ಮಂಗಳವಾರ, ನವೆಂಬರ್ 30, 2010

ಅಯೋಧ್ಯಾ ಪ್ರಕರಣ ತೀರ್ಪು ಪರಿಶೀಲನೆಗೆ ಮನವಿ

ಲಕ್ನೋ, ನ.30: ರಾಮ ಜನ್ಮ ಭೂಮಿ ಮತ್ತು ಬಾಬರಿ ಮಸೀದಿ ಹಕ್ಕು ದಾವೆಯಲ್ಲಿ ನೀಡಿದ್ದ ತೀರ್ಪುಗಳಲ್ಲಿನ ಒಂದು ತೀರ್ಪನ್ನು ಪರಿಶೀಲಿಸುವಂತೆ ಇಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ವಿಶೇಷ ಪೀಠಕ್ಕೆ ಮನವಿ ಸಲ್ಲಿಸಲಾಗಿದೆ. ಹಕ್ಕು ದಾವೆಯ ಸಂಬಂಧ ಕೋರ್ಟ್ ಸೆಪ್ಟಂಬರ್ 30ರಂದು ರಾಮಲಲ್ಲಾಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪನ್ನು ಪರಿಶೀಲಿಸಬೇಕೆಂದು ಇಸ್ಮಾಯೀಲ್ ಫಾರೂಕಿ ಎಂಬವರು ಮನವಿ ಸಲ್ಲಿಸಿದ್ದಾರೆ.
ಹಕ್ಕು ದಾವೆ ಇತ್ಯರ್ಥಕ್ಕೆ ಸಾಕಷ್ಟು ಸಮಯ ತೆಗದುಕೊಂಡಿದ್ದು, ಅದರ ನಿಗದಿತ ಸಮಯ ಮೀರಿರುವುದರಿಂದ ನ್ಯಾಯದ ದೃಷ್ಟಿಯಿಂದ ಈ ತೀರ್ಪನ್ನು ಪರಿಶೀಲಿಸುವಂತೆ ಫಾರೂಕಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಹಕ್ಕು ದಾವೆ ಸಂಬಂಧ ಸೆಪ್ಟಂಬರ್ 30 ರಂದು ಅಂತಿಮ ತೀರ್ಪು ನೀಡಿದ್ದ ಅಲಹಾಬಾದ್ ಕೋರ್ಟ್ ಅಂತಿಮ ಡಿಕ್ರಿಯ ವಿಚಾರಣೆಯನ್ನು ಡಿಸೆಂಬರ್ 10ರಂದು ನಡೆಸಲಿದ್ದು, ಇದಕ್ಕೆ ಸಂಬಂಧಿಸಿದ ಸಲಹೆ ಮತ್ತು ಆಕ್ಷೇಪಗಳನ್ನು ಆರು ದಿನಗಳೊಳಗೆ ಸಲ್ಲಿಸುವಂತೆ ದಾವೆದಾರರಿಗೆ ನಿನ್ನೆ ಕೋರ್ಟ್ ಸೂಚಿಸಿತ್ತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ