ಶನಿವಾರ, ಡಿಸೆಂಬರ್ 25, 2010

ಮಂಗಳೂರು ತಾಲೂಕು: ಜಿ.ಪಂ.ನಲ್ಲಿ 37 ಅಭ್ಯರ್ಥಿಗಳು ಕಣದಲ್ಲಿ

ಮಂಗಳೂರು,ಡಿ.25: ತಾಲೂಕಿನ ಜಿ.ಪಂ.ನ 10 ಕ್ಷೇತ್ರಗಳಲ್ಲಿ 37 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ 10 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಜೆಡಿಎಸ್ 9, ಎಸ್‌ಡಿಪಿಐ 2, ಸಿಪಿಎಂ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಹಾಗೂ 5 ಮಂದಿ ಪಕ್ಷೇತರರು ಸ್ಪರ್ಧಿಸುತ್ತಿದ್ದಾರೆ.

 ಕೋಟೆಕಾರ್ ಕ್ಷೇತ್ರದಲ್ಲಿ ಜೆಡಿಎಸ್, ಸಿಪಿಎಂ ಅಭ್ಯರ್ಥಿಯನ್ನು ಬೆಂಬಲಿಸಿದರೆ ಉಳಿದ ಕಡೆ ಸಿಪಿಎಂ, ಜೆಡಿಎಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಿವೆ. ಎಸ್‌ಡಿಪಿಐ ಬಜ್ಪೆ (ಮುಸ್ಲಿಮ್) ಮತ್ತು ನೀರುಮಾರ್ಗ (ಕ್ರೈಸ್ತ)ದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಕೊಣಾಜೆ ಕ್ಷೇತ್ರದಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಎಡಪದವು ಕ್ಷೇತ್ರದಲ್ಲಿ ಒಂದೇ ಹೆಸರಿನ ಇಬ್ಬರು (ಬಿಜೆಪಿ ಮತ್ತು ಪಕ್ಷೇತರ) ಸ್ಪರ್ಧಿಸುತ್ತಿದ್ದಾರೆ.ಬಜ್ಪೆ, ಎಡಪದವು, ಕೊಣಾಜೆ, ಕೋಟೆಕಾರ್‌ನಲ್ಲಿ ಪಕ್ಷೇತರರು ಸ್ಪರ್ಧೆಗಿಳಿದಿದ್ದಾರೆ.


ಕಳೆದ ಬಾರಿ ಕಿನ್ನಿಗೋಳಿ, ನೀರ್‌ಮಾರ್ಗ, ಎಡಪದವು, ಬಜ್ಪೆ, ಶಿರ್ತಾಡಿ,ಕಟೀಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರೆ, ಕೊಣಾಜೆ, ಪುತ್ತಿಗೆ ಜೆಡಿಎಸ್ ಪಾಲಾಗಿತ್ತು. ಬಿಜೆಪಿ ಮತ್ತು ಕೋಟೆಕಾರ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಮೀಸಲಾತಿ ಮತ್ತು ಪಕ್ಷಾಂತ ರದ ಹಾವಳಿಯಿಂದಾಗಿ ಈ ಬಾರಿ ಇಲ್ಲೆಲ್ಲಾ ರಾಜಕೀಯ ಚಿತ್ರಣ ಬದಲಾಗಿದೆ.
ಕಳೆದ ಬಾರಿ ಪುತ್ತಿಗೆ ಕ್ಷೇತ್ರದಿಂದ ಗೆದ್ದ ಮಾಜಿ ಜಿ.ಪಂ. ಅಧ್ಯಕ್ಷ ಸುಚರಿತ ಶೆಟ್ಟಿ ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಹೋಗಿದ್ದು, ತನ್ನ ಪತ್ನಿಗೆ ಟಿಕೆಟ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಕಳೆದ ಬಾರಿ ಕಿನ್ನಿಗೋಳಿ ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್‌ನ ಪ್ರಮೋದ್‌ಕುಮಾರ್ ಈ ಬಾರಿ ಕಟೀಲು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಮಾಜಿ ಜಿ.ಪಂ.ಸದಸ್ಯೆಯರಾದ ಕಾಂಗ್ರೆಸ್‌ನ ಶಾಲೆಟ್ ಪಿಂಟೋ ಮತ್ತು ಯಶವಂತಿ ಆಳ್ವರು ಮತ್ತೆ ಕಣಕ್ಕಿ ಳಿದಿದ್ದಾರೆ. ಹಾಲಿ ಸದಸ್ಯರಾದ ಜೆಡಿಎಸ್‌ನ ಅಝೀಝ್ ಮಲಾರ್ ಮತ್ತು ಕಾಂಗ್ರೆಸ್‌ನ ಕೃಷ್ಣ ಅಮೀನ್ ಸ್ವಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.

ಜಿ.ಪಂ. ಕ್ಷೇತ್ರಗಳ ವಿವರ:
ಕಿನ್ನಿಗೋಳಿ : ಆಶಾ ಆರ್. ಸುವರ್ಣ (ಬಿಜೆಪಿ), ಧನಂಜಯ ಕೋಟ್ಯಾನ್ (ಕಾಂಗ್ರೆಸ್), ಮಮತಾ ವೈ. ಕೋಟ್ಯಾನ್ (ಜೆಡಿಎಸ್). ಪುತ್ತಿಗೆ : ಸುನಿತಾ ಸುಚರಿತ ಶೆಟ್ಟಿ (ಬಿಜೆಪಿ), ಶಾಲೆಟ್ ಪಿಂಟೋ (ಕಾಂಗ್ರೆಸ್), ಅಮಿತಾ ದಿವಾಕರ್ ಶೆಟ್ಟಿ (ಜೆಡಿಎಸ್). ಶಿರ್ತಾಡಿ : ಶಾರದಾ ಆರ್. ಕೋಟ್ಯಾನ್ (ಬಿಜೆಪಿ), ಅಂಬಿಕಾ ಡಿ. ಶೆಟ್ಟಿ (ಕಾಂಗ್ರೆಸ್), ಲೂಸಿ ಲೋಬೋ (ಜೆಡಿಎಸ್).
ಕಟೀಲು :
ಈಶ್ವರ ಕಟೀಲು (ಬಿಜೆಪಿ), ಪ್ರಮೋದ್ ಕುಮಾರ್ (ಕಾಂಗ್ರೆಸ್), ಕೆ.ಎ. ಅಬ್ದುಲ್ಲಾ(ಜೆಡಿಎಸ್). ಬಜ್ಪೆ : ರಿತೇಶ್ ಶೆಟ್ಟಿ (ಬಿಜೆಪಿ), ಟಿ.ಅಬ್ದುಲ್ ಖಾದರ್ (ಕಾಂಗ್ರೆಸ್), ಮ್ಯಾಕ್ಸಿ ಪಿಂಟೋ (ಜೆಡಿಎಸ್),ಇಸ್ಮಾಯೀಲ್ ಎಂಜಿನಿಯರ್ (ಎಸ್‌ಡಿಪಿಐ), ಮುಹಮ್ಮದ್ ಆರಿಫ್ (ಪಕ್ಷೇತರ). ಎಡಪದವು : ಜನಾರ್ದನ ಗೌಡ (ಬಿಜೆಪಿ), ಕೃಷ್ಣ ಅಮೀನ್ (ಕಾಂಗ್ರೆಸ್), ಡಿ.ಪಿ. ಹಮ್ಮಬ್ಬ (ಜೆಡಿಎಸ್), ಜನಾರ್ಧನ ಗೌಡ (ಪಕ್ಷೇತರ).
ಗುರುಪುರ :  ಜಿ. ಪ್ರೇಮಲತಾ ಕೋಟ್ಯಾನ್ (ಬಿಜೆಪಿ), ಯಶವಂತಿ ಆಳ್ವ (ಕಾಂಗ್ರೆಸ್), ಜೆಸಿಂತ ಡಿಕುನ್ಹಾ(ಜೆಡಿಎಸ್). ನೀರುಮಾರ್ಗ : ಗೋಕುಲ ದಾಸ ಶೆಟ್ಟಿ (ಬಿಜೆಪಿ), ಮೆಲ್ವಿನ್ ಡಿಸೋಜ (ಕಾಂಗ್ರೆಸ್), ವಲೇರಿಯನ್ ಡಿಸೋಜ (ಜೆಡಿಎಸ್), ಗ್ರೇಸಿಯನ್ ಡಿಸೋಜ (ಎಸ್‌ಡಿಪಿಐ).
ಕೊಣಾಜೆ : ಫಝಲ್ ಅಸೈಗೋಳಿ(ಬಿಜೆಪಿ), ಎನ್.ಎಸ್.ಕರೀಂ (ಕಾಂಗ್ರೆಸ್), ಅಬ್ದುಲ್ ಅಝೀಝ್ ಮಲಾರ್ (ಜೆಡಿಎಸ್), ನ್ಯಾಯವಾದಿ ಆನಂದ ಗಟ್ಟಿ, (ಪಕ್ಷೇತರ). ಕೋಟೆಕಾರ್: ಸತೀಶ್ ಕುಂಪಲ (ಬಿಜೆಪಿ), ಹರ್ಷರಾಜ (ಕಾಂಗ್ರೆಸ್), ಯು. ಜಯಂತ ನಾಕ (ಸಿಪಿಎಂ), ಯು.ಎನ್. ಅಬ್ದುಲ್ ಕರೀಂ, ಟಿ.ಇಸ್ಮಾಯೀಲ್ (ಪಕ್ಷೇತರರು) ಕಣದಲ್ಲಿದ್ದಾರೆ.

ಬಂಟ್ವಾಳ ತಾಲೂಕು: ಜಿ.ಪಂ.ನಲ್ಲಿ 28, ತಾ.ಪಂ.ನಲ್ಲಿ 84 ಅಭ್ಯರ್ಥಿಗಳು
  ಬಂಟ್ವಾಳ, ಡಿ.25: ತಾಲೂಕಿನ 9 ಜಿ.ಪಂ. ಕ್ಷೇತ್ರದಲ್ಲಿ 28 ಮಂದಿ ಕಣದಲ್ಲಿದ್ದು, 33 ತಾ.ಪಂ. ಕ್ಷೇತ್ರದಲ್ಲಿ 84 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಜಿ.ಪಂ. ಕ್ಷೇತ್ರಗಳ ವಿವರ:
ತುಂಬೆ: ಮಮತಾ ಡಿ.ಎಸ್.ಗಟ್ಟಿ(ಕಾಂಗ್ರೆಸ್), ಮಿತ್ರಾಕ್ಷಿ (ಬಿಜೆಪಿ), ಶಮೀನಾ (ಎಸ್‌ಡಿಪಿಐ), ಹೇಮಲತಾ ಮಡಿವಾಳ್(ಪಕ್ಷೇತರ). ಪುದು: ವೃಂದಾ ಪೂಜಾರಿ (ಕಾಂಗ್ರೆಸ್), ಜಯಶ್ರೀ (ಬಿಜೆಪಿ), ನಾಝಿಯಾ(ಎಸ್‌ಡಿಪಿಐ) ಗೋಳ್ತಮಜಲು: ಚಂದ್ರಪ್ರಕಾಶ ಶೆಟ್ಟಿ (ಕಾಂಗ್ರೆಸ್), ಜಿ.ಸದಾನಂದ ಮಲ್ಲಿ(ಬಿಜೆಪಿ), ಕಬೀರ್ (ಎಸ್‌ಡಿಪಿಐ), ಕೆ.ಕಿಶೋರ್ ಕೋಟ್ಯಾನ್ (ಪಕ್ಷೇತರ). ಕೊಳ್ನಾಡು: ಎಂ.ಎಸ್.ಮುಹಮ್ಮದ್ (ಕಾಂಗ್ರೆಸ್), ನೇಮಿರಾಜ ರೈ (ಬಿಜೆಪಿ), ಡಾ.ಐ. ಶರತ್‌ಶ್ಚಂದ್ರ ಶೆಟ್ಟಿ(ಜೆಡಿಎಸ್)
ಮಾಣಿ: ವಿಕ್ರಂ ಪೂಜಾರಿ(ಕಾಂಗ್ರೆಸ್), ಆರ್.ಚೆನ್ನಪ್ಪ ಕೋಟ್ಯಾನ್ (ಬಿಜೆಪಿ), ಮುಹಮ್ಮದ್ ಶರೀಫ್(ಜೆಡಿಎಸ್) ವಿಟ್ಲ: ಶ್ರೀಲತಾ(ಕಾಂಗ್ರೆಸ್), ಶೈಲಜಾ ಕೆ.ಟಿ(ಬಿಜೆಪಿ). ಸರಪಾಡಿ: ಸರೋಜಿನಿ (ಕಾಂಗ್ರೆಸ್), ಗಿರಿಜ(ಬಿಜೆಪಿ). ಸಂಗಬೆಟ್ಟು: ಶುಭಲತಾ ವಿ.ಶೆಟ್ಟಿ (ಕಾಂಗ್ರೆಸ್), ನಳಿನಿ ಶೆಟ್ಟಿ(ಬಿಜೆಪಿ) ಕುರ್ನಾಡು: ಎ.ಸಿ.ಭಂಡಾರಿ (ಕಾಂಗ್ರೆಸ್), ಸಂತೋಷ್ ಕುಮಾರ್ ರೈ (ಬಿಜೆಪಿ), ಆಲಿ ಕುಂಞಿ (ಜೆಡಿಎಸ್), ಗುರುವಪ್ಪ ಪೂಜಾರಿ (ಪಕ್ಷೇತರ), ನವಾಜ್ ಮುಡಿಪು(ಪಕ್ಷೇತರ) ಕಣದಲ್ಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ