ಹೊಸದಿಲ್ಲಿ, ಜ.11: ಉಪನ್ಯಾಸಕರ ಕೈ ಕಡಿದ ಪ್ರಕರಣದ ಆರೋಪಿಗಳಿಗೆ ಚಿಕಿತ್ಸೆ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ದಂತ ವೈದ್ಯ ಡಾ.ರನೀಫ್‌ರಿಗೆ ಕೇರಳ ಹೈಕೋರ್ಟ್ ನೀಡಿದ್ದ ಜಾಮೀನು ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ತುರ್ತು ಹಾಗೂ ಗಂಭೀರ ಸಂದರ್ಭದಲ್ಲಿ ವೈದ್ಯ ಶುಶ್ರೂಷೆ ನೀಡಿರುವುದು ತಪ್ಪಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆರೋಪಿಯ ಪರ ವಕೀಲರೊಬ್ಬರು ವಾದ ತನ್ನ ವೃತ್ತಿ ನಿರ್ವಹಿಸಿದಂತೆ, ವೈದ್ಯ ವೃತ್ತಿಗೆ ಸೇರ್ಪಡೆಗೊಳ್ಳುವಾಗ ಮಾಡುವ ಪ್ರಮಾಣವಚನದಂತೆ ವೈದ್ಯರೂ ರೋಗಿಗೆ ಚಿಕಿತ್ಸೆ ನೀಡುತ್ತಾರೆ. ಇದು ವೈದ್ಯರ ಜವಾಬ್ದಾರಿಯೂ ಆಗಿದೆ. ಇಲ್ಲಿಯೂ ವೈದ್ಯರು ರೋಗಿಗೆ ಕೆಲವು ಹೊಲಿಗೆಗಳನ್ನು ಹಾಕಿದ್ದಾರೆ.... ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ವೈದ್ಯ ಡಾ.ರನೀಫ್‌ಗೆ ಕೇರಳ ಹೈಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಕೇರಳ ಸರಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಸಂಚಿನಲ್ಲಿ ವೈದ್ಯನ ಪಾಲ್ಗೊಳ್ಳುವಿಕೆ ಇದೆ. ಆದ್ದರಿಂದ ಅವರಿಗೆ ಜಾಮೀನು ರದ್ದು ಮಾಡುವಂತೆ ಆಗ್ರಹಿಸಿದ್ದರು.
ಕೈ ಕಡಿತ ಪ್ರಕರಣಕ್ಕೆ ಸಂಬಂಧಿಸಿ ಎರ್ನಾಕುಲಂ ಜಿಲ್ಲೆಯ ದಂತ ವೈದ್ಯ ಡಾ.ರನೀಫ್ ವಿರುದ್ಧ ಮುವತ್ತುಪುಝ ಪೊಲೀಸ್ ಠಾಣೆಯಲ್ಲಿ ಹಲವು ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ಪ್ರವಾದಿಯವರ ವಿರುದ್ಧ ಅವಹೇಳನಕಾರಿಯಾಗಿ ಪ್ರಶ್ನೆ ಪತ್ರಿಕೆ ರಚಿಸಿದ ಆರೋಪದಲ್ಲಿ ನ್ಯೂಮಾನ್ ಕಾಲೇಜಿನ ಉಪನ್ಯಾಸಕ ಜೋಸೆಫ್‌ರ ಎಡಗೈಯನ್ನು ಕತ್ತರಿಸಿದ್ದರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ