ಕ್ರಪೆ vknews
ಬೆಂಗಳೂರು : ರಿಹಾಬ್ ಇಂಡಿಯಾ ಫೌಂಡೆಶನ್ ವತಿಯಿಂದ ಇಂದು ಬೆಂಗಳೂರಿನಲ್ಲಿ ಉಚಿತ ನೇತ್ರ ಪರೀಕ್ಷಾ ಶಿಬಿರ ಏರ್ಪಡಿಸಲಾಗಿತ್ತು . ಸುಮಾರು ನಾಲ್ಕುನೂರಕ್ಕೂ ಅಧಿಕ ಮಂದಿ ಈ ಪರೀಕ್ಷಾ ಶಿಬಿರದಲ್ಲಿ ಭಾಗವಹಿಸಿದ್ದರು. ಇವರಲ್ಲಿ ಮೂವತ್ತೈದು ಮಂದಿಗೆ ಉನ್ನತ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು. ಬೆಂಗಳೂರು ಪಶ್ಚಿಮ ಲಯನ್ಸ್ ಕಣ್ಣು ಆಸ್ಪತ್ರೆಯ ವೈದ್ಯರುಗಳು ಇಲ್ಲಿ ನೇತ್ರ ಪರೀಕ್ಷೆ ನಡೆಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತ ಚಿಕಿತ್ಸೆಯ ಜೊತೆಗೆ ಔಷಧಿಯನ್ನೂ ನೀಡಲಾಯಿತು. ಉನ್ನತ ಚಿಕಿತ್ಸೆಗೆ ಶಿಫಾರಸ್ಸು ಮಾಡಿದ ಮೂವತ್ತೈದು ಜನರ ಮುಂದಿನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನೂ ಸಹ ರಿಹಾಬ್ ಇಂಡಿಯಾ ಫೌಂಡೆಶನ್ ಭರಿಸಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ರಿಹಾಬ್ ಇಂಡಿಯಾ ಫೌಂಡೆಶನ್ ಅಧ್ಯಕ್ಷರು ಸಂಸ್ಥೆ ಇನ್ನು ಮುಂದೆ ಇತರ ಆರೋಗ್ಯ ಪರೀಕ್ಷೆಗಳ ಶಿಬಿರಗಳನ್ನು ಬೆಂಗಳೂರು ಮತ್ತು ರಾಜ್ಯದ ಇತರ ಪ್ರದೇಶಗಳಲ್ಲೂ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ