ಭಾನುವಾರ, ಜನವರಿ 02, 2011

ಭಾರತೀಯ ಸೇನೆಯಲ್ಲಿ ಕೇಸರಿ ಉಗ್ರರು: ಸಂಪೂರ್ಣ ಸಂಭಾಷಣೆಯ ಮಾದರಿ

 ಕೃಪೆ ತೆಹಲ್ಕಾ: ಧ್ವನಿ ಸುರುಳಿ ಸಂಭಾಷಣೆಯ ಆಯ್ದ ಭಾಗ...
ಕ| ಪುರೋಹಿತ್, ಮೇ| ಉಪಾಧ್ಯಾಯ, ಕ| ಧಾರ್, ದಯಾನಂದ ಪಾಂಡೆ, ಬಿ.ಎಲ್.ಶರ್ಮಾ ಪ್ರೇಮ್ (ಬಿಜೆಪಿ ಸಂಸದ) ಹಾಗೂ ಆರ್.ಪಿ.ಸಿಂಗ್ (ಅಪೊಲೊ ಆಸ್ಪತ್ರೆಯ ವೈದ್ಯ ಹಾಗೂ ವಿಶ್ವ ಹಿಂದೂ ಒಕ್ಕೂಟದ ಅಧ್ಯಕ್ಷ) ಇವರೊಳಗೆ ನಡೆದ ಸಂಭಾಷಣೆಯ ಧ್ವನಿ ಮುದ್ರಿಕೆಯ ಆಯ್ದ ಭಾಗವನ್ನು ಈ ಕೆಳಗೆ ಕೊಡಲಾಗಿದೆ.
ಪುರೋಹಿತ್: ನಾವು ಎರಡು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ. ಹಾಗೂ ಅದಕ್ಕೆ ನನಗೆ ವಸ್ತು ರೂಪದ ಬೆಂಬಲ ದೊರೆತಿದೆ. ೨೦೦೭ರ ಜೂ.೨೪ರಂದು ಕ| ಲಜಪತ್ ಪ್ರಜ್ವಲ್ ನಮಗೆ ನೇಪಾಳದ ದೊರೆ ಜ್ಞಾನೇಂದ್ರ ರೊಂದಿಗೆ ಭೇಟಿ ಕಲ್ಪಿಸಿದರು. ಈ ಕೆಲಸ ಯಾರು ಮಾಡುತ್ತಿದ್ದಾರೆಂಬುದು ಈ ದೇಶದ ಯಾವನೂ ಕಲ್ಪಿಸಲು ಸಾಧ್ಯವಿಲ್ಲ. ಮೇಜರ್ ಸಾಹೇಬರಲ್ಲಿ (ಉಪಾಧ್ಯಾಯ) ೨೦ ಜನರಿದ್ದರೆ ನಾವವರಿಗೆ ತರಬೇತಿ ನೀಡುತ್ತೇವೆ.
ಆರ್.ಪಿ.ಸಿಂಗ್: ದೊರೆ ಜ್ಞಾನೇಂದ್ರರ ನಿಕಟ ಸಂಬಂಧಿಯೊಬ್ಬ ಗೋರಖಪುರ ದಲ್ಲಿ ನಮ್ಮ ಜತೆ ಕುಳಿತಿದ್ದನು. ನಾವು ಸತತವಾಗಿ ಅವರ ಸಂಪರ್ಕದಲ್ಲಿದ್ದೇವೆ. ಮೇ| ಪ್ರಯಾಗ್ ಮೋಡಕ್ ಸಹ ನವ್ಮೊಂದಿಗೆ ಸಭೆಯಲ್ಲಿರುವ ಒಬ್ಬರಾಗಿ ದ್ದಾರೆ. ನಮಗೆ ತರಬೇತಿಯಲ್ಲಿ ನೆರವು ನೀಡುತ್ತಿರುವ ಕ| ರಾಯ್ಕರ್ ಹಾಗೂ ಕ| ಹಸ್ಮುಖ್ ಪಟೇಲ್ ಇದ್ದಾರೆ. ಪ್ರಜ್ವಲ್ ರಾಣಿ ಐಶ್ವರ್ಯಾರ ಕಡೆಯಿಂದ ಬಂದಿದ್ದಾರೆ.
(ಕರ್ನಲ್ ಧಾರ್ ಕೊಠಡಿಯನ್ನು ಪ್ರವೇಶಿಸುತ್ತಾರೆ)
ಪುರೋಹಿತ್: ನಮಸ್ಕಾರ ಧಾರಜೀ (ಇತರರಿಗೆ) ಇವರು ೨೩ ವರ್ಷಗಳಿಂದ ಸೇನೆಯಲ್ಲಿದ್ದಾರೆ. ಹಾಗೂ ನನ್ನೊಂದಿಗಿ ದ್ದಾರೆ. ಅವರು ಪಾರಾ ಚೂಟ್ ರೆಜಿಮೆಂಟ್‌ನಲ್ಲಿದ್ದಾರೆ. ನಾನೂ ಅವರೊಂದಿಗೆ ನಿಯೋಜನೆಗೊಂಡಿದ್ದೆ. ಧಾರ್ ಸಾಹೇಬರೇ, ನಾನು ನಿಮ್ಮನ್ನು ಇಲ್ಲಿರುವವರಿಗೆ ಪರಿಚಯಿಸುತ್ತೇನೆ. ನಾವೆಲ್ಲ ಒಂದೇ ವಿಮಾನದಲ್ಲಿದೇವೆ. ಅದು. ಹಿಂದೂ ರಾಷ್ಟ್ರ.... ನವ್ಮೊಂದಿಗೆ ಜ| ಜೆ.ಜೆ. ಸಿಂಗ್ ಕೂಡ ಇದ್ದಾರೆ. ಅವರು ಮರಾಠಾ ರೆಜಿಮೆಂಟ್‌ನ ಭಾಗವಾಗಿದ್ದಾರೆ.
ಪಾಂಡೆ : ಸರಿ...
ಪುರೋಹಿತ್: ಸ್ವಾಮೀಜಿ ನಾವು ಕೆಲವು ವಿಷಯಗಳ ಕುರಿತು ಮಾತನಾಡಿಯೇ ಇಲ್ಲ. ಆದರೆ, ನಮ್ಮಿಂದ ಎರಡು  ಕಾರ್ಯಾಚರಣೆಗಳು ನಡೆದಿವೆ. ನಮ್ಮ ಕ್ಯಾಪ್ಟನ್‌ಗಳಲ್ಲೊಬ್ಬರು ತರಬೇತಿ ಹಾಗೂ ಸಭೆಗಾಗಿ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅತ್ಯಂತ ಧನಾತ್ಮಕ ಪ್ರತಿಕ್ರಿಯೆಯಿದೆ. ನಾವು ಇಸ್ರೇಲ್‌ನಿಂದ ನಾಲ್ಕು ವಿಷಯಗಳನ್ನು ಕೇಳಿದ್ದೇವೆ. ಶಸ್ತ್ರಾಸ್ತ್ರ  ಹಾಗೂ ತರಬೇತಿಯ ಸತತ ಹಾಗೂ ತಡೆಯಿಲ್ಲದ ಪೂರೈಕೆ, ಟೆಲ್ ಅವ್‌ನಲ್ಲಿ ಕೇಸರಿ ಬಾವುಟದೊಂದಿಗೆ ನಮ್ಮ ಒಂದು  ಕಚೇರಿ, ರಾಜಕೀಯ ಆಶ್ರಯ ಹಾಗೂ ವಿಶ್ವ ಸಂಸ್ಥೆಯಲ್ಲಿ ನಮ್ಮ ಹಿಂದೂ ರಾಷ್ಟ್ರ ಹೋರಾಟಕ್ಕೆ ಬೆಂಬಲ. ಇಸ್ರೇಲ್ ಕ್ಷೇತ್ರದಲ್ಲಿ ಯಾವುದಾದರೂ ಸಾಧನೆ ತೋರಿಸುವಂತೆ ನಮಗೆ ಸೂಚಿಸಿದೆ ಹಾಗೂ ಕನಿಷ್ಠ ಶಸ್ತ್ರಾಸ್ತ್ರ ಪೂರೈಕೆ ಹಾಗೂ ರಾಜಕೀಯ ಆಶ್ರಯದ ಭರವಸೆ ನೀಡಿದೆ. ನನ್ನಲ್ಲಿ ರಾಜ್ಯವಾರು ಮುಸ್ಲಿಂ ಜನಸಂಖ್ಯೆಯ ಪಟ್ಟಿಯಿದೆ. ಆದರೆ ಕೇವಲ ೩ ಎಕೆ-೪೭ ಗಳಿವೆ. ನಾವದನ್ನು ಬೇಗನೆ ಖರೀದಿಸಲಾರೆವು. ಏಕೆಂದರೆ ನಮ್ಮಲ್ಲಿ ಹಣವಿಲ್ಲ.
ಉಪಾಧ್ಯಾಯ: ಎಕೆ-೪೭ ಗೋರಖಪುರದ ಕೋಕ್ಸ್ ಬಜಾರ್‌ನಲ್ಲಿ ದೊರೆಯುತ್ತದೆ. ಆದರೆ, ಜಿಹಾದಿಗಳೇ ಹೆಚ್ಚಾಗಿ ಅವುಗಳನ್ನು ಮಾರುತ್ತಿದ್ದಾರೆ.
ಪುರೋಹಿತ್: ನೀವು ಬಹಳ ದುಬಾರಿ ಎ.ಕೆ.ಗಳನ್ನು ಪಡೆಯುವಿರಿ.
ಪಾಂಡೆ : ಅರೇ... ನಿಮಗೆ ಹಲವು ಎ.ಕೆ. ಬಂದೂಕುಗಳು ದೊರೆಯುತ್ತವೆ.
ಪುರೋಹಿತ್: ಇಸ್ರೇಲಿಗಳು ನಮ್ಮ ಭಾಗವಹಿಸುವಿಕೆಯ ಬಗ್ಗೆ ಪುರಾವೆ ನೀಡುವಂತೆ ಕೇಳುತ್ತಾರೆ. ಅವರಿಗೆ ಇನ್ನೂ ಹೆಚ್ಚಿನ ಪುರಾವೆ ಯಾವುದು ಬೇಕಾಗಿದೆ? ನಾವು ಎರಡು ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ.ಉಪಾಧ್ಯಾಯ: ಹೈದರಾಬಾದ್ ಸ್ಫೋಟ ನಮ್ಮ ವ್ಯಕ್ತಿಯಿಂದಲೇ ನಡೆದಿದೆ. ಕರ್ನಲ್ ನಿಮಗೆ ಆ ಬಗ್ಗೆ ಹೇಳುತ್ತಾರೆ.
ಪಾಂಡೆ : ಈ ಸಂಘಟನೆಯನ್ನು ನಿಷೇಧಿಸಿದರೆ ಏನು ಮಾಡುವುದು?
ಆಪ್ಟೆ: ನಾವದಕ್ಕೆ ಅಂತಾರಾಷ್ಟ್ರೀಯ ಆಯಾಮ ನೀಡುತ್ತೇವೆ. ಹಾಗೂ ಒಂದು ನಕಲಿ ಹೆಸರು. ನಾವು ಹೋರಾಡಲೇ ಬೇಕಾಗಿದೆ. ನೋಡಿ. ನೀವು ಹಿಂದೂ ಅಲ್ಲದಿದ್ದರೆ ನನ್ನ ಶತ್ರುವಾಗುತ್ತೀರಿ. ನೀವು ಜೀವಂತವಿದ್ದರೆ ನನಗೆ ರಕ್ಷಣೆಯಿಲ್ಲ.
ಈ ವೇಳೆ ನಾಗಾಲ್ಯಾಂಡ್‌ನ ನಿಷೇಧಿತ ನ್ಯಾಶನಲಿಸ್ಟ್ ಸೋಶಿಯಲಿಸ್ಟ್ ಕೌನ್ಸಿಲ್‌ನ ನಾಯಕ ಖೆಟೊಮಿ ಸೇಮಾ ಬಗ್ಗೆ ಉಲ್ಲೇಖಿಸಿದ ಪುರೋಹಿತ್, ಆತ ತನ್ನ ಪ್ರಾಣ ಉಳಿಸಿದ್ದಾನೆ. ಸೇಮಾ ತನ್ನ ಕೆಲಸಕ್ಕೆ ಬೆಂಬಲ ನೀಡುವಂತೆ ತನ್ನ ಎಲ್ಲ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾನೆ. ಏಳು ವರ್ಷಗಳ ಕಾಲ ಬೆಂಬಲ ನೀಡಲು ಆತ ಒಪ್ಪಿಕೊಂಡಿದ್ದಾನೆಂದು ಪಾಂಡೆಗೆ ಹೇಳುತ್ತಾನೆ.
ಅಭಿನವ ಭಾರತ್‌ಗಾಗಿ ಸೇನಾ ಯಂತ್ರಾಂಶವನ್ನು ಉಪಯೋಗಿ ಸುತ್ತಿರುವುದು ಪುರೋಹಿತ್‌ನ ಸಂಭಾಷಣೆ ಯಿಂದ ಹೊರ ಬಿದ್ದಿದೆ. ತಾನು ಅಭಿನವ ಭಾರತ್‌ನಲ್ಲಿ ಕೆಲಸ ಮಾಡ ಬಲ್ಲ ಸಮಾನ ಮನಸ್ಕ ಸೇನಾಧಿಕಾರಿಗಳನ್ನು ಒಟ್ಟು ಗೂಡಿಸುವ ಕೆಲಸದಲ್ಲಿರುವುದಾಗಿ ಆತ ಹೇಳುತ್ತಾನೆ. ದಿಲ್ಲಿಯಲ್ಲಿ ಒಬ್ಬರು ಮಾವೊವಾದಿಗಳನ್ನು ಹಿಡಿದು ಬರ್ಬರವಾಗಿ ಕೊಂದುದನ್ನು ಪುರೋಹಿತ್ ಒಪ್ಪಿಕೊಳ್ಳುತ್ತಾನೆ.
ಪುರೋಹಿತ್: ನಾನು ರೂ. ೪ ಲಕ್ಷ ಬೆಲೆಯ ಶಸ್ತ್ರಾಸ್ತ್ರಗಳನ್ನು ಅಸ್ಸಾಂನಲ್ಲಿ ಖರೀದಿಸಿದ್ದೇನೆ. ಒಬ್ಬ ಪೊಲೀಸ್ ಅಧಿಕಾರಿ ಅವುಗಳನ್ನು ನನಗೆ ನೀಡಿದ್ದಾನೆ. ಅದಕ್ಕೆ ಬಹಳ ಬೆಲೆಯಿದೆ. ನನ್ನಲ್ಲಿ ೩ ಲಕ್ಷ ವಿತ್ತು ಹಾಗೂ ಒಂದು ಲಕ್ಷ ಸಾಲ ಪಡೆದೆ. ನಾನು ನನ್ನೊಂದಿಗೆ ಪಿಸ್ತೂಲೊಂದನ್ನು ಇರಿಸಿಕೊಂಡಿದ್ದೇನೆ. ಕೆಲವು ಆಯುಧಗಳನ್ನು ನೇಪಾಳಕ್ಕೆ ಕಳುಹಿಸಿದ್ದೇನೆ. ನಮ್ಮ ಅಧ್ಯಯನ ಮುಂದುವರಿದಿದೆ. ನಾವು ಶೀಘ್ರವೇ ಕಾರ್ಯಾಚರಣೆ ಆರಂಭಿಸಲಿ ದ್ದೇವೆ. ನಮ್ಮಲ್ಲಿ ೫-೬ ಮಂದಿ ಅಗ್ರ ಮಾವೊವಾದಿ ಫೈನಾನ್ಸರ್‌ಗಳ ಪಟ್ಟಿಯಿದೆ.
ನಾವವರನ್ನು ವೊದಲು ಕೊಲ್ಲುತ್ತೇವೆ. ನನ್ನನ್ನು ಕೊಲ್ಲಲ್ಲು ದಿಲ್ಲಿಗೆ ಬಂದಿರುವ ಇಬ್ಬರು ವಾವೊವಾದಿಗಳ ಬಗ್ಗೆ ಅಸ್ಸಾಂನ ಡಿಐಜಿಯೊಬ್ಬ ನನಗೆ ಮಾಹಿತಿ ನೀಡಿರುವುದು ನಿಮಗೆ ಗೊತ್ತಿದೆ. ನಾವವ ರನ್ನು ವಸಂತ ಕುಂಜ ನಾಗರಿಕ ಕೇಂದ್ರದಲ್ಲಿ ಸೆರೆ ಹಿಡಿದು ರಾತ್ರಿಯಿಡೀ ಮುನಿಕ್ರಾದ ಒಂದು ಸ್ಥಳದಲ್ಲಿ ಇರಿಸಿದ್ದೆವು. ಮುನಿಕ್ರಾ ದಲ್ಲಿ ನಾವು ಅತಿಕ್ರಮಿಸಿರುವ ಸ್ಥಳದಲ್ಲಿ ಮನೆಯೊಳಗೆ ಚರಂಡಿಯ ಮುಚ್ಚಳ ವಿರುವುದು ನಿಮಗೆ ತಿಳಿದಿದೆ. ನಾವು ಅವರಿಂದ ಮಾಹಿತಿ ಸಂಗ್ರಹಿಸಿ, ಕೊಂದು ಚರಂಡಿಗೆಸೆದೆವು.
ದಿಲ್ಲಿಯಲ್ಲಿ ಒಬ್ಬ ಕ್ಯಾಪ್ಟನ್ ಹಾಗೂ ಒಬ್ಬ ಮೇಜರ್ ಇದ್ದಾರೆ. ನಾನು ಅವರೊಂದಿಗೆ ಫೋನಿನಲ್ಲಿ ನನ್ನ ಕೆಲಸ ಮಾಡಿಕೊಳ್ಳಲು ಸಫಲನಾಗಿದೆ. ಇಲ್ಲದಿದ್ದಲ್ಲಿ ಆ ಕೆಲಸಕ್ಕೆ ಮೂರು ತಿಂಗಳಿಗೂ ಹೆಚ್ಚು ಕಾಲ ತಗಲುತ್ತಿತ್ತು. ನಾನು ಸಂಘದಲ್ಲಿದ್ದುದರಿಂದ ಅದು ಸಾಧ್ಯ ವಾಯಿತು. ಅವರು ಕೂಡ ಸಂಘದವರೇ ಆಗಿದ್ದಾರೆ. ನನಗೆ ಆತನ ಪರಿಚಯವೂ ಇರಲಿಲ್ಲ. ಆತ ಉತ್ತರ ಪ್ರದೇಶದವನು. ಆತ ಒಂದೇ ದಿನದಲ್ಲಿ ಕೆಲಸ ಮಾಡಿ ಕೊಟ್ಟ. ಅಂತಹ ಜನರನ್ನು (ಸಂಘ ಹಿನ್ನೆಲೆಯ) ಹಿಡಿಯುವುದು  ಬಹಳ ಮುಖ್ಯ.
ಇದು ಸೇನೆಯಲ್ಲಿರುವ ವರ್ಗವೊಂದರ ಕಳವಳಕಾರಿ ಮಾನಸಿಕೆಯನ್ನು ಸೂಚಿಸುತ್ತದೆ.


:ಪಾಂಡೆ ನಾನು ಫೆ.17ರಂದು ಒರಿಸ್ಸಾದಲ್ಲಿ ‘ಆರ್ಗನೈಸರ್’ ಸಂಪಾದಕ ದೀಪಕ್ ರಥ್ ಸಂಘಟಿಸುವ ಸಭೆಯೊಂದರಲ್ಲಿ ಭಾಗವಹಿಸಬೇಕಿದೆ.
ಪುರೋಹಿತ್: ಅದು ಭವನೇಶ್ವರ ನಗರದಲ್ಲೇ? ನನಗೆ ಹೇಳಿ. ನಾನು ನನ್ನ ಒರಿಸ್ಸಾ ಕಮಾಂಡರನ್ನು ನಿಮ್ಮನ್ನು ಸ್ವಾಗತಿಸಲು ನೇಮಿಸುತ್ತೇನೆ.
ಪಾಂಡೆ : ನಿಮಗೆ ನರೇಂದ್ರ ಮೋದಿ ಗೊತ್ತೇ?
ಪುರೋಹಿತ್: ನಾನು ಒಂದೆರಡು ಬಾರಿ ಅವರನ್ನು ಭೇಟಿಯಾಗಿದ್ದೇನೆ. ಆದರೆ ಅವರು ನನಗೆ ಅತಿ ಪರಿಚಯಸ್ಥರಲ್ಲ.
ಪಾಂಡೆ: ನಿಮಗೆ ಆಸಕ್ತಿಯಿದ್ದರೆ ನಾನವರ ಭೇಟಿಯನ್ನು ಏರ್ಪಡಿಸುತ್ತೇನೆ.
ಪುರೋಹಿತ್: ಯಾಕಿಲ್ಲ?
ಪಾಂಡೆ :  ವಾಸ್ತವಾಗಿ ಸ್ವಾಮೀ ಅಸೀಮಾ ನಂದಜೀ ಎಂಬವರೊಬ್ಬರಿದ್ದಾರೆ. ಅವರಿಗೆ ನರೇಂದ್ರ ಮೋದಿ ಜೊತೆೆ ಉತ್ತಮ ಸಂಬಂಧವಿದೆ. ಅವರ ಮೂಲಕ ನಾನು ನಿಮ್ಮ ಭೇಟಿಯನ್ನು ಏರ್ಪಡಿಸ ಬಲ್ಲೆ. ಸ್ವಾಮಿ ಅಸೀಮಾನಂದ ಅಲಿಯಾಸ್ ಜತಿನ್ ಚಟರ್ಜಿ ಕ್ರೈಸ್ತರನ್ನು ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡಲು ಗುಜರಾತ್‌ನ ಡಾಂಗ್ಸ್‌ಗೆ ಬಂದಿದ್ದನು.
ಆರೆಸ್ಸೆಸ್ಸಿಗನಾದ ಆತ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜೊತೆ ನಿಕಟ ಸಂಬಂಧ ಹೊಂದಿದ್ದನು. ಆತನನ್ನೀಗ ಹಲವು ಸ್ಫೋಟ ಪ್ರಕರಣಗಳ ಸಂಬಂಧ ಬಂಧಿಸಲಾಗಿದೆ.
ಧ್ವನಿ ಸುರುಳಿಯ ಇತರ ಕೆಲವೆಡೆ ಮುಸ್ಲಿಮರ ವಿರುದ್ಧ ಅಭಿನವ ಭಾರತದ ಕಾರ್ಯತಂತ್ರದ ಕುರಿತು ಪುರೋಹಿತ್ ಮಾಹಿತಿ ನೀಡುತ್ತಾನೆ. ಅದರಲ್ಲಿ ಸುಳ್ಳು ಆರೋಪ ಹೊರಿಸಿ ಮುಸ್ಲಿಮರ ಹತ್ಯೆ ನಡೆಸುವುದೂ ಸೇರಿದೆ.
ಪುರೋಹಿತ್: ಸೇನೆ ಮತ್ತು ಗಡಿ ರಕ್ಷಣಾ ಪಡೆ ಪರಸ್ಪರ ಕಾರ್ಯಾಚರಣೆಗೆ ನೆರವು ನೀಡುವುದಿಲ್ಲ ಹಾಗೂ ಬಿಎಸ್‌ಎಫ್, ಸಿಆರ್‌ಪಿಎಫ್ ಹಾಗೂ ರಾಜ್ಯ ಪೊಲೀಸರ ನಡುವೆಯೂ ಸಮನ್ವಯವಿಲ್ಲ. ಆದುದರಿಂದ ನಾನು ಎರಡು ಮಿಲಿಟರಿ ವಾಹನಗಳನ್ನು ಗುಜರಿಯಿಂದ ಖರೀದಿಸಿ ಬಣ್ಣ ಬಳಿದು, ನಮ್ಮ ಜನರೊಂದಿಗೆ ಸೇನಾ ಸಮವಸ್ತ್ರದಲ್ಲಿ ಮೀರತ್‌ಗೆ ಕಳುಹಿಸಿದರೆ ಅವರು ಗುಂಡು ಹಾರಿಸಿ ಸುಲಭವಾಗಿ ಪರಿಸ್ಥಿತಿಯಿಂದ ಪಾರಾಗಬಲ್ಲರು.ಈ ದೇಶದಲ್ಲಿ ಹೆಚ್ಚು ಗೊಂದಲವಿಲ್ಲ.
ಈ ಸಂಭಾಷಣೆಗಳ ಬಗ್ಗೆ ತೀವ್ರ ಗಮನ ನೀಡುವುದು ಅಗತ್ಯವೆಂದು ಅಭಿಪ್ರಾಯಿಸಲಾಗಿದೆ.

ಈ ಹೇಳಿಕೆಗಳು ಪೊಲೀಸ್ ವಿಚಾರಣೆಯ ವೇಳೆ ಮುದ್ರಿಸಿಕೊಂಡದ್ದಲ್ಲ. ಬದಲಾಗಿ ಪಾಂಡೆ ಸ್ವಇಚ್ಛೆಯಿಂದ ಧ್ವನಿ ಮುದ್ರಿಸಿಕೊಂಡವುಗಳೆನ್ನಲಾಗಿದೆ.
ಸೇನೆಯಲ್ಲಿ ಪುರೋಹಿತ್ ಪ್ರಭಾವ ಎಷ್ಟಿತ್ತು ಹಾಗೂ ಜಾಲವು ಎಷ್ಟು ವಿಸ್ತಾರವಾಗಿ ಬೆಳೆದಿದೆ? ಆತ ಕೇವಲ ದೊಡ್ಡ ಜಾಲದ ಸಣ್ಣ ಕೊಂಡಿಯೇ ಎಂಬುದು ಪ್ರಶ್ನೆಯಾಗಿದೆ.ಮಕ್ಕಾ ಮಸೀದಿ ಸ್ಫೋಟಕ್ಕೆ ಟಿಎನ್‌ಟಿ ಹಾಗೂ ಆರ್‌ಡಿಎಕ್ಸ್ ಬಳಸ ಲಾಗಿದೆ.
ಜಮ್ಮು ಸೇನಾ ನೆಲೆಯಿಂದ ಪುರೋಹಿತ್ ಒಬ್ಬನೇ ಆರ್‌ಡಿಎಕ್ಸ್ ಹಾಗೂ ಆಯುಧಗಳನ್ನು ಕಳ್ಳ ಸಾಗಾಟ ಮಾಡ ಬಲ್ಲನೇ? ಆತನೊಬ್ಬನೇ ನೇಪಾಳ ಹಾಗೂ ಇಸ್ರೇಲ್‌ಗಳಿಗೆ ತರಬೇತಿಗಾಗಿ ಜನರನ್ನು ಕಳುಹಿಸ ಬಲ್ಲನೇ ಎಂಬ ಮಹತ್ವದ ಪ್ರಶ್ನೆಯನ್ನು ಮುಂಬೈಯ ಗುಪ್ತಚರ ಅಧಿಕಾರಿಯೊಬ್ಬರು ಮುಂದಿಟ್ಟಿದ್ದಾರೆ.
ಸಿನ್ಹಾಬಾದ್ ಕೋಟೆಯಲ್ಲಿ ಸ್ಫೋಟಕ್ಕಾಗಿ ಐಇಡಿ ತಯಾರಿಸಲು ಮಿಥುನ್ ಚಕ್ರವರ್ತಿ ಎಂಬ ಸೇನಾಧಿಕಾರಿ ತರಬೇತಿ ನೀಡಿದ ಬಗ್ಗೆ ಹಿಮಾಂಶು ಪೆನ್ಸೆ ಹಾಗೂ ಸಂಜಯ ಭಾವೂರಾವ್ ಚೌಧುರಿ ಎಂಬವರು ಮಂಪರು ಪರೀಕ್ಷೆಯಲ್ಲಿ ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆನ್ನಲಾಗಿದೆ. ಈ ಚಕ್ರವರ್ತಿ ಎಂಬಾತನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಪುರೋಹಿತ್‌ನ ಬಂಧನ ಮಾಡಿದಾಗ ಸೇನೆಯ ಪಾತ್ರವನ್ನು ಗೌಣವಾಗಿಸಲು ಸಾಕಷ್ಟು ಒತ್ತಡ ತಮ್ಮ ಮೇಲೆ ಬಂದಿತ್ತು. ಸೂಕ್ಷ್ಮ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬನ ನೈತಿಕತೆಯನ್ನು ಕೀಳು ಮಾಡಬಾರದೆಂದು ತಮಗೆ ತಿಳಿಸಲಾಗಿ ತ್ತೆಂದು ಹಿರಿಯ ಎಎಎಸ್ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸೇನೆಯಲ್ಲಿರುವ ಕೇಸರಿ ಉಗ್ರರ ಬಗ್ಗೆ ಹೆಚ್ಚಿನ ತನಿಖೆ ಅಗತ್ಯವೆಂದು ‘ತೆಹಲ್ಕಾ’ ಪ್ರತಿಪಾದಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ