ಬೆಂಗಳೂರು: ತಾನು ಏನು ಮಾಡಿಯೇ ಇಲ್ಲ, ಎಲ್ಲಾ ತನ್ನ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದ ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮಿ ಈಗ ತನ್ನ ರಾಗ ಬದಲಾಯಿಸಿದ್ದು, ೨೦ ಮಂದಿ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿರುವುದಾಗಿ ಬಾಯಿಬಿಟ್ಟಿದ್ದಾನೆ ಎಂದು ಸಿಂಗಾಪುರದ ಪತ್ರಿಕೆಯೊಂದು ವರದಿ ಮಾಡಿದೆ.
ತಮಿಳಿನ ನೀಲಿ ಚಿತ್ರದ ನಟಿ ಸೇರಿದಂತೆ ನಿತ್ಯಾ ೨೦ ಮಂದಿ ಜೊತೆ ರಾಸಲೀಲೆ ನಡೆಸಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಅಲ್ಲಿನ ಪತ್ರಿಕೆ ತನ್ನ ವರದಿಯಲ್ಲಿ ಹೇಳಿದೆ. ನಿತ್ಯಾನಂದ ತನ್ನ ಭಕ್ತೆಯರ ಸಹಿತ ಹಲವಾರು ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ್ದಾನೆ. ಇದರಲ್ಲಿ ಸಿಂಗಾಪುರದಲ್ಲಿನ ಆತನ ಭಕ್ತೆಯರು ಕೂಡ ಸೇರಿದ್ದಾರೆ ಎಂದು ‘ಸಿನ್ ಚೆವ್ಯೂ ಡೈಲಿ ವರದಿ ಮಾಡಿದೆ.
ತಮಿಳು ನಟಿ ರಂಜಿತಾ ಜೊತೆ ನಿತ್ಯಾನಂದ ನಡೆಸಿದ ರಾಸಲೀಲೆಯ ವೀಡಿಯೋ ಕ್ಲಿಪ್‌ಗಳು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ಬಳಿಕ ಸಿಂಗಾಪುರದಲ್ಲಿರುವ ನಿತ್ಯಾನ ಭಕ್ತರು ಆತನ ಜಾತಕವನ್ನು ಹೊರಹಾಕಿದ್ದಾರೆ. ತನ್ನ ರಾಸಲೀಲೆ ವೀಡಿಯೋಗಳನ್ನು ಸಾರ್ವ ಜನಿಕವಾಗಿ ಬಹಿರಂಗ ಮಾಡದಿರಲು ಕೋಟ್ಯಂತರ ರೂ. ಬೇಡಿಕೆಯನ್ನಿಟ್ಟು ಬೆದರಿಕೆ ಹಾಕಲಾಗಿತ್ತು ಎಂದು ನಿತ್ಯಾ ಹೇಳಿದ್ದಾಗಿ ಸಿಐಡಿ ಪೊಲೀಸರು ಬಹಿರಂಗಪಡಿಸಿದ್ದಾರೆ.
ನಿತ್ಯಾನೊಂದಿಗೆ ವೀಡಿಯೋದಲ್ಲಿರುವ ಮಹಿಳೆ ತಾನಲ್ಲ, ತನಗೂ ಆ ವೀಡಿಯೋಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದು ನಟಿ ರಂಜಿತಾ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಳು. ಆದರೆ ಫೋರೆನ್ಸಿಕ್ ಲ್ಯಾಬ್ ಮಾತ್ರ ಈ ಸಿ.ಡಿ.ಯಲ್ಲಿರುವುದು ರಂಜಿತಾಳೇ ಎಂದು ಹೇಳಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ