ಪಟ್ನಾ : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ವಿಧಾನ ಸಭೆಗೆ ಒಟ್ಟು ೧೯ ಮಂದಿ ಮುಸ್ಲಿಂ ಸಮುದಾಯದ ಸದಸ್ಯರು ಚುನಾಯಿತರಾಗಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರಾಗಿದ್ದು ಉಳಿದ ೧೭ ಮಂದಿ ಪುರುಷರು. ಬಿಹಾರ ವಿಧಾನಸಭೆಗೆ ಕಳೆದ ವಿಧಾನಸಭೆಯಲ್ಲಿ ಒಟ್ಟು ೧೫ ಮಂದಿ ಮುಸ್ಲಿಮರು ಚುನಾಯಿತರಾಗಿದ್ದರು. ಈ ಬಾರಿ ಆಯ್ಕೆಯಾದ ಬಹುತೇಕ ಮಂದಿ ಯುವಕರಾಗಿದ್ದು ಉನ್ನತ ವ್ಯಾಸಾಂಗ ಮಾಡಿರುವವರಾಗಿದ್ದು ವಿಶೇಷ . ಕಳೆದ ಬಾರಿ ಚುನಾಯಿತರಾಗಿದ್ದ ೧೫ ಮಂದಿಯ ಪೈಕಿ ಕೇವಲ ೫ ಮಂದಿ ಮಾತ್ರ ಈ ಬಾರಿ ಪುನರಾಯ್ಕೆಯಾಗಿದ್ದಾರೆ. ಉಳಿದವರೆಲ್ಲರೂ ಹೊಸ ಮುಖಗಳು .ಈ ಬಾರಿ ಆಯ್ಕೆಯಾದವರಲ್ಲಿ ಒಟ್ಟು ೭ ಮಂದಿ ಸಂಯುಕ್ತ ಜನತಾದಳದಿಂದ ಆಯ್ಕೆಯಾಗಿದ್ದರೆ ಆರು ಮಂದಿ ಆರ್.ಜೆ.ಡಿ ಪಕ್ಷದಿಂದ , ಲೋಕ ಜನಶಕ್ತಿ ಪಕ್ಷದಿಂದ ಇಬ್ಬರು , ಕಾಂಗ್ರೆಸಿನಿಂದ ಮೂವರು ಮತ್ತು ಬಿಜೆಪಿಯಿಂದ ಒಬ್ಬ ಮುಸ್ಲಿಂ ಸಮುದಾಯದ ಸದಸ್ಯರಾಗಿದ್ದಾರೆ. ಇವರಲ್ಲಿ ಆರ್.ಜೆ.ಡಿ ಯಿಂದ ಆಯ್ಕೆಯಾದ ಅಬ್ದುಲ್ ಬಾರಿ ಸಿದ್ದೀಕಿ (೬೩) ಅತ್ಯಂತ ಹಿರಿಯರಾಗಿದ್ದರೆ ರಾಷ್ಟ್ರೀಯ ಜನತಾದಳದಿಂದ ಆಯ್ಕೆಯಾದ ಅಖ್ತರುಲ್ ಇಸ್ಲಾಂ ಶಾಹೀನ್ (೩೧) ಮತ್ತು ಕಾಂಗ್ರೆಸಿನಿಂದ ಆಯ್ಕೆಯಾದ ಮಹಮ್ಮದ್ ತೌಸೀಫ್ ಆಲಂ (೩೧) ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ