ಫ್ಯಾಸಿಸ್ಟ್ ಶಕ್ತಿಗಳ ಕೋಮುವಾದಿ ಅಜೆಂಡಾಗಳಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಕೆಲ ನಿಷ್ಠಾವಂತ, ದಕ್ಷ ಪೊಲೀಸ್ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ದಕ್ಷ ಅಧಿಕಾರಿಗಳಲ್ಲಿ ಅಮಿತ್ ಕುಮಾರ್ ಸಿಂಗ್ ಒಬ್ಬರು. ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಂಡ ಅಧಿಕಾರಿಯ ಕಾರ್ಯಾಚರಣೆಗೆ ಅಡ್ಡಿಪಡಿಸಿರುವ ಕೋಮು ವಾದಿ ಶಕ್ತಿಗಳು ಅವರನ್ನು ವರ್ಗಾವಣೆ ಮಾಡಲು ಸರಕಾರದ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿವೆ. ಸರಕಾರದ ಈ ಕ್ರಮವನ್ನು ವಿರೋಧಿಸಿ ಜಿಲ್ಲೆಯಾ ದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾ ಗುವುದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಅನ್ವರ್ ಸಾದತ್ ತಿಳಿಸಿದ್ದಾರೆ.
ಕಾನೂನು ಪ್ರಕಾರ ಕರ್ತವ್ಯ ನಿರ್ವಹಿ ಸಿದ ಎಎಸ್ಪಿ ಅಮಿತ್ ಕುಮಾರ್ ಸಿಂಗ್ ಮನೆಯ ಮುಂದೆ ಸಂಸದರು, ಶಾಸಕರು ಧರಣಿ ನಡೆಸುವ ಅಗತ್ಯವಾದರೂ ಏನಿತ್ತು. ಉತ್ತಮ ಆಡಳಿತ ನೀಡಬೇಕಾದ ಜನಪ್ರತಿನಿಧಿಗಳು ಕಾನೂನು ಉಲ್ಲಂಘಿ ಸುವವರಿಗೆ ಬೆಂಬಲ ನೀಡುವುದು ಸರಿಯಾದ ವರ್ತನೆಯಲ್ಲ ಎಂದು ಮಾನವ ಹಕ್ಕುಗಳ ಹೋರಾಟಗಾರರ ಸಂಘಟನೆಯ ಮುಖಂಡ ನಿರ್ಮಲ್ ಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ ದಲಿತರಿಗೆ, ದುರ್ಬಲರಿಗೆ ನ್ಯಾಯ ರಕ್ಷಣೆ ನೀಡಬೇಕಾಗಿರುವ ವ್ಯವಸ್ಥೆಯ ಬದಲು ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಸಾಗಿದೆ. ಇಂತಹ ಪರಿಸ್ಥಿತಿ ಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರನ್ನು ವರ್ಗಾಯಿಸಿರುವುದು ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಸಂಚಾಲಕ ಆನಂದ ಟೀಕಿಸಿದರು.
ಉನ್ನತ ಪೊಲೀಸ್ ಅಧಿಕಾರಿಯ ಮನೆಯ ಮುಂದೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಭಯದ ವಾತಾವರಣ ಸೃಷ್ಟಿಸಿದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾದರೂ ಸೂಕ್ತ ಕ್ರಮ ಜರುಗಿಸಿಲ್ಲ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಕಕ್ಕಿಂಜೆ ಎಎಸ್ಪಿ ವರ್ಗಾವಣೆಯನ್ನು ವಿರೋಧಿಸಿದರು.
ಪಿಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಹನೀಫ್ ಟಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಎಎಸ್ಪಿ ಅಮಿತ್ ಕುಮಾರ್ ಸಿಂಗ್‌ರ ವರ್ಗಾವಣೆಯನ್ನು ರದ್ದುಪಡಿಸ ಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ