ರಿಯಾದ್, ನ.30: ಇಸ್ರೇಲ್‌ನ ಪರಮಾಣು ಸ್ಥಾವರಗಳನ್ನು ಪರಿಶೀಲಿಸುವಂತೆ ಅಂತಾರಾಷ್ಟ್ರೀಯ ಅಣು ಇಂಧನ ಸಂಸ್ಥೆ(ಐಎಇಎ)ಗೆ ಸೌದಿ ಶುರಾ ಕೌನ್ಸಿಲ್‌ನ ಮುಖ್ಯಸ್ಥ ಕರೆ ನೀಡಿದ್ದಾರೆ.
ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ನಡೆದ ಐದನೆ ಏಶ್ಯನ್ ಪಾರ್ಲಿಮೆಂಟರಿ ಅಸೆಂಬ್ಲಿಯ ನೇಪಥ್ಯದಲ್ಲಿ ಸೋಮವಾರ ಅಬ್ದುಲ್ಲಾ ಬಿನ್ ಮುಹಮ್ಮದ್ ಬಿನ್ ಇಬ್ರಾಹೀಂ ಅಲ್ ಶೇಖ್ ಈ ಕರೆ ನೀಡಿದ್ದಾರೆ.
‘‘ಅಣ್ವಸ್ತ್ರಗಳನ್ನು ಬಳಸುವ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ತನ್ನ ಪರಮಾಣು ವ್ಯವಸ್ಥೆಗಳ ಪರಿಶೀಲನೆ ನಡೆಸಲು ಐಎಇಎಯ ತಪಾಸಣಾಧಿಕಾರಿಗಳಿಗೆ ತಡೆಯೊಡ್ಡುತ್ತಿರುವ ಏಕೈಕ ರಾಷ್ಟ್ರ ಇಸ್ರೇಲ್ ಆಗಿದೆ’’ ಎಂದು ಅಬ್ದುಲ್ಲಾ ಅಲ್ ಶೇಖ್‌ರನ್ನು ಉಲ್ಲೇಖಿಸಿ ‘ಇರ್ನಾ’ ವರದಿ ಮಾಡಿದೆ. ಡಮಾಸ್ಕಸ್ ಸಮಾವೇಶದ ಕಾರ್ಯಸೂಚಿಯಲ್ಲಿ ಚರ್ಚಿಸಲ್ಪಡುವ ಪ್ರಮುಖ ವಿಷಯಗಳಲ್ಲಿ ಫೆಲೆಸ್ತೀನ್ ವಿವಾದವು ಹೆಚ್ಚಿನ ಆದ್ಯತೆಯನ್ನು ಪಡೆದಿದೆ ಎಂದೂ ಅವರು ತಿಳಿಸಿದ್ದಾರೆ. ಏಶ್ಯನ್ ಪಾರ್ಲಿಮೆಂಟರಿ ಅಸೆಂಬ್ಲಿಯ ಐದನೆ ಸಮಾವೇಶವು ಸೋಮವಾರ ಮುಂಜಾನೆ ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿ ಉದ್ಘಾಟನೆಗೊಂಡಿದೆ.
41 ಏಶ್ಯನ್ ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ 17 ಅಂತಾರಾಷ್ಟ್ರೀಯ ಸಂಘಟನೆಗಳ ವೀಕ್ಷಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 1ರವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ಏಶ್ಯನ್ ರಾಷ್ಟ್ರಗಳು ಭಯೋತ್ಪಾದನೆಯನ್ನು ಹತ್ತಿಕ್ಕುವ ಹಾಗೂ ಅತಿಕ್ರಮಣದ ವಿರುದ್ಧ ಹೋರಾಡುವ ನೀತಿಯ ಕುರಿತು ವ್ಯಾಪಕ ಚರ್ಚೆ ನಡೆಸಲಿವೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ, ಉತ್ತಮ ಆರೋಗ್ಯ ಸಾಧನೆ, ವಿವಿಧ ರಾಷ್ಟ್ರಗಳ ನಡುವೆ ಸ್ನೇಹ ಹಾಗೂ ಸಹಕಾರದ ನೀತಿಯನ್ನು ಉತ್ತೇಜಿಸುವುದು, ಸದಸ್ಯ ರಾಷ್ಟ್ರಗಳ ಮೇಲೆ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳು ಹಾಗೂ ಹವಾಮಾನ ಬದಲಾವಣೆ ಮೊದಲಾದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ