(ಸೌದಿ ಅರೇಬಿಯಾ) ಡಿಸೆಂಬರ್ 20: ಪ್ರಜಾಪ್ರಭುತ್ವದ ಮತ್ತು ಜ್ಯಾತ್ಯಾತೀತ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಇದ್ದ ಸ್ಥಳದಲ್ಲೇ ಪುನರ್ನಿರ್ಮಿಸುವಂತೆ ದಾರುಲ್ ಮಸಾಕೀನ್ ಮಂಗಳೂರ್ ತುರೈಫ್ ಒತ್ತಾಯಿಸಿದೆ. ಬಾಬರೀ ಮಸ್ಜಿದ್ ಎಂಬ ವಿಷಯದಲ್ಲಿ ನಡೆದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾರುಲ್ ಮಸಾಕೀನ್ ಮಂಗಳೂರು
ಅಧ್ಯಕ್ಷರಾದ ಜನಾಬ್ ಅಬೂ ಹೈಫಾ ಹಾರೀಶ್ ಮಲಾರ್ ಈ ಒತ್ತಾಯವನ್ನು ಮುಂದಿಟ್ಟರು.
ಬಾಬರಿ ಮಸೀದಿ ಧ್ವಂಸ ಕೇವಲ ಮುಸ್ಲಿಂ ಸಮುದಾಯದ ಧಾರ್ಮಿಕ ಕೇಂದ್ರದ ಮೇಲೆ ನಡೆದ ದಾಳಿ ಅಲ್ಲ. ಇದು ಒಂದು ರಾಷ್ಟ್ರದ ಪ್ರಜಾಪ್ರಭುತ್ವ, ಅಲ್ಲಿನ ಸಂಸ್ಕೃತಿ ಮತ್ತು ಅಲ್ಲಿನ ಭಾವೈಕ್ಯತೆಯ ಮೇಲೆ ನಡೆದ ದಾಳಿ ಎಂದು ಹೇಳಿದರು.
ರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮರ ಹಿತಾಸಕ್ತಿ ಕಾಪಾಡುವ ಒಂದು ರಾಷ್ಟ್ರೀಯ ಪಕ್ಷವಿಲ್ಲದ ಕಾರಣ ಅಂದು ಬಾಬರಿ ಮಸ್ಜಿದ್ ಧ್ವಂಸಗೊಂಡಿತು. ಮುಸ್ಲಿಮರು ತಮ್ಮ ಹಕ್ಕು ಮತ್ತು ರಕ್ಷಣೆಗಳಿಗಾಗಿ ತಮ್ಮದೇ ಆದ ಸ್ವತಂತ್ರ ರಾಜಕೀಯ ಪಕ್ಷ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಇದರಡಿಯಲ್ಲಿ ಸಂಘಟಿತರಾಗುವುದರ ಮೂಲಕ ರಾಜಕೀಯ ಸಬಲೀಕರಣ ಹೊಂದಬೇಕೆಂದು ಹೇಳಿದರು.
463 ವರ್ಷಗಳ ಇತಿಹಾಸವಿರುವ ಬಾಬರಿ ಮಸ್ಜಿದ್ ಅನ್ನು ಕೋಮುವಾದಿ ದುಷ್ಟ ಶಕ್ತಿಗಳು ಧ್ವಂಸಗೊಳಿಸುವುದರ ಮೂಲಕ ಭಾರತದ ಸಮಾನತೆ, ಜ್ಯಾತ್ಯಾತೀತ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ವಿಶ್ವದ ಮುಂದೆ ಹರಾಜಿಗಿಟ್ಟರು . ಇದರಿಂದಾಗಿ ಜಗಿತ್ತಿನಾದ್ಯಂತ ಶಾಂತಿ, ಸೌಹಾರ್ದತೆಯನ್ನು ಸಾರಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ನೈತಿಕ ಮೌಲ್ಯಗಳನ್ನೂ ವಿಶ್ವದ ಮುಂದೆ ಕಳೆದ ಈ ಕೋಮುವಾದಿಗಳು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನ ಮತ್ತು ನ್ಯಾಯಾಂಗಕ್ಕೆ ಸುಳ್ಳು ಭರವಸೆ ನೀಡುವುದರ ಮೂಲಕ ಬಾಬರಿ ಮಸ್ಜಿದನ್ನು ಧ್ವಂಸಗೊಳಿಸಿದರು. ಕೇಂದ್ರ ಸರ್ಕಾರ ಲಿಬರ್ಹಾನ್ ಆಯೋಗದ ವರದಿಯನ್ವಯ ಈ ಪ್ರಕರಣದ ಎಲ್ಲಾ ಆರೋಪಿಗಳ ಮೇಲೆ ಆರೋಪ ಪಟ್ಟಿ ದಾಖಲಿಸಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಿಳಿಯಪಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಯೀದ್ ಇಜಿಪ್ಟ್ ಕಿರಾಅತ್ ವಾಚಿಸಿದರೆ ಜಮಾಲ್ ವಂದಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ