ಗುರುವಾರ, ಫೆಬ್ರವರಿ 10, 2011

‘ಭಯೋತ್ಪಾದಕ ರೆಂದು’ ಹಣೆಪಟ್ಟಿ ಹಚ್ಚಿದ್ದ 7 ಮುಸ್ಲಿಂ ಯುವಕರ ಬಿಡುಗಡೆಗೆ

ದಿಲ್ಲಿ ಪೊಲೀಸರು ‘ಭಯೋತ್ಪಾದಕ ರೆಂದು’ ಹಣೆಪಟ್ಟಿ ಹಚ್ಚಿದ್ದ 7 ಮಂದಿಯ ಬಿಡುಗಡೆಗೆ ಇಲ್ಲಿನ ನ್ಯಾಯಾಲಯವೊಂದು ಆದೇಶ ನೀಡಿದೆ. ಪೊಲೀಸರು ವಿವರಿಸಿದ ಎನ್‌ಕೌಂಟರ್‌ನ ಕತೆಯು ಕಚೇರಿಯಲ್ಲೇ ಕುಳಿತು ‘ಎಚ್ಚರಿಕೆಯಿಂದ ಹೆಣೆದುದಾಗಿದೆ’ ಎಂದು ಅದು ಟೀಕಿಸುವುದರೊಂದಿಗೆ ದಿಲ್ಲಿ ಪೊಲೀಸರು ತೀವ್ರ ಮುಜುಗರ ಅನುಭವಿಸುವಂತಾಗಿದೆ.
ದಿಲ್ಲಿ ಪೊಲೀಸರು 2005ರ ಜುಲೈಯಲ್ಲಿ ‘ನಕಲಿ ಎನ್‌ಕೌಂಟರ್’ ಒಂದರ ಬಳಿಕ ಸೆರೆ ಹಿಡಿದಿದ್ದರೆನ್ನ ಲಾದ ಸಾಕಿಬ್ ರಹ್ಮಾನ್, ಬಶೀರ್ ಅಹ್ಮದ್ ಶಾ, ನಝೀರ್ ಅಹ್ಮದ್ ಸೂಫಿ, ಹಾಜಿ ಗುಲಾಂ ಮೊಯ್ನುದ್ದೀನ್ ದಾರ್, ಅಬ್ದುಲ್ ಮಜೀದ್ ಭಟ್, ಅಬ್ದುಲ್ ಖಯ್ಯೂಂ ಖಾನ್ ಹಾಗೂ ಬೀರೇಂದ್ರ ಕುಮಾರ್ ಸಿಂಗ್ ಎಂಬವರನ್ನು ಬಿಡುಗಡೆಗೊಳಿಸಿ ಹೆಚ್ಚುವರಿ ಸತ್ರ ನ್ಯಾಯಾಧೀಶ ವೀರೇಂದ್ರ ಭಟ್ ಆದೇಶ ನೀಡಿದರು.
2005ರ ಜು.1ರ ರಾತ್ರಿ ನಡೆದಿದೆಯೆನ್ನಲಾದ ಎನ್‌ಕೌಂಟರ್ ನಿಜವಾಗಿ ನಡೆದೇ ಇಲ್ಲ. ಸಂಪೂರ್ಣ ನಕಲಿ ಎನ್‌ಕೌಂಟರ್ ಒಂದರ ಕತೆಯನ್ನು ಕಟ್ಟ ಲಾಗಿತ್ತು. ಎನ್‌ಕೌಂಟರ್‌ನ ಕತೆಯನ್ನು ದೌಲಾ ಕುವಾದ ದಿಲ್ಲಿ ಪೊಲೀಸ್ ವಿಶೇಷ ಸಿಬ್ಬಂದಿ ಕಚೇರಿ ಯಲ್ಲಿ ಎಚ್ಚರಿಕೆಯಿಂದ ಹೆಣೆಯಲಾಗಿದೆ. ಉಪ ನಿರೀಕ್ಷಕ ರವೀಂದ್ರ ತ್ಯಾಗಿ ಇದರ ಪ್ರಧಾನ ಕತೆಗಾರ ರಾಗಿದ್ದು, ಅವರ ಸೋದ್ಯೋಗಿಗಳಾದ ನಿರಾಕಾರ್, ಚರಣ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಸಹಾಯಕರಾಗಿ ದ್ದರು ಎಂದು ನ್ಯಾಯಾಧೀಶರು ಇತ್ತೀಚೆಗೆ ಹೇಳಿದ್ದರು.
2005ರ ಜು.1ರಂದು ದಿಲ್ಲಿಯ ಗುರ್ಗಾಂವ್ ಸಮೀಪ ನಡೆದ ಗುಂಡಿನ ಕಾಳಗವೊಂದರ ಬಳಿಕ ಸಾಕಿಬ್, ನಝೀರ್, ಗುಲಾಂ ಹಾಗೂ ಬಶೀರ್‌ರನ್ನು ಬಂಧಿಸಲಾಗಿತ್ತೆಂದು ಪ್ರಾಸಿಕ್ಯೂಶನ್ ನ್ಯಾಯಾಲಯ ದಲ್ಲಿ ಪ್ರತಿಪಾದಿಸಿತ್ತು.
ಈ ನಾಲ್ವರು ಆರೋಪಿಗಳು ಕಾರೊಂದರಲ್ಲಿದ್ದರು. ನಿಲ್ಲುವಂತೆ ಸೂಚಿಸಿದಾಗ ಅವರು ಓಡಿ ಹೋಗಲು ಯತ್ನಿಸಿದರು. ಪೊಲೀಸರು ಅವರನ್ನು ಹಿಂದಿಕ್ಕಿ ನಿಲ್ಲುವಂತೆ ಮಾಡಿದರು ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದರು.
ಆರೋಪಿಗಳು ಪೊಲೀಸರ ಮೇಲೆ ಗುಂಡು ದಾಳಿ ಆರಂಭಿಸಿದರು. ಎನ್‌ಕೌಂಟರ್‌ನ ಬಳಿಕ ಅವರನ್ನು ಬಂಧಿಸಿದ ಪೊಲೀಸರು ಅವರಿಂದ ಸೇವಾ ಸಮವಸ್ತ್ರ , ರೂ. 50 ಸಾವಿರ ವೌಲ್ಯದ ನಕಲಿ ನೋಟುಗಳು ಹಾಗೂ ಪಾಲಂ ವಿಮಾನ ನಿಲ್ದಾಣದ ನಕ್ಷೆಯನ್ನು ವಶಪಡಿಸಿಕೊಂಡಿದ್ದರೆಂದು ಪ್ರಾಸಿಕ್ಯೂಶನ್ ವಾದಿಸಿತ್ತು.  
ತಾವು ಪಾಕಿಸ್ತಾನದ ಐಎಸ್‌ಐ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದೇವೆಂದು ಬಂಧಿತರು ಬಾಯ್ಬಿಟ್ಟಿದ್ದರು. ನಾಲ್ವರ ವಿಚಾರಣೆಯ ಬಳಿಕ ಇತರ ಮೂವರನ್ನು ಬಂಧಿಸಿ ಅಪಾರ ಪ್ರಮಾಣದ ನಕಲಿ ನೋಟು, ಒಂದು ಎಕೆ-47 ರೈಫಲ್, ಅನೇಕ ಮ್ಯಾಗಝಿನ್‌ಗಳು, ಕಾಡತೂಸುಗಳು ಹಾಗೂ ಕೈ ಬಾಂಬ್‌ಗಳನ್ನು ಅವರಿಂದ ವಶಪಡಿಸಿಕೊಳ್ಳಲಾಯಿತೆಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಹೇಳಿದ್ದರು.
ಆದರೆ, ಎಲ್ಲ ಆರೋಪಿಗಳು, ತಾವು ಅಮಾಯಕ ರಾಗಿದ್ದು, ತಮ್ಮನ್ನು ತಪ್ಪಾಗಿ ಸಿಲುಕಿಸಲಾಗಿದೆಯೆಂದು ನ್ಯಾಯಾಲಯದ ಮುಂದೆ ಅಹವಾಲು ಸಲ್ಲಿಸಿದ್ದರು.
ತಾನು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಯಲ್ಲಿ ಒಳಗೊಂಡಿದ್ದು, ಪೊಲೀಸರ ಮುಂದೆ ಅನೇಕ ಉಗ್ರರು ಶರಣಾಗುವಂತೆ ಮಾಡಿದ್ದೇನೆ. ಆದಾಗ್ಯೂ, ತನ್ನನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆಯೆಂದು ಆರೋಪಿ ಗುಲಾಂ ವಾದಿಸಿದ್ದನು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ