ಈ ಬಾರಿಯ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆ್ ಇಂಡಿಯಾವು 6 ಜಿಲ್ಲೆಗಳಲ್ಲಿ ಸರ್ಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಜೀದ್ ಕೊಡ್ಲಿ ಪೇಟೆ ತಿಳಿಸಿದ್ದಾರೆ.ಎಸ್‌ಡಿಪಿಐಯ 19 ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್ ಹಾಗೂ 41 ಅಭ್ಯರ್ಥಿಗಳು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಕಣದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಪಂಚಾಯತ್‌ಗೆ 11 ಹಾಗೂ ತಾಲೂಕು ಪಂಚಾಯತ್‌ಗೆ 28 ಅಭ್ಯರ್ಥಿಗಳು ಸ್ಪರ್ಸಲಿದ್ದಾರೆ. ಅದೇ ವೇಳೆ ಕೊಡಗಿನಲ್ಲಿ 3 ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್ ಹಾಗೂ ನಾಲ್ವರು ತಾಲೂಕು ಪಂಚಾಯತ್‌ಗೆ ಸ್ಪರ್ಸಲಿದ್ದಾರೆ. ಉಡುಪಿಯಲ್ಲಿ 4 ಅಭ್ಯರ್ಥಿಗಳು ಜಿಲ್ಲಾ ಪಂಚಾಯತ್ ಹಾಗೂ 7 ಮಂದಿ ತಾಲೂಕು ಪಂಚಾಯತ್‌ಗೆ ಸ್ಪರ್ಸಲಿದ್ದಾರೆ. ಕೋಲಾರ ಹಾಗೂ ಹಾಸನದಲ್ಲಿ ತಲಾ ಒಬ್ಬರು ಜಿಲ್ಲಾ ಪಂಚಾಯತ್‌ಗೆ ಸ್ಪರ್ಸಲಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯಾದ್ಯಂತ ಎಸ್‌ಡಿಪಿಐ ಜನರಿಂದ ಉತ್ತ ಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಹಗರಣಗಳಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಜನರು ಇದರಿಂದ ಬೇಸತ್ತಿದ್ದಾರೆ ಮತ್ತು ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ಇದು ಎಸ್‌ಡಿಪಿಐಗೆ ಲಾಭವಾಗಲಿದೆ ಎಂದು ಅವರು ಅಭಿಪ್ರಾಯಿಸಿದರು.
ಎಲ್ಲಾ ವರ್ಗಗಳ ಜನರ ಹಕ್ಕುಗಳನ್ನು ರಕ್ಷಿಸುವುದು ಪಕ್ಷದ ಪ್ರಮುಖ ಉದ್ದೇಶವಾಗಿದೆ. ಪಕ್ಷವು ಭಯ ಮುಕ್ತ ಭಾರತ, ಹಸಿವು ಮುಕ್ತ ಭಾರತ ಎಂಬ ಘೋಷಣೆಯೊಂದಿಗೆ ಕಾರ್ಯಚರಿಸುತ್ತಿದೆ ಎಂದು ಅವರು ಹೇಳಿದರು.
ಎಲ್ಲಾ ಪಕ್ಷಗಳೂ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರನ್ನು ನೇಪಥ್ಯಕ್ಕೆ ಸರಿಸಿವೆ. ಪಕ್ಷಗಳು ಈ ವರ್ಗಗಳನ್ನು ಕೇವಲ ವೋಟ್ ಬ್ಯಾಂಕ್‌ಗಳಾಗಿ ಬಳಸುತ್ತಿವೆ. ಸ್ವತಂತ್ರ ಭಾರತದಲ್ಲಿ ಕಳೆದ 63 ವರ್ಷಗಳಿಂದ ಈ ವರ್ಗಗಳು ಆಡಳಿತ ವರ್ಗದ ಗುಲಾಮರಾಗಿ ಜೀವಿಸುತ್ತಿವೆ. ದೇಶದಲ್ಲಿ 85% ಇರುವ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರ ಕೈಯಲ್ಲಿ ಅಕಾರವನ್ನು ನೀಡುವ ಗುರಿಯನ್ನು ಎಸ್‌ಡಿಪಿಐ ಹೊಂದಿದೆ. ಅಲ್ಲದೆ ಡಾ ಬಿ.ಆರ್.ಅಂಬೇಡ್ಕರ್‌ರವರ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ಪಕ್ಷವು ಶ್ರಮಿಸಲಿದೆ ಎಂದು ಅವರು ಹೇಳಿದರು. ಚುನಾವಣೆಯಲ್ಲಿ ಪಕ್ಷವು ಉತ್ತಮ ಲಿತಾಂಶವನ್ನು ಕಾಣುವ ಆತ್ಮವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ