ಬಿಡಬ್ಲುಎಫ್‌ನಿಂದ 15 ಜೋಡಿ ನಿಖಾಹ್
ಮಂಗಳೂರು,ಜ.13: ಇಸ್ಲಾಮ್‌ನಲ್ಲಿ ವಧುದಕ್ಷಿಣೆಗೆ ಆದ್ಯತೆ ನೀಡಲಾಗಿದೆ. ಆದರೆ, ಇಂದಿನ ದಿನಗಳಲ್ಲಿ ಹೆಣ್ಮಕ್ಕಳ ವಿವಾಹವು ಹೆತ್ತವರಿಗೆ ಭಾರವಾಗಿ ಪರಿಣಮಿಸಿದೆ. ಹೆತ್ತವರ ಈ ಕಷ್ಟವನ್ನು ನೀಗಿಸಲು ಸಾಮೂಹಿಕ ವಿವಾಹಗಳ ಆವಶ್ಯಕತೆ ಇದೆ. ಮುಸ್ಲಿಂ ಸಂಘಟನೆಗಳು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮಂಗಳೂರು ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಅಬುದಾಬಿಯ ಬ್ಯಾರೀಸ್ ವೆಲ್ ಫೇರ್ ಫೋರಂ ನಗರದಲ್ಲಿ ಗುರುವಾರ ಹಮ್ಮಿಕೊಂಡ 15 ಜೋಡಿ ಸಾಮೂ ಹಿಕ ವಿವಾಹದ ಉದ್ಘಾಟನಾ ಸಮಾ ರಂಭದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
| ವಿವಾಹ ಕಾರ್ಯಕ್ರಮದಲ್ಲಿ ವರರೊಂದಿಗೆ ಅಬುದಾಬಿಯ ಬ್ಯಾರೀಸ್ ವೆಲ್ ಫೇರ್ ಫೋರಂ ಪದಾಧಿಕಾರಿಗಳು ಹಾಗೂ ಗಣ್ಯರು. |
ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಖಾಝಿ ಅಲ್‌ಹಾಜ್ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ ‘ಮನುಷ್ಯನ ಮನಶಾಂತಿ ಮತ್ತು ನೆಮ್ಮದಿಯ ಬದು ಕಿಗೆ ವಿವಾಹದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಮದುವೆ ಪ್ರಯಾಸವಾ ಗುತ್ತಿದ್ದು, ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಅದನ್ನು ನಿವಾರಿಸಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಕೇಂದ್ರ ಸಚಿವ ಅಲ್‌ಹಾಜ್ ಸಿ.ಎಂ.ಇಬ್ರಾಹೀಂ, ಶಾಸಕ ಯು.ಟಿ. ಖಾದರ್ ಶುಭ ಹಾರೈಸಿದರು.
ಸನ್ಮಾನ: ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದ ಸಾಧಕರಾದ ಮಾಜಿ ಸಚಿವ ಬಿ.ಎ.ಮೊದಿನ್ ಮತ್ತು ತುಂಬೆಯ ಮುಹಿಯ್ಯುದ್ದೀನ್ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯ್ಯುದ್ದೀನ್‌ರನ್ನು ಸನ್ಮಾನಿಸ ಲಾಯಿತು.
| ಪೊಲೀಸ್ ಇಲಾಖೆಗೆ ಸೇರಿ: ಎಸ್ಪಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಸ್ಪಿ ಡಾ.ಎ.ಎಸ್.ರಾವ್ ‘2009ರಲ್ಲಿ ನಾನು ಈ ಜಿಲ್ಲೆಗೆ ಆಗಮಿಸಿದಾಗ ಪೊಲೀಸ್ ಇಲಾಖೆಯ ಮೇಲೆ ಅಲ್ಪಸಂಖ್ಯಾತರಿಗೆ ವಿಶ್ವಾಸವಿಲ್ಲದಿರುವುದನ್ನು ಮನಗಂಡೆ. ಅಂದಿನ ಐಜಿಪಿ ಜತೆ ಚರ್ಚಿಸಿ ವಿಶ್ವಾಸ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರ ಪರಿಣಾಮವೋ ಎಂಬಂತೆ 2010ರಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ‘ಪೊಲೀಸ್ ಇಲಾಖೆಯಲ್ಲಿ ಅಲ್ಪಸಂಖ್ಯಾತರ ಕೊರತೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಾದರೂ ಅಲ್ಪಸಂಖ್ಯಾತರು ಪೊಲೀಸ್ ಇಲಾಖೆಗೆ ಸೇರುವ ಮೂಲಕ ಈ ಇಲಾಖೆಯ ಮೇಲಿರುವ ತಪ್ಪು ಕಲ್ಪನೆಯನ್ನು ದೂರ ಮಾಡಿ’ ಎಂದರು. |
ವೇದಿಕೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಂ.ಬಿ. ಅಬ್ದುರ್ರಹ್ಮಾನ್, ಜಿಲ್ಲಾ ಕಾಂಗ್ರೆಸ್ ನಾಯಕ ಮೊದಿನ್ ಬಾವಾ, ಕೃಷ್ಣಾಪುರ ಅಲ್ ಬದ್ರಿಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಬಿಡಬ್ಲುಎಫ್‌ನ ಜತೆ ಕಾರ್ಯದರ್ಶಿ ಹನೀಫ್ ಉಚ್ಚಿಲ್, ಸಲಹೆಗಾರ ಮುಹಮ್ಮದ್ ಕಲ್ಲಾಪು, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಿಝ್ವಿನ್ ಅಹ್ಮದ್, ಅಬ್ದುಲ್ಲತೀಫ್, ಬಿಸಿಎಫ್‌ನ ಉಪಾಧ್ಯಕ್ಷ ಅಬುಸಾಲಿಹ್, ಎಂ.ಬಿ. ನೂರ್ ಮುಹಮ್ಮದ್, ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮತ್ತಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಬುಧಾಬಿಯ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಸ್ವಾಗತಿಸಿ ದರು. ಅಲ್ ಹಾಫಿಲ್ ತೌಸೀಫ್ ಹಿಮಮಿ ಕಿರಾಅತ್ ಪಠಿಸಿದರು. ಬಿಡಬ್ಲುಎಫ್ ಉಪಾಧ್ಯಕ್ಷ ಶೇಖ್ ಬಾವ ಪ್ರಾಸ್ತಾವಿಕ ಮಾತನಾಡಿದರು. ಜತೆ ಕೋಶಾಧಿಕಾರಿ ಬಶೀರ್ ಬಜ್ಪೆ ಸಂಸ್ಥೆಯ ಮುಂದಿನ ಯೋಜನೆ ಪ್ರಕಟಿ ಸಿದರು. ಸಂಯೋಜಕ ಮುಹಮ್ಮದ್ ರಫೀಕ್ ಕೃಷ್ಣಾಪುರ ವಂದಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ