ಮಂಗಳವಾರ, ಫೆಬ್ರವರಿ 08, 2011

ಖಾಝಿ ಚೆಂಬರಿಕ ಅಬ್ದುಲ್ಲಾ ಮುಸ್ಲಿಯಾರರ ಸಾವಿನ ಹಿಂದೆ ಭೂಗತ ಜಗತ್ತು?

ಮಂಗಳೂರು: ಒಂದು ವರ್ಷದಿಂದ ನಿಗೂಢವಾಗಿಯೇ ಇದ್ದ ಮಂಗಳೂರು ಖಾಝಿ ಚೆಂಬರಿಕ ಅಬ್ದುಲ್ಲಾ ಮುಸ್ಲಿಯಾರರ ಸಾವಿನ ಪ್ರಕರಣದ ಸತ್ಯ ಈಗ ತೆರದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ.
ಮೂರು ತಿಂಗಳುಗಳ ಸತತ ತನಿಖೆಯ ಬಳಿಕ ಸಿಬಿಐ, ಚೆಂಬರಿಕ ರನ್ನು ಕೊಲೆ ಮಾಡಲಾಗಿದೆ ಎಂಬ ನಿರ್ಣಯಕ್ಕೆ ಬಂದಿದೆ. ಆದರೆ ಕೊಲೆ ನಡೆಸಿದವರು ಯಾರು ಎಂಬ ನಿಗೂ ಢತೆ ಹಾಗೆಯೇ ಉಳಿದುಕೊಂಡಿದೆ. ಸಿಬಿಐ ತನಿಖೆ ಈಗ ಕೊಲೆ ನಡೆಸಿ ದವರ ಬೆನ್ನು ಹತ್ತಿದೆ. ಸಿಬಿಐಗೆ ಸಹಕರಿಸುತ್ತಿರುವ ಕೇರಳದ ಪೊಲೀಸ್ ಅಧಿಕಾರಿಯೊಬ್ಬರು ಬಿಚ್ಚಿಟ್ಟ ಮಾಹಿ ತಿಯ ಪ್ರಕಾರ ಕೊಲೆ ನಡೆಸಿರುವುದು ಸುಪಾರಿ ಹಂತಕರು ಎಂಬುದು ಸ್ಪಷ್ಟ. ಆದರೆ ಕೊಲೆಗೆ ಯಾರು ಸುಪಾರಿ ನೀಡಿದರು ಮತ್ತು ಯಾಕೆ ನೀಡಿದರು ಎಂಬುದಕ್ಕೆ ಎರಡೆರಡು ಕಾರಣಗಳು ಕಾಣುತ್ತಿವೆ. ಮೇಲ್ನೋಟಕ್ಕೆ ಧಾರ್ಮಿಕ ಗುಂಪುಗಾರಿಕೆಯ ಕಾರಣದಿಂದ ಇದು ನಡೆದಿರಬಹುದು ಎಂದು ಸಂಶಯಿಸ ಬಹುದಾದರೂ ತನಿಖೆಯ ಆಳಕ್ಕೆ ಹೋದಾಗ ದೇಶದ್ರೋಹಿ, ಸಮಾಜ ಘಾತುಕ ಭೂಗತ ಪಾತಕಿಗಳ ಕೈವಾಡದ ಸುಳಿವುಗಳು ತೆರೆದುಕೊಳ್ಳುತ್ತಿವೆ.
ಕಳೆದ ವರ್ಷವೇ ಭೂಗತ ಪಾತಕಿ ಯೋರ್ವನನ್ನು ಮಂಗಳೂರು ಪೊಲೀ ಸರು ಚೆಂಬರಿಕ ಪರಿಸರದಿಂದಲೇ ಬಂಧಿಸಿದ್ದರು. ಈತನ ಇರುವಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇ ಅಬ್ದುಲ್ಲಾ ಮುಸ್ಲಿಯಾರ್ ಇಲ್ಲವೆ ಅವರೊಂದಿಗೆ ಇರುವವರು ಎಂಬ ಶಂಕೆಯೊಂದು ಭೂಗತ ಲೋಕದಲ್ಲಿ ಇತ್ತು. ಇದಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆಸಲಾಗಿದೆ ಎಂಬ ಗಾಳಿ ಸುದ್ದಿ ಪೊಲೀಸ್ ವಲಯದಲ್ಲಿ ಹರಿದಾ ಡುತ್ತಿದೆ. ಇದು ಈವರೆಗೂ ದೃಢಪಡಿ ಸುವವರು ಸಿಕ್ಕಿಲ್ಲ. ಒಂದು ವೇಳೆ ಇದು ಸತ್ಯ ಎಂದಾಗಿ ಬಿಟ್ಟರೆ ಧಾರ್ಮಿಕ ವಿವಾದ ಬದಿಗೆ ಸರಿಯಲೂ ಬಹುದು ಎಂದು ಲೆಕ್ಕ ಹಾಕಲಾಗುತ್ತಿದೆ. ಅಥವಾ ಖಾಝಿಯ ಸಾವಿನ ಪ್ರಕರಣವನ್ನು ಧಾರ್ಮಿಕ ವಿವಾದದಿಂದ ಮುಕ್ತಗೊಳಿ ಸುವ ಉದ್ದೇಶದಿಂದಲೇ ಭೂಗತ ಲೋಕದ ನಂಟು ಕಟ್ಟಲಾಗುತ್ತಿದೆ ಎಂಬ ಮಾತು ಕೂಡ ಪೊಲೀಸ್ ವಲಯದಲ್ಲಿಯೇ ಚಾಲ್ತಿಯಲ್ಲಿದೆ.
೨೦೧೦ರ ಫೆ.೧೫ರಂದು ಚೆಂಬರಿಕದ ಸಮುದ್ರದಲ್ಲಿ ಚೆಂಬರಿಕ ಅಬ್ಲುಲ್ಲಾರ ಮೃತದೇಹ ಪತ್ತೆಯಾಗಿತ್ತಲ್ಲದೆ ಶವ ಪರೀಕ್ಷೆಯಲ್ಲಿ ಉಸಿರು ಗಟ್ಟಿಸಿ ಸಾಯಿಸಿದ ಹಾಗೂ ಮೈಮೇಲೆ ಪರಚಿದ ಗಾಯ ಗಳಾದ ವರದಿ ಸಿಕ್ಕಿತ್ತು. ಇದೆಲ್ಲ ಕೊಲೆ ಎಂಬುದಕ್ಕೆ ಪುರಾವೆ ಒದಗಿಸಿತ್ತು. ಆದರೆ ಸ್ಥ್ತಳೀಯ ಪೊಲೀಸರಿಗೆ ಕೊಲೆಯ ಕುರಿತು ಯಾವ ಸುಳಿವೂ ದೊರ ಕಿರಲಿಲ್ಲ. ಆದುದರಿಂದ ಈ ಪ್ರಕರಣದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಬೇಕು ಎಂದು ಅಬ್ದುಲ್ಲಾ ಮುಸ್ಲಿಯಾರರ ಬೆಂಬಲಿತ ಧಾರ್ಮಿಕ ಸಂಘಟನೆ ಎಸ್ಕೆಎಸ್ಸೆಸೆಫ್‌ನವರು ಒತ್ತಾಯಿಸಿದ್ದರು. ಈ ಸಮಯದಲ್ಲಿ ಇವರ ವಿರೋಧಿ ಸಂಘಟನೆ ಎಂದೇ ಹೇಳಲಾಗುವ ಎಸ್ಸೆಸ್ಸೆಫ್‌ನವರ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ಎಸ್ಸೆಸ್ಸೆಫ್ ನವರು ಇದರಲ್ಲಿ ತಮ್ಮ ಪಾತ್ರ ಇಲ್ಲ ಎಂಬ ಬಗ್ಗೆ ಹಲವು ಬಾರಿ ಸ್ಪಷ್ಟನೆ ನೀಡಿದರೂ ಶಂಕಾಸ್ಪದ ಹೇಳಿಕೆಗಳು ಮೇಲಿಂದ ಮೇಲೆ ಬರಲಾರಂಭಿಸಿ ದಾಗ ಅಂತಿಮವಾಗಿ ಎಸ್ಸೆಸ್ಸೆಫ್‌ನವರೇ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಿಸ ತೊಡಗಿದರು. ಇದರೊಂದಿಗೆ ಇತರ ಧಾರ್ಮಿಕ ಹಾಗೂ ರಾಜಕೀಯ ನಾಯಕರ ಒತ್ತಡವೂ ಹೆಚ್ಚಾದಾಗ ಕೇರಳ ಸರಕಾರ ಪ್ರಕರಣವನ್ನು ಮೂರು ತಿಂಗಳ ಹಿಂದೆಯಷ್ಟೇ ಸಿಬಿಐಗೆ ವಹಿಸಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ