ನಾಣ್ಯಗಳ ಹಾಗೂ ರೂಪಾಯಿಗಳ ಗಾತ್ರ ಬದಲಾವಣೆಗಾಗಿ ಸ
ಲಹೆಗಳನ್ನು ನೀಡಲು ನೇಮಿಸಲಾದ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನಂತೆ, ಎರಡು ರೂಪಾಯಿ ನಾಣ್ಯವನ್ನು ಒಂದು ರೂಪಾಯಿ ಗಾತ್ರಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ವಿತ್ತಖಾತೆ ರಾಜ್ಯ ಸಚಿವ ನಮೋ ನರೈನ್ ಮೀನಾ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.ಸಂಸತ್ ಸದಸ್ಯ ರಾಮಚಂದ್ರ ಖುಂಟಿಯಾ ಅವರ ಪ್ರಶ್ನೆಗಳಿಗೆ, ಸಚಿವ ನಮೋನರೈನ್ ಮೀನಾ ಲಿಖಿತ ಉತ್ತರ ನೀಡಿದರು.
ಸಾರ್ವಜನಿಕರು ಒಂದು ರೂಪಾಯಿ ಹಾಗೂ ಎರಡು ರೂಪಾಯಿಗಳ ನಾಣ್ಯಗಳನ್ನು ಬಳಸುವ ಸಂದರ್ಭದಲ್ಲಿ, ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು, ಸಮಿತಿ ನೀಡಿದ ಶಿಫಾರಸ್ಸುಗಳನ್ನು ಕೇಂದ್ರ ಸರಕಾರ ಸ್ವೀಕರಿಸಿದೆ ಎಂದು ಸಚಿವ ಮೀನಾ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ