ಉಡುಪಿ, ಡಿ.1: ವರದಿಯ ಸತ್ಯಾಸತ್ಯವನ್ನು ಸ್ವಲ್ಪವೂ ಪರಿಶೀಲಿಸದೆ, ದೃಢೀಕರಿಸದೆ ಸುಳ್ಳು ಸುದ್ದಿ ಪ್ರಕಟಿಸಿ ಸಾರ್ವಜನಿಕರಲ್ಲಿ ಭೀತಿ ಹಾಗೂ ಗೊಂದಲ ಉಂಟು ಮಾಡಿದುದ್ದಕ್ಕಾಗಿ ಮಣಿಪಾಲದ ‘ಉದಯವಾಣಿ’ ದಿನಪತ್ರಿಕೆಯ ಸಂಪಾದಕರಿಗೆ ಹೊಸದಿಲ್ಲಿಯ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ ಎಂದು ಜನಪರ ವೇದಿಕೆ ಕರ್ನಾಟಕ ಕೇಂದ್ರ ಸಮಿತಿಯ ಸಂಚಾಲಕ ಶ್ರೀರಾಮ ದಿವಾಣ ತಿಳಿಸಿದ್ದಾರೆ.
‘ಶಬರಿಮಲೆ: ಉಗ್ರರು’ ಎಂಬ ಶೀರ್ಷಿಕೆಯಡಿಯಲ್ಲಿ ಶಬರಿಮಲೆಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ಹೂಡಿದ ಏಳು ಮಂದಿ ಉಗ್ರರನ್ನು ಜ.12ರಂದು ಬೆಳಗ್ಗೆ ಬಂಧಿಸಲಾಗಿದೆ ಎಂದು ಉದಯವಾಣಿಯು 2009ರ ಜ.14ರ ಸಂಚಿಕೆಯ ಮುಖಪುಟದಲ್ಲಿ ವರದಿಯೊಂದನ್ನು ಪ್ರಕಟಿಸಿತ್ತು.
ಈ ವರದಿಯ ವಿರುದ್ಧ ಜನಪರ ವೇದಿಕೆ ಕೇಂದ್ರ ಸಮಿತಿ ಪರವಾಗಿ ಶ್ರೀರಾಮ ದಿವಾಣ ಜ.19ರಂದು ಪ್ರೆಸ್ ಕೌನ್ಸಿಲ್‌ಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಸುದೀರ್ಘ ವಿಚಾರಣೆ ನಡೆಸಿದ ಪ್ರೆಸ್ ಕೌನ್ಸಿಲ್, 2010ರ ಅ.29ರಂದು ದೂರುದಾರರ ವಾದವನ್ನು ಎತ್ತಿ ಹಿಡಿದು ಉದಯವಾಣಿ ಸಂಪಾದಕರು ತಪ್ಪಿತಸ್ಥರು ಮತ್ತು ಇದೊಂದು ಬೇಜವಾಬ್ದಾರಿ ನಡವಳಿಕೆ ಎಂದು ಸ್ಪಷ್ಟಪಡಿಸಿ ಎಚ್ಚರಿಕೆ ನೀಡಿದೆ ಎಂದವರು ವಿವರಿಸಿದರು.

ಎಸ್ಪಿಯಿಂದ ಪಕ್ಷಪಾತ: ಸುಳ್ಳು ಸುದ್ದಿ ಪ್ರಕಟಿಸಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಉದಯವಾಣಿ ಸಂಪಾದಕ, ಪ್ರಕಾಶಕ ಮುದ್ರಕ ಮತ್ತು ವರದಿಗಾರರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸಮಿತಿಯ ಜಿಲ್ಲಾ ಘಟಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜ.17ರಂದು ದೂರು ನೀಡಿದ್ದರೂ ಎಸ್ಪಿ ಯಾವುದೇ ಕ್ರಮ ಜರಗಿಸಿಲ್ಲ ಎಂದು ದಿವಾಣ ದೂರಿದ್ದಾರೆ.
ದೂರಿನ ಮೇಲೆ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯು 2009ರ ಜ.30, ನ.24 ಮತ್ತು 2010ರ ಜೂ.26ರಂದು ಹೀಗೆ ಒಟ್ಟು 3 ಬಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಲಿಖಿತ ಆದೇಶ ನೀಡಿದ್ದರೂ, ಅವರು ಪ್ರಕರಣದ ತನಿಖೆ ನಡೆಸದೇ ಪಕ್ಷಪಾತವೆಸಗಿದ್ದಾರೆ ಮಾತ್ರವಲ್ಲದೇ ಕರ್ತವ್ಯಲೋಪ ಎಸಗಿದ್ದಾರೆ ಎಂದವರು ಹೇಳಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ