ಶುಕ್ರವಾರ, ಜನವರಿ 07, 2011

ಸಂಜೋತಾ ಸ್ಫೋಟ ಪ್ರಕರಣ; ಅಸೀಮಾನಂದನ ವಿರುದ್ಧ ಮೊಕದ್ದಮೆ ದಾಖಲಿಸಲು ಎನ್‌ಐಎ ಸಿದ್ಧತೆ



ಹೊಸದಿಲ್ಲಿ, ಜ. 6: ಕಳೆದ 2007ರಲ್ಲಿ ನಡೆದ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೇಸರಿ ಭಯೋತ್ಪಾದಕ ನಾಯಕ ಸ್ವಾಮಿ ಅಸೀಮಾನಂದನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು ಮೊಕದ್ದಮೆ ದಾಖಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
68 ಮಂದಿಯ ಸಾವಿಗೆ ಕಾರಣವಾದ ಸಂಜೋತಾ ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಅಸೀಮಾನಂದ ಎಂದು ಗುರುತಿಸಲಾಗಿದೆ.
ಹರ್ಯಾಣ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದಿರುವ ಹಿನ್ನೆಲೆ ಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ''ಸ್ಫೋಟ ದ ಹಿಂದೆ ಕೇಸರಿ ಭಯೋ ತ್ಪಾದಕರ ಕೈವಾಡವಿರುವುದು ಸ್ಪಷ್ಟ ವಾಗಿದೆ.
ಪ್ರಕರಣದ ರೂವಾರಿ ಅಸೀಮಾ ನಂದ ಎಂಬುದು ತನಿಖಾ ಸಂಸ್ಥೆ ಪತ್ತೆ ಹಚ್ಚಿದೆ. 'ಬಾಂಬ್‌ಗೆ ಪ್ರತಿ ಬಾಂಬ್' ಎಂಬ ನೀತಿಯಡಿ ಸಂಘಟಿವಾಗಿರುವ ಗುಂಪು ಗುಜರಾತ್‌ನ ಡಾಂಗ್ಸ್‌ನಲ್ಲಿ ಈ ಸಂಚು ರೂಪಿಸಿತ್ತು'' ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟಕ್ಕೆ ಬಳಸಲಾದ ಸ್ಫೋಟಕವನ್ನೇ ಸಂಜೋತಾ ಸ್ಫೋಟದಲ್ಲೂ ಬಳಸ ಲಾಗಿದೆ ಎಂಬುದನ್ನು ಹರ್ಯಾಣ ಪೊಲೀಸರು ದೃಢ ಪಡಿಸಿದ್ದಾರೆ.
ಮಕ್ಕಾ ಮಸೀದಿ ಸ್ಫೋಟ ಪ್ರಕರಣವನ್ನೂ ಅಸೀಮಾನಂದನ ಸಹಚರರು ನಡೆಸಿರುವುದಾಗಿ ಶಂಕಿಸಲಾಗಿದೆ.
ಸ್ವಾಮಿ ಅಸೀಮಾನಂದನ ಬಂಧನದ ಬಳಿಕ ಕೇಸರಿ ಭಯೋತ್ಪಾದನಾ ಜಾಲದ ಕುರಿತ ತನಿಖೆಯಲ್ಲಿ ತ್ವರಿತಗತಿ ಸಾಧಿಸಲಾಗಿದೆ.
ಕೇಸರಿ ಭಯೋತ್ಪಾದನಾ ಜಾಲದೊಳಗಿನ ಹಲವಾರು ಕುತೂಹಲ ಕಾರಿ ಅಂಶಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿವೆ. ಸ್ವಾಮಿ ಅಸೀಮಾನಂದ ಕೇಸರಿ ಸಂಘಟನೆ ಅಭಿನವ್ ಭಾರತ್‌ಗೆ ಪ್ರೇರಕನಾಗಿದ್ದನು ಎಂದು ಹೇಳಲಾಗಿದೆ.
ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ವನ್ನು ಮುಸ್ಲಿಂ ಭಯೋತ್ಪಾದಕರು ನಡೆಸಿದ್ದರು ಎಂದು ಅಮೆರಿಕ ಸಹಿತ ವಿವಿಧ ತನಿಖಾ ಸಂಸ್ಥೆಗಳು ಈ ಹಿಂದೆ ಹೇಳಿದ್ದವು.
ಆದರೆ 68 ಮಂದಿಯ ಬಲಿಗೆ ಕಾರಣವಾದ ಈ ಭೀಕರ ಸ್ಫೋಟವನ್ನು ಕೇಸರಿ ಭಯೋತ್ಪಾದಕ ಸ್ವಾಮಿ ಅಸೀಮಾನಂದನ ಯೋಜನೆಯ ನುಸಾರ ಮಾಡಲಾಗಿದೆ ಎಂಬುದು ಎನ್‌ಐಎ ತನಿಖಾ ಮೂಲಗಳಿಂದ ತಿಳಿಯುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ