ಗುರುವಾರ, ಡಿಸೆಂಬರ್ 23, 2010

ಎಸ್‌ಡಿಪಿಐ ಅಭ್ಯರ್ಥಿ ಜೈಲಿನಿಂದಲೇ ನಾಮಪತ್ರ ಸಲ್ಲಿಕೆ

ಮಂಗಳೂರು,ಡಿ.23: ಮಂಗಳೂರು ತಾಲೂಕಿನ ಮಂಜನಾಡಿ ತಾ.ಪಂ. ಕ್ಷೇತ್ರದಿಂದ ಎಸ್‌ಡಿಪಿಐ ಅಭ್ಯರ್ಥಿಯಾಗಿ ಮುಹಮ್ಮದ್ ನೌಶಾದ್ ಸ್ಪರ್ಧಿಸುತ್ತಿದ್ದು, ವಿಶೇಷವೆಂದರೆ ಇವರು ಮಂಗಳೂರು ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಸುದ್ದಿ ಮಾಡಿದ್ದಾರೆ.
ಮೈಸೂರಿನಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಇತ್ತೀಚೆಗೆ ಡಿಸಿಐಬಿ ಮತ್ತು ಬಂಟ್ವಾಳ ಪೊಲೀಸರಿಂದ ಬಂಧನಕ್ಕೊಳಗಾದ 9 ಮಂದಿಯಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿರುವ ನೌಶಾದ್ ಕೂಡ ಸೇರಿದ್ದಾರೆ. ಎಸ್‌ಡಿಪಿಐ ಪಕ್ಷ ದಲ್ಲಿ ಸಕ್ರಿಯರಾಗಿರುವ ಮಂಜನಾಡಿ ಸಮೀಪದ ಕಲ್ಕಟ್ಟದ ನೌಷಾದ್, ಪಿಎಫ್‌ಐ ಉಳ್ಳಾಲ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ