ಬೆಂಗಳೂರು, ಜ.11: ಮುಂದಿನ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ 2011ನೆ ಸಾಲಿನ ಹಜ್ಜ್‌ನ ಘೋಷಣೆಯನ್ನು ಮಾಡಲಾಗುವುದು ಎಂದು ಹಜ್ಜ್ ಕಮಿಟಿ ತಿಳಿಸಿದೆ. ಹಜ್ಜ್ ಯಾತ್ರೆಗೆ ಪಾಸ್‌ಪೋರ್ಟ್ ಹೊಂದಿರುವವರ ಅರ್ಜಿಗಳನ್ನು ಮಾತ್ರವೇ ಪರಿಗಣಿಸಲಾಗುವುದು. ಇದರಿಂದಾಗಿ 2011ರ ಹಜ್ಜ್ ಅರ್ಜಿಯಲ್ಲಿ ಯಾತ್ರಾಕಾಂಕ್ಷಿಗಳು ತಮ್ಮ ಪಾಸ್‌ಪೋರ್ಟ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕರ್ನಾಟಕ ಹಜ್ಜ್ ಕಮಿಟಿ ಅಧ್ಯಕ್ಷ ಎಸ್.ಮುಹಮ್ಮದ್ ಗೌಸ್ ಬಾಷ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ