ಗಲ್ಫ್ ರಾಷ್ಟ್ರದಾದ್ಯಂತ ಇಂಡಿಯಾ ಫ್ರಾಟರ್ನಿಟಿ ಫೋರಂ ಸಂಘಟನೆಯು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿದ್ದು ಜಾತಿ-ಮತ-ಧರ್ಮಗಳ ಭೇದವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಭಾರತೀಯರ ಸೇವೆಗೈಯುವ ಒಂದು ಪ್ರಾಮಾಣಿಕ ಮಾನವ ಹಕ್ಕುಗಳ ಸೇವಾ ಸಂಸ್ಥೆ ಎಂದು ಜನಮನ್ನಣೆಗಳಿಸಿದೆ. ಮಾನವ ಹಕ್ಕು ಉಲ್ಲಂಘನೆ ಕೇಸುಗಳಲ್ಲಿ ನಿರಂತರವಾಗಿ ರಾಯಭಾರಿ ಕಛೇರಿಯೊಡನೆ ಸಂರ್ಪಕಿಸಿ ಕೆಲಸ ಕೈಗೆತ್ತಿಕೊಳ್ಳುತ್ತದೆ. ಮಾತ್ರವಲ್ಲದೆ ರಾಯಭಾರಿ ಕಚೇರಿಗೆ ಭಾರತೀಯ ಪ್ರತಿನಿಧಿಗಳು ಭಾಗವಹಿಸುವ ಸಮಾರಂಭಕ್ಕೆ ನಮ್ಮ ಸಂಘಟನೆಯ ಪ್ರತಿನಿಧಿಗಳಿಗೂ ನಿರಂತರವಾಗಿ ಆಹ್ವಾನ ನೀಡುತ್ತಿರುವುದು ನಮ್ಮ ಕಾರ್ಯಗಳನ್ನು ರಾಯಭಾರಿ ಕಚೇರಿ ಗುರುತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಸಂಘಟನೆಯ ಅಧ್ಯಕ್ಷ ನೌಶಾದ್ ಮಂಗಳೂರು ತಿಳಿಸಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಅನೇಕ ತಿಂಗಳಿನಿಂದ ಸಂಬಳವಿಲ್ಲದೇ ಅನೇಕ ವರ್ಷಗಳಿಂದ ಊರಿಗೆ ಹೋಗಲು ಅಸಾಧ್ಯವಾಗದೆ ಸಿಲುಕಿಕೊಂಡವರ, ಜೈಲು ಶಿಕ್ಷೆ ಮುಗಿದೂ ಕೂಡಾ ಜೈಲಲ್ಲೇ ಕೊಳೆಯುತ್ತಿರುವ ಭಾರತೀಯರ, ಅವಘಡಕ್ಕೊಳಪಟ್ಟು ಅಸಹಾಯಕರಾದವರಿಗೆ, ಅನಾರೋಗ್ಯ ಪೀಡಿತರಿಗೆ, ಹಾಗೂ ಮರಣ ಹೊಂದಿದ ಅನಿವಾಸಿ ಭಾರತೀಯರಿಗೆ ಅಗತ್ಯವಿರುವ ಸೇವಾ ಕಾರ್ಯಗಳನ್ನು IFF ಮಾಡುತ್ತಾ ಬಂದಿದ್ದು ಇದರ ಫಲಾನುಭವಿಗಳು ಊರಿನಲ್ಲಿಯೂ ಅನೇಕರಿದ್ದಾರೆ. ನಮ್ಮ ನಿಷ್ಕಳಂಕ ಸೇವೆಗಳನ್ನು ಕಂಡು ಅನೇಕ ಸಂಘ-ಸಂಸ್ಥೆಗಳು ಹಾಗೂ ಜೈಹಿಂದ್ ಟಿ.ವಿ ಗಲ್ಫ್ ವಿಭಾಗ 2009ರಲ್ಲಿ ಪುರಸ್ಕರಿಸಿದೆ. ಕೇವಲ IFF ರಿಯಾದ್ ಘಟಕ ಒಂದರಲ್ಲೇ 2010 ರಲ್ಲಿ ಸಾವಿರಕ್ಕೂ ಮೇಲ್ಪಟ್ಟು ಜನರ ಸೇವೆ ಗಳನ್ನು ಮಾಡಿ ಫಲಾನುಭವಿಗಳ ಆಶೀರ್ವಾದ ಪಡೆದಿರುವ ಸದಸ್ಯರಿದ್ದಾರೆ. IFF ನ ಉತ್ತಮ ಸೇವೆಗಳ ಕುರಿತಾದ ವರದಿಗಳು ಆಗಾಗ್ಗೆ ದಿನ ಪತ್ರಿಕೆಗಳಲ್ಲಿ ವರದಿಯಾಗುತ್ತಾ ಇರುತ್ತದೆ.
ಅನೇಕ ವರುಷಗಳಿಂದ ಹಲವಾರು ಉತ್ಕ್ರಷ್ಟ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿರುವ ಜೊತೆಗೆ ಭಾರತೀಯರ ಕಷ್ಟಗಳಿಗೆ ಸ್ಪಂದಿಸುವ ಒಂದು ಪ್ರಾಮಾಣಿಕ ಸಂಸ್ಥೆಯನ್ನು ಒಬ್ಬ ಕ್ರಿಮಿನಲ್ ಜೊತೆ ಸಂಬಂಧ ಕಲ್ಪಿಸುವ ಹುನ್ನಾರ ರಾಜಕೀಯ ಪ್ರೇರಿತವಾದ ದುರಾಲೋಚನೆಯಿಂದ ಕೂಡಿದ್ದು ಇದರಿಂದಾಗಿ ಸಂಘಟನೆಯ ಸದಸ್ಯರ ಉತ್ಸಾಹ ಕುಂದಿಸಬಹುದು ಎಂಬ ದುರಾಲೋಚನೆ ಪೀತ ಪತ್ರಿಕೆಗಳಿಗಿದ್ದರೆ ಅದು ದೂರದ ಮಾತು. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಇಂತಹ ಹೊಣೆಗೇಡಿತನದ ವರದಿಗಳನ್ನು ಪ್ರಕಟಿಸುವ ಪೀತ ಪತ್ರಿಕೆಗಳ ವರದಿಗಳಿಗೆ ಜನತೆ ಕಿವಿಗೊಡಬಾರದೆ೦ದು ಹಾಗೂ ಎಲ್ಲರ ಸಹಕಾರವನ್ನು ಮುಂದೆಯೂ ನಿರೀಕ್ಷಿಸುತ್ತಾ ಅನಿವಾಸಿ ಭಾರತೀಯರ ಸೇವೆಗೆ ಜಾತಿ, ಮತ , ರಾಜ್ಯ ಹಾಗೂ ಭಾಷೆಗಳ ಭೇದವಿಲ್ಲದೇ ಇಂಡಿಯಾ ಫ್ರಾಟರ್ನಿಟಿ ಫೋರಂ ಮುಂದೆಯೂ ಸದಾ ಸಿದ್ಧವಿದೆ ಎಂದು ಸಂಘಟನೆಯ ರಿಯಾದ್ ಘಟಕದ ಅಧ್ಯಕ್ಷ ನೌಶಾದ್ ಮಂಗಳೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ