವುದು ಕಷ್ಟ. ಹೀಗಾಗಿ ಕಾಂಗ್ರೆಸ್ ಪಕ್ಷ ದೇವೇಗೌಡರ ನೇತೃತ್ವದ ಜೆಡಿಎಸ್ ಜತೆ ಕೈ ಜೋಡಿಸಬೇಕು.
ಜೆಡಿಎಸ್ ಜತೆ ಕೈ ಜೋಡಿಸಿದರೆ ಪ್ರಬಲ ಒಕ್ಕಲಿಗ ವರ್ಗದ ಬೆಂಬಲ ಕಾಂಗ್ರೆಸ್‌ಗೆ ಲಭ್ಯವಾಗಲಿದೆ. ಅಲ್ಲದೆ ಪಕ್ಷದ ಸಾಂಪ್ರದಾಯಕ ಮತಗಳು ಲಭ್ಯ ವಾಗುವುದರಿಂದ ಬಿಜೆಪಿಯನ್ನು ಮಣಿ ಸಲು ಸಹಕಾರಿಯಾಗಲಿದೆ.
ಹೊಂದಾಣಿಕೆಯಿಂದ ಪಕ್ಷಕ್ಕೆ ಆಗುವ ನಷ್ಟದ ಬಗ್ಗೆಯು ಮಾಹಿತಿ ನೀಡಿರುವ ಅವರು ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ವಿಭಜನೆಯಾಗಲು ಕಾರಣವಾಗಲಿದೆ.
ಅದೇ ಕಾಲಕ್ಕೆ ಉಭಯ ಪಕ್ಷಗಳ ನಡುವಣ ಅನು ಮಾನ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆ ಸೃಷ್ಟಿ ಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಪರಮೇಶ್ವರ ವರದಿ ಆಧಾರದ ಮೇಲೆ ವರಿಷ್ಠರು ಒಂದೆರಡು ದಿನದಲ್ಲೇ ಮೃತ್ರಿ ಬಗ್ಗೆ ನಿಲುವು ತೆಗೆದುಕೊಳ್ಳಲಿ ದ್ದಾರೆ. ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಪಂಚಾತಿ ಮೊದಲ ಹಂತದ ಚುನಾವಣಾ ಪ್ರಕ್ರಿಯೆ ಆರಂಭ ಗೊಂಡಿದ್ದರೂ ಯಾವುದೇ ರಾಜ ಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಚಾಲನೆ ನೀಡಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ