ಮಂಗಳವಾರ, ಫೆಬ್ರವರಿ 08, 2011

ಐಕ್ಯತೆಗಾಗಿ ಪಾಪ್ಯುಲರ್ ಫ್ಫ್ರಂಟ್ ಆಫ್ ಇಂಡಿಯಾ ಕರೆ



ಮುಸ್ಲಿಂ ಸಮುದಾಯದ ಐಕ್ಯತೆಗೆ ನಿರಂತರ ಶ್ರಮಿಸಬೇಕಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಧಾರ್ಮಿಕ ಮುಖಂಡರು ಪರಸ್ಪರ ದೋಷಾರೋಪಣೆ ವ್ಯಕ್ತಪಡಿ ಸುತ್ತಾ ಸಮುದಾಯದೊಳಗೆ ಗುಂಪುಗಾರಿಕೆಗೆ ತೀವ್ರ ಸ್ವರೂಪ ನೀಡುತ್ತಿರುವುದು ಕಂಡುಬರುತ್ತಿದೆ. ಆದರೆ ಇದು ಈಗ ತಾರಕಕ್ಕೇರಿದ್ದು ಅನಪೇಕ್ಷಣೀಯ ವಿದ್ಯಮಾನಗಳನ್ನು ಸೃಷ್ಟಿಸುತ್ತಿರುವುದರಿಂದ ಸಾಮಾನ್ಯ ಜನತೆ ಆತಂಕಕ್ಕೊಳ ಗಾಗುವಂತಾಗಿದೆ. ಸಮುದಾಯದೊಳಗೆ ಪರಸ್ಪರ ಗುಂಪುಗಾರಿಕೆಗೆ ಮತ್ತು ಕಚ್ಚಾಟಗಳಿಗೆ ದಾರಿ ಒದಗಿಸಿದಂತಾಗಿದೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಪರಸ್ಪರ ಮಾತುಕತೆ ಮತ್ತು ತಿಳುವಳಿಕೆಯಿಂದ ಬಗೆಹರಿಸಬಹುದಾಗಿದ್ದು ಬಹಿರಂಗವಾಗಿ ಗದ್ದಲವನ್ನೇರ್ಪಡಿಸುವುದು ಸರಿಯಲ್ಲ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಶಾಖೆಯ ಕೆ. ಎ.ಸಿದ್ಧೀಕ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ