
ಮತ್ತೆ ಚುನಾವಣೆ ಬಂದಿವೆ. ರಾಜಕಾರಣಿಗಳು ಮತದಾರರ ಮನೆ ಬಾಗಿಲಿಗೆ ಬಂದು ಕೈ ಮುಗಿದು ಹಸನ್ಮುಖದಿಂದ ಮಾತನಾಡಿಸುತ್ತಿದ್ದಾರೆ. ಇವರಿಗೆ ಚುನಾವಣೆಗಳು ಬಂದಾಗ ಮಾತ್ರ ಮತದಾರ ನೆನಪಾಗುತ್ತಾನೆ. ಪಕ್ಷದಿಂದ ಪಕ್ಷಕ್ಕೆ ಹಾರುವ ಪಕ್ಷಾಂತರಿಗಳು, ಸಜ್ಜನ ರಾಜಕಾರಣಿಗಳು, ಕೆಲವು ಪಕ್ಷಗಳಿಂದ ಹಣ ಪಡೆದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಮಿನಲ್‌ಗಳೂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ರಾಜಕಾರಣದ ಬಗ್ಗೆ ಜಿಗುಪ್ಸೆ ಬೆಳೆದಿರುವ ಈ ಕಾಲದಲ್ಲೂ ಚುನಾವಣೆ ಬಂದಿದೆ. ಈ ಸಂದರ್ಭ ಮತದಾನ ಮಾಡದಿದ್ದರೆ ಕೆಟ್ಟ ರಾಜಕಾರಣಿಗಳು ಆಯ್ಕೆಯಾಗಲು ನಾವು ದಾರಿ ಮಾಡಿ ಕೊಟ್ಟಂತಾಗುತ್ತದೆ. ಅದಕ್ಕಾಗಿ ನಾವು ಮತದಾನ ಮಾಡೋಣ. ಒಳ್ಳೆಯ ಅಭ್ಯರ್ಥಿ ಯಾವುದೇ ಪಕ್ಷದಲ್ಲಿರಲಿ, ಅಂಥವರನ್ನು ಆಯ್ಕೆ ಮಾಡೋಣ. ಪಕ್ಷ, ಪಕ್ಷವೆಂದು ಅಭಿಮಾನ ತೋರುವುದರ ಬದಲು ಸೂಕ್ತ ವ್ಯಕ್ತಿ ಎಂಬ ನೆಲೆಯಲ್ಲಿ ಆಯ್ಕೆ ಮಾಡೋಣ. ನಮ್ಮ ಮತವನ್ನು ಹಣ, ಹೆಂಡಕ್ಕಾಗಿ ಮಾರದೆ ಮತ ಚಲಾಯಿಸೋಣ. ಭ್ರಷ್ಟಾಚಾರಿಗಳು, ಕ್ರಿಮಿನಲ್‌ಗಳು ಹಾಗೂ ಪಕ್ಷಾಂತರಿಗಳಿಗೆ ಮತಯಂತ್ರದ ಮೂಲಕ ಉತ್ತರ ಕೊಡೋಣ. ಚುನಾ ವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾನಾ ಆಮಿಷಗಳನ್ನು ಒಡ್ಡಿ ಮತ ದಾರರನ್ನು ಸೆಳೆಯಲು ಕಸರತ್ತು ಆರಂಭಿಸಿದ್ದಾರೆ. ಬಿಜೆಪಿ ಹಿಂದುಗಳ ಮತಗಳನ್ನು ಬಾಚಿಕೊಳ್ಳಲು ಸಮಾ ಜೋತ್ಸವ ನಡೆಸಲು ಮುಂದಾಗಿದ್ದರೆ, ಕಾಂಗ್ರೆಸಿಗರು ಸರಕಾರದ ಭ್ರಷ್ಟಾಚಾರ, ಭೂಕಬಳಿಕೆಯನ್ನು ಜನರಿಗೆ ವಿವರಿಸಿ ಮತಗಳನ್ನು ಸೆಳೆಯಲು ಮುಂದಾ ಗಿದೆ. ಜೆಡಿಎಸ್ ಪಕ್ಷ ಮಾತ್ರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಬಲೆ ಬೀಸಿ ಅವರನ್ನು ಕೈವಶ ಮಾಡಿ ಕೊಳ್ಳುತ್ತಿದೆ. ಚುನಾವಣೆ ಸರ್ವಪಕ್ಷ ಗಳಿಗೂ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು ದಿನ ಕಳೆದಂತೆ ಕಣ ರಂಗೇರುತ್ತಿದೆ. ಮತದಾರರು ಈ ಬಾರಿ ಯೋಚಿಸಿ ಮತ ನೀಡಬೇಕಿದೆ. ಯಾವ ಪಕ್ಷವೇ ಆಗಲಿ, ಪಕ್ಷಕ್ಕಿಂತ ಅಭ್ಯರ್ಥಿಯನ್ನು ನೋಡಿಕೊಂಡು ಮತ ನೀಡಿದರೆ ನಮ್ಮ ಸಮಸ್ಯೆಗಳು ಬಗೆಹರಿಯಲು ಸಾಧ್ಯವಿದೆ. ಅಬು ಹೈಫಾ ಮಲಾರ್ ಮಂಗಳೂರ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ