ಗುರುವಾರ, ಜನವರಿ 13, 2011

ಕೇಸರಿ ಭಯೋತ್ಪಾದಕರ ಆಟ; ಮುಸ್ಲಿಂ ಯುವಕರಿಗೆ ತಂದಿತು ಸಂಕಟ


ಕಲೀಂ ಸಹಿತ ಈ ಎಲ್ಲ ಮುಸ್ಲಿಂ ಹುಡುಗರನ್ನು ಪೊಲೀಸರು ಮಂಪರು ಪರೀಕ್ಷೆಗೊಳಪಡಿಸಿದ್ದರು. ಆದರೆ ಮಕ್ಕಾ ಮಸೀದಿ ಸ್ಫೋಟಕ್ಕೆ ಸಂಬಂಧಿಸಿ ಅವರ ವಿರುದ್ಧ ಯಾವುದೇ ಸಾಕ್ಷಗಳನ್ನು ಸಂಗ್ರಹಿ ಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಆದರೂ ಅವರು ಬಂಧಿತ ಹುಡುಗರನ್ನು ಹಾಗೆಯೇ ಬಿಟ್ಟು ಬಿಡಲು ಸಿದ್ಧರಿರಲಿಲ್ಲ.

ಅವರಿಗೆ ದೊರಕಿದ್ದ ಏಕೈಕ ‘ಸಾಕ್ಷಿ’ಯೆಂದರೆ, ಪೊಲೀಸ್ ‘ತಪ್ಪೊಪ್ಪಿಗೆ’. ಈ ತಪ್ಪೊಪ್ಪಿಗೆ ಯನ್ನು ಭೀಕರ ಹಿಂಸೆ ನೀಡಿ ಅಥವಾ ಬಲಾತ್ಕಾರದಿಂದ ಪಡೆಯಲಾಗಿದೆ ಎಂಬ ಆರೋಪಗಳಿವೆ. ಈ ಸಾಕ್ಷದ ಆಧಾರದಲ್ಲಿ ಸಿಬಿಐ ಇವರ ವಿರುದ್ಧ ದೋಷಾರೋಪ ದಾಖಲಿಸಬೇಕೆಂಬುದು ಪೊಲೀಸರ ಇಚ್ಛೆಯಾಗಿತ್ತು.

ಕೇಂದ್ರ ಮಹಾರಾಷ್ಟ್ರದಲ್ಲಿ ಇದಕ್ಕೂ ಮೊದಲು ಮಸೀದಿಗಳ ಪಕ್ಕದಲ್ಲಿ ಕಚ್ಚಾ ಬಾಂಬ್‌ಗಳು ಪತ್ತೆಯಾದ ಹಲವು ಪ್ರಕರಣಗಳು ವರದಿಯಾಗಿದ್ದವು. 2003ರ ನವೆಂಬರ್‌ನಲ್ಲಿ ಪರ್ಬನಿಯ ಮುಹಮ್ಮದೀಯ ಮಸೀದಿ, 2004ರ ಆಗಸ್ಟ್‌ನಲ್ಲಿ ಜಲ್ನಾದ ಖಾದ್ರಿಯ ಮಸೀದಿ ಮತ್ತು 2004ರ ಆಗಸ್ಟ್‌ನಲ್ಲಿ ಪರ್ಬನಿ ಜಿಲ್ಲೆಯ ಪುರ್ನದ ಮೆರಾಜುಲ್ ಉಲೂಂ ಮಸೀದಿಯಲ್ಲಿ ಇಂತಹ ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದವು.ನಾಂದೇಡ್‌ನ ಮನೆಯೊಂದರಲ್ಲಿ ಬಾಂಬ್ ತಯಾರಿಸುವಾಗ ಆರೆಸ್ಸೆಸ್ ಮತ್ತು ಬಜರಂಗ ದಳದ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ ಬಳಿಕ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು. ಆದರೆ ಸಂಚಿನ ಆಳದ ಕುರಿತು ತನಿಖೆ ನಡೆಸುವುದು ಬಿಟ್ಟು, ಮಹಾರಾಷ್ಟ್ರ ಎಟಿಎಸ್, ಬಜರಂಗ ದಳದ ಕೆಲವು ಕೆಳ ಮಟ್ಟದ ಕಾರ್ಯಕರ್ತರನ್ನು ಬಂಧಿಸಿ ಅವರ ವಿರುದ್ಧ ನಾಂದೇಡ್, ಜಲ್ನಾ ಮತ್ತು ಪರ್ಬನಿ ಸ್ಫೋಟಕ್ಕೆ ಸಂಬಂಧಿಸಿ ದೋಷಾರೋಪ ಪಟ್ಟಿ ದಾಖಲಿಸಿತ್ತು. ಈ ಪ್ರಕರಣಗಳು ಜನರಿಂದ ತಕ್ಷಣವೇ ಮರೆತು ಹೋಗಿದ್ದವು.

ಮಹಾರಾಷ್ಟ್ರ ಎಟಿಎಸ್ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಆದರೆ ತನಿಖೆಯ ಮೊದಲ ನೀತಿಯನ್ನೇ ಮರೆತಿತ್ತು: ಅದೇನೆಂದರೆ, ನೀವು ಅಪರಾಧಿಗಳನ್ನು ಪತ್ತೆ ಹಚ್ಚಬೇಕಾದರೆ ಮೊದಲು ಅವರ ಉದ್ದೇಶವನ್ನು ಪತ್ತೆಹಚ್ಚಬೇಕು. ತನಿಖೆಯ ಮೂಲಭೂತ ನಿಯಮವನ್ನೇ ತನಿಖಾ ಸಂಸ್ಥೆಗಳು ಮರೆತಿದ್ದವು.
2007ರ ಡಿಸೆಂಬರ್‌ನಲ್ಲಿ ಸಿಬಿಐ ತಂಡ ಹೈದರಾಬಾದ್‌ಗೆ ತೆರಳಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ, ಈ ತಪ್ಪೊಪ್ಪಿಗೆಗಳು ನಕಲಿ ಎಂಬುದು ತನಿಖಾ ಸಂಸ್ಥೆಗೆ ಸ್ಪಷ್ಟವಾಗಿತ್ತು. ಹೈದರಾಬಾದ್ ಜೈಲುಗಳಲ್ಲಿದ್ದ ಶಂಕಿತರನ್ನು ವಿಚಾರಣೆ ನಡೆಸಿದ ಸಿಬಿಐ ತಂಡಕ್ಕೆ ಒಂದು ಮಹತ್ವದ ವಿಷಯ ಸ್ಪಷ್ಟವಾಗಿತ್ತು.
ಬಂಧಿತರಲ್ಲಿ ಕೆಲವರು ತೀವ್ರವಾದಿಗಳು ನಿಜ, ಆದರೆ ಮಕ್ಕಾ ಮಸೀದಿ ಸ್ಫೋಟದ ಹಿಂದೆ ಇವರ ಕೈವಾಡವಿಲ್ಲ ಎಂಬುದು ಅರಿವಿಗೆ ಬಂದಿತ್ತು. ಸ್ಥಳೀಯ ಪೊಲೀಸರ ಒತ್ತಡ ಹಾಗೂ ಟೀಕೆಗಳ ಮಧ್ಯೆಯೂ ಬಂಧಿತ ಯುವಕರ ವಿರುದ್ಧ ದೋಷಾರೋಪ ದಾಖಲಿಸಲು ಸಿಬಿಐ ನಿರಾಕರಿಸಿತ್ತು.
ಬಳಿಕ, ಹೈದರಾಬಾದ್ ಪೊಲೀಸರು ದಾಖಲಿಸಿದ್ದ ಮೂರು ಪ್ರಕರಣಗಳಲ್ಲೂ ಬಂಧಿತ ಯುವಕರು ಖುಲಾಸೆಗೊಂಡಿ ದ್ದರು. ತಾವೇ ದಾಖಲಿಸಿದ್ದ ಪ್ರಕರಣ ತುಂಬಾ ದುರ್ಬಲವಾಗಿದೆ ಎಂಬುದನ್ನು ಅರಿತ ಪೊಲೀಸರು ಆ ಪ್ರಕರಣಗಳಿಗೆ ಸಂಬಂಧಿಸಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಲಿಲ್ಲ.
ಕೊನೆಗೂ, 2008ರ ಜನವರಿಯಲ್ಲಿ ಮಕ್ಕಾ ಮಸೀದಿ ಆವರಣದಲ್ಲಿ ಸ್ಫೋಟಗೊಳ್ಳದಿದ್ದ ಬಾಂಬ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆ ಸಿಬಿಐಗೊಪ್ಪಿಸಲು ಆಂಧ್ರ ಪ್ರದೇಶ ಸರಕಾರ ನಿರ್ಧರಿಸಿತು. ಯುವಕರು ಪ್ರಕರಣದಲ್ಲೇನೋ ಖುಲಾಸೆಗೊಂಡರು, ಆದರೆ ಇಂತಹ ಬಂಧನ ಯಾವುದೇ ಹಾನಿ ರಹಿತ, ಸಾಮಾನ್ಯ ನಾಗರಿಕರಾಗಿದ್ದ ಈ ಯುವಕರ ಬದುಕನ್ನೇ ನರಕವನ್ನಾಗಿಸಿತು.
ಜೈಲಿನಲ್ಲಿ ವರ್ಷಗಟ್ಟಲೆ, ಭೀಕರ ನರಕ ಯಾತನೆ, ಹಿಂಸೆ ಅನುಭವಿಸಿದ್ದ ದುರ್ಗತಿಯ ಕತೆ ಒಂದೆಡೆಯಾದರೆ, ಜೈಲಿನಿಂದ ಬಿಡುಗಡೆ ಯಾದ ಬಳಿಕ ತಮ್ಮ ಪ್ರದೇಶಗಳಲ್ಲಿ ಈ ಬಂಧಿತ ಯುವಕರಿಗೆ ದುಡಿಯುವುದ ಕ್ಕೊಂದು ಉದ್ಯೋಗ ಪಡೆಯುವುದೂ ಕಷ್ಟವಾಯಿತು.
ಮಾತ್ರವಲ್ಲದೆ, ಬಾಡಿಗೆ ಮನೆಯನ್ನು ಪಡೆಯುವುದೂ ಅಸಾಧ್ಯ ವಾಯಿತು. ಹೀಗಾಗಿ, ಎರಡು ಪ್ರಶ್ನೆಗಳು ಮತ್ತೆ ಮತ್ತೆ ಕಾಡುತ್ತಿವೆ: ಸೂಕ್ತ ಸಾಕ್ಷ ಗಳಿಲ್ಲವೆಂದಾದಲ್ಲಿ, ಪೊಲೀಸರು ಯುವಕರ ವಿರುದ್ಧ ಯಾಕೆ ಇಷ್ಟೊಂದು ಅಮಾನವೀಯ ವಾಗಿ ನಡೆದುಕೊಂಡರು? ಹುಡುಗರ ಒಡೆದುಹೋದ ಜೀವನದ ತುಣುಕುಗಳನ್ನು ಜೋಡಿಸಿ ಅವರಿಗೆ ಮರು ಜೀವನ ನೀಡುವವರು ಯಾರು?
2006, ಸೆಪ್ಟಂಬರ್ 8ರಂದು ಮಹಾ ರಾಷ್ಟ್ರದ ಕೋಮು ಸೂಕ್ಷ್ಮ ಪ್ರದೇಶವಾದ ಮಾಲೆಗಾಂವ್‌ನಲ್ಲಿ ನಾಲ್ಕು ಸರಣಿ ಸ್ಫೋಟಗಳು ಸಂಭವಿಸಿದವು. ಘಟನೆಯಲ್ಲಿ 37 ಮುಸ್ಲಿಮರು ಸಾವನ್ನಪ್ಪಿದರು ಮತ್ತು ನೂರಾರು ಮಂದಿ ಗಾಯಗೊಂಡರು.
ಮೂರು ಬಾಂಬ್‌ಗಳನ್ನು ಮಾಲೆಗಾಂವ್‌ನ ಅತಿದೊಡ್ಡ ಮಸೀದಿಯಾದ ಹಮೀದಿಯ ಮಸೀದಿಯ ಆವರಣದೊಳಗೆ ಇರಿಸಲಾಗಿದ್ದರೆ, ಇನ್ನೊಂದು ಬಾಂಬ್‌ನ್ನು ಮುಸ್ಲಿಮರು ಅಧಿಕವಾಗಿರುವ ಮುಶಾವರತ್ ಚೌಕ್ ಎಂಬ ಜನ ನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಇರಿಸಲಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ